ಕೋವಿಡ್ ಲಸಿಕೆ ತೆಗೆದುಕೊಂಡವರೆಲ್ಲ 2 ವರ್ಷದಲ್ಲಿ ಸಾಯುತ್ತಾರೆ…! ಆತಂಕ ಸೃಷ್ಟಿಸಿದ ಸುದ್ದಿಗೆ ಸಿಕ್ಕಿದೆ ಸ್ಪಷ್ಟನೆ…!!

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ಭಾರತವನ್ನು ಸಂಕಷ್ಟಕ್ಕೆ ನೂಕಿದೆ. ಈ ಮಧ್ಯೆ ಲಸಿಕೆ ವಿತರಣೆ ಜನಜೀವನ ಸಹಜ ಸ್ಥಿತಿಗೆ ಮರಳುವ ಭರವಸೆ ಮೂಡಿಸುತ್ತಿರುವ ಬೆನ್ನಲ್ಲೇ, ಲಸಿಕೆ ತೆಗೆದುಕೊಂಡವರು 2 ವರ್ಷಕ್ಕೆ ಸಾಯುತ್ತಾರೆ ಎಂಬ ಸುಳ್ಳು ಸುದ್ದಿಯೊಂದು ದೇಶದಾದ್ಯಂತ ಹರಡಿದ್ದು, ಜನರಲ್ಲಿ ಗೊಂದಲ ಮೂಡಿಸಿದೆ.

https://kannada.newsnext.live/karanataka-puboard-puexam-postponed-july-puboard/

ಕೊರೋನಾ ಲಸಿಕೆ ಸ್ವೀಕರಿಸಿದವರೂ ಹೆಚ್ಚೆಂದರೇ ಎರಡು ವರ್ಷ ಬದುಕಬಹುದು ಎಂಬ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ರೆಂಚ್ ವೈರಾಲಜಿಸ್ಟ್ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾನಿಯರ್ ಹೆಸರಿನಲ್ಲಿ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

https://kannada.newsnext.live/sandalwood-upendra-twitter-followers-socialmedia-realstar/

ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಡಿರುವ ಈ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸುದ್ದಿಮೂಲವನ್ನು ಪರಿಶೀಲನೆ ನಡೆಸಿದೆ. ಅಷ್ಟೇ ಅಲ್ಲ  ಇದೊಂದು ಫೇಕ್ ಹೇಳಿಕೆ. ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಂಟಾನಿಯರ್ ಹೆಸರಿನಲ್ಲಿ ಈ ಹೇಳಿಕೆಯನ್ನು ಹಬ್ಬಿಸಲಾಗಿದೆ ಎಂಬ ಸಂಗತಿಯನ್ನು ಬೆಳಕಿದೆ ತಂದಿದೆ.

ಪ್ರೆಸ್ ಇನ್ಪಾರ್ಮೆಷನ್ ಬ್ಯುರೋ ಕೂಡ ಸ್ಪಷ್ಟನೆ ನೀಡಿದ್ದು, ಇದೊಂದು ಆಧಾರ ರಹಿತವಾದ ಹಾಗೂ ಕಿಡಿಗೇಡಿ ಹೇಳಿಕೆ. ಇದು ಲಸಿಕೆಯ ಬಗ್ಗೆ ಅಪಪ್ರಚಾರ ಮಾಡುವ ಹುನ್ನಾರ ಹೊಂದಿದೆ. ಹೀಗಾಗಿ ಇಂತಹ ವದಂತಿಗಳನ್ನು ಯಾರು ನಂಬಬೇಡಿ ಹಾಗೂ ವದಂತಿಯನ್ನು ಹರಡಲು ಮುಂಧಾಗಬೇಡಿ ಎಂದು ಮನವಿ ಮಾಡಿದೆ.

ಈ ಹಿಂದೆಯೂ ಕೊರೋನಾ ಲಸಿಕೆಗಳ ಬಗ್ಗೆ ಹಲವಾರು ವದಂತಿಗಳನ್ನು ಹರಡಿಸಲಾಗಿತ್ತು. ಲಸಿಕೆ ಪಡೆದರೇ ಮಕ್ಕಳಾಗಲ್ಲ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.ಇದೀಗ ಈ ಆತಂಕಕಾರಿ ಸಂಗತಿ ವೈರಲ್ ಆಗಿದ್ದು, ಕೇಂದ್ರ ಸರ್ಕಾರ ಇದು ಸುಳ್ಳು ಎಂಬ ಸ್ಪಷ್ಟನೆ ನೀಡಿ ಜನರ ಆತಂಕಕ್ಕೆ ತೆರೆ ಎಳೆದಿದೆ.

Comments are closed.