ಬಾಲಿವುಡ್ ನ ಹಾರರ್ ಮೂವಿ ಖ್ಯಾತಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಿನಿಮಾಗಳು ಅಂದ್ರೇ ಒಂದಷ್ಟು ಹಸಿಬಿಸಿ ದೃಶ್ಯಗಳು ಕಾಮನ್. ಈ ಭಾರಿ ಇಬ್ಬರು ಹಿರೋಯಿನ್ ಗಳ ರೋಮಾನ್ಸ್ ಸದ್ದು ಮಾಡಿದ್ದು, ತೆರೆಗೆ ಬರಲು ಸಿದ್ಧವಾಗಿರೋ ಡೇಂಜರ್ ಸಿನಿಮಾದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ರಾಮ್ ಗೋಪಾಲ್ ವರ್ಮ ಇದೇ ಮೊದಲ ಬಾರಿಗೆ ಲೆಸ್ಬಿಯನ್ ಕ್ರೈಂ ಹಾಗೂ ಆಕ್ಷ್ಯನ್ ಸಿನಿಮಾವೊಂದಕ್ಕೆ ಆಕ್ಷ್ಯನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಡೇಂಜರ್ ಎಂದು ಹೆಸರಿಡಲಾಗಿದೆ.

ಈ ಸಿನಿಮಾ 2021 ರ ಜೂನ್ 12 ರಂದು ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ.

ಚಿತ್ರದಲ್ಲಿ ಇಬ್ಬರು ಹಿರೋಯಿನ್ ಗಳಿದ್ದು, ಕತೆ ತಕ್ಕಂತೆ ಲೆಸ್ಬಿಯನ್ ರೋಮಾನ್ಸ್ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ಅಭಿನಯಿಸಿದ್ದಾರೆ.

ಈ ಹಾಟ್ ಹಾಟ್ ಪೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು, ಪಡ್ಡೆಗಳ ಹೃದಯ ಬಡಿತ ಹೆಚ್ಚಿಸಿದೆ.

ಒರಿಸ್ಸಾ ಮೂಲದ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನಾಯಕಿ ಪಾತ್ರಗಳಲ್ಲಿದ್ದು,ಇಬ್ಬರು ಪೋಟೋಗಳು ಮತ್ತೇರಿಸುವಂತಿದೆ.

ಪೋಟೋ ನೋಡಿದ ಪಡ್ಡೆಗಳು ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದು, ಕೊರೋನಾ ಎರಡನೇ ಅಲೆಯ ಕಾರಣಕ್ಕೆ ಸಿನಿಮಾ ರಿಲೀಸ್ ಮುಂದೂಡಿಕೆಯಾಗೋ ಸಾಧ್ಯತೆ ಇದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ಪೋಟೋಗಳನ್ನು ನೋಡಿ.