ಮಗಳ ಜೊತೆ ಹನಿಮೂನ್ ಹೋದ ಬಾಲಿವುಡ್ ನಟಿ…! ವೈರಲ್ ಆಯ್ತು ದಿಯಾ ಮಿರ್ಜಾ ಪೋಟೋಸ್…!!

ಬಾಲಿವುಡ್ ನಲ್ಲಿ ಎರಡನೇ ಮದುವೆ,ಮೂರನೇ ಮದುವೆ ಎಲ್ಲಾ ಕಾಮನ್. ಆದರೆ ಹೀಗೆ ಎರಡನೇ ಮದುವೆಯಾಗಿ ಹನಿಮೂನ್ ಹೋದ ನಟಿಮಣಿಯೊಬ್ಬಳು  ಜೊತೆಗೆ ಮಲಮಗಳನ್ನು ಕರೆದೊಯ್ಯುವ ಮೂಲಕ ಅಚ್ಚರಿ ಮೂಡಿಸಿದ್ದು, ಪೋಟೋಸ್ ವೈರಲ್ ಆಗಿದೆ.

ಬಾಲಿವುಡ್ ನಟಿ ದಿಯಾ ಮಿರ್ಜಾ ಇತ್ತೀಚಿಗಷ್ಟೇ ತಾವು ಮೆಚ್ಚಿದ ಉದ್ಯಮಿ ಜೊತೆ  ಸಪ್ತಪದಿ ತುಳಿದಿದ್ದರು. 39 ನೇ ವರ್ಷದ ದಿಯಾ ಮಿರ್ಜಾಗೆ ಇದು ಎರಡನೇ ವಿವಾಹ.  ದಿಯಾ ಎರಡನೇ ಭಾರಿಗೆ ವರಿಸಿದ ವೈಭವ್ ರೇಖಿಗೂ ಇದು ಎರಡನೆ ಮದುವೆ. ಹೀಗೆ ಎರಡನೇ ಮದುವೆಯಾದ ದಿಯಾ ಮಿರ್ಜಾ ಪತಿ ವೈಭವ್ ರೇಖಿ ಜೊತೆ ಹನಿಮೂನ್ ಗೆ ಮಾಲ್ಡೀವ್ಸ್ ಗೆ ಹಾರಿದ್ದರು.

ಆದರೆ ಕೇವಲ ಪತಿ ಮಾತ್ರವಲ್ಲದೇ ಅವರ ಪುತ್ರಿಯನ್ನು  ಹನಿಮೂನ್ ಗೆ ಕರೆದೊಯ್ದಿದ್ದಾರೆ. ಮಾಲ್ಡೀವ್ಸ್ ನ ನೀಲಿ ನೀಲಿ ಸಮುದ್ರದಲ್ಲಿ  ಮಲಮಗಳೊಂದಿಗೆ ದಿಯಾ ಮಿರ್ಜಾ ನೀರಾಟವಾಡುತ್ತ ಸಖತ್ ಎಂಜಾಯ್ ಮಾಡಿದ್ದು, ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗಂಟೆಗೂ ಅಧಿಕ ಕಾಲ ಡಾಲ್ಫಿನ್ ಗಳ ಜೊತೆ ಸಮಯ ಕಳೆದವು. ಸಮುದ್ರದ ನೀರೆಂದರೇ ಮ್ಯಾಜಿಕ್ ಇದ್ದಂತೆ ಎಂದಿರುವ ದಿಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ದಿಯಾ ಪೋಟೋಗಳಿಗೆ ಸಖತ್ ಲೈಕ್ಸ್ ಬಂದಿದ್ದು, ಜನರು ದಿಯಾ ಅವರು ಮಲಮಗಳನ್ನು ಹನಿಮೂನ್ ಗೆ ಕರೆದೊಯ್ದಿರುವುದನ್ನು ಮೆಚ್ಚಿಕೊಂಡಿದ್ದಾರೆ.

ದಿಯಾ ಮಿರ್ಜಾ,  ದಿಲ್ಲಿ ಮೂಲದ ಉದ್ಯಮಿ ಸಾಹಿಲ್ ಸಂಘರನ್ನು ಮೆಚ್ಚಿ ಮದುವೆಯಾಗಿದ್ದರು.

https://www.instagram.com/p/CM99SUzjAaL/?utm_source=ig_web_copy_link

ಆದರೆ 11 ವರ್ಷಗಳ ದಾಂಪತ್ಯದ ಬಳಿಕ ಸಾಹಿಲ್ ದಿಯಾ 2019 ರಲ್ಲಿ ದೂರವಾಗಿದ್ದರು. ಇದೀಗ ದಿಯಾ ಮಿರ್ಜಾ ತಮ್ಮ 39 ವಯಸ್ಸಿನಲ್ಲಿ ಎರಡನೇ ಮದುವೆಯಾಗಿದ್ದು, ಮಲಮಗಳೊಂದಿಗೆ ಹನಿಮೂನ್ ಎಂಜಾಯ್ ಮಾಡಿ ಬಾಲಿವುಡ್ ಮುಂದಿ ಹುಬ್ಬೇರಿಸುವಂತೆ ಮಾಡಿದ್ದಾರೆ.

Comments are closed.