ಪೋಟೋ ಹಂಚಿಕೊಳ್ಳೋ ಮುನ್ನ ಸ್ವಲ್ಪ ನಾಚಿಕೆ ಇರಲಿ…! ಸೆಲೆಬ್ರೆಟಿಗಳಿಗೆ ನವಾಜುದ್ದೀನ್ ಸಿದ್ಧಿಕಿ ಪಾಠ….!

ದೇಶಕ್ಕೆ ದೇಶವೇ ಕೊರೋನಾ ಎರಡನೇ ಅಲೆಗೆ ನಲುಗಿ ಹೋಗಿದೆ. ಜನರು ಲಾಕ್ ಡೌನ್ ನಿಂದ  ಬದುಕಿಗಾಗಿ, ಕೊರೋನಾ ಸೋಂಕಿತರು ಮೆಡಿಸಿನ್ ಹಾಗೂ ಆಕ್ಸಿಜನ್ ಗಾಗಿ ಪರದಾಡುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ಸೇರಿದಂತೆ ಸಿನಿ ಸೆಲೆಬ್ರೆಟಿಗಳು  ಕೊರೋನಾದಿಂದ ಬಚಾವಾಗಲು ಹಾಗೂ ತಮ್ಮ ಫ್ರೀ ಟೈಂ ಎಂಜಾಯ್ ಮಾಡಲು ವಿದೇಶಗಳಿಗೆ ಹಾರುತ್ತಿದ್ದಾರೆ.

ವಿದೇಶಗಳಿಗೆ ಹಾರುತ್ತಿರುವ ಸೆಲೆಬ್ರೆಟಿಗಳು ತಮ್ಮ ವಿದೇಶ ಪ್ರಯಾಣವೇ ದೊಡ್ಡ ಸಾಧನೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ತಿದ್ದಾರೆ. ಇದನ್ನು ಬಾಲಿವುಡ್ ನಟ ನವಾಜುದ್ಧೀನ್ ಸಿದ್ಧಿಕಿ ಖಂಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಸ್ವಲ್ಪ ನಾಚಿಕೆ  ಇರಲಿ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ನವಾಜುದ್ಧೀನ್ ಸಿದ್ಧಿಕಿ, ಇಡೀ ವಿಶ್ವವೇ ಸಂಕಷ್ಟದಲ್ಲಿರುವಾಗ ಸೆಲೆಬ್ರೆಟಿಗಳು ತಮ್ಮ ವೆಕೇಶನ್ ಪೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.  ಜನರ ಬಳಿ ಊಟಕ್ಕೆ ದುಡ್ಡಿಲ್ಲ. ಇವರು ಹಣ ಪೋಲು ಮಾಡುತ್ತಿದ್ದಾರೆ.  ಸ್ವಲ್ಪವಾದರೂ ಮಾನವೀಯತೆ ಇರಲಿ. ನಿಮಗೆ ನಾಚಿಕೆ ಆಗಬೇಕು.

ದೇಶದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಸಾಧ್ಯವಾದಷ್ಟು ಜನರಿಗೆ ಕೈಲಾದ ಸಹಾಯ ಮಾಡಿ. ಅದನ್ನು ಬಿಟ್ಟು  ಜನರನ್ನು ನಿಮ್ಮ ಐಷಾರಾಮಿ ಬದುಕು ತೋರಿಸಿ ಅಣಕಿಸಬೇಡಿ ಎಂದಿದ್ದಾರೆ.

ನವಾಜುದ್ಧೀನ್ ಸಿದ್ಧಿಕಿ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್  ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಜನರು ಸಹಮತ ವ್ಯಕ್ತಪಡಿಸಿದ್ದಾರೆ.ಜನರು ತಮ್ಮ ದುಡಿಮೆಯಲ್ಲಿ ಸಿನಿಮಾ ನೋಡಿ ನಟರನ್ನು ಬೆಳೆಸಿದ್ದಾರೆ. ಆದರೆ  ಸಿನಿಮ ನಟರು ದೇಶದ ಜನಕ್ಕೆ ಸಂಕಷ್ಟಬಂದಾಗ ತಾವು ಸೇಫ್ ಆಗಿರೋದನ್ನು ನೋಡಿಕೊಂಡು ಸ್ವಾರ್ಥಿಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಆಲಿಯಾ ಭಟ್ ರಣವೀರ್ ಕಪೂರ್, ಜಾಹ್ನವಿ ಕಪೂರ್, ದೀಪಿಕಾ ಪಡುಕೋಣೆ ರಣವೀರ್ ಸೇರಿದಂತೆ ಹಲವರು ಕೊರೋನಾ ಹಿನ್ನೆಲೆಯಲ್ಲಿ ಮುಂಬೈ ಬಿಟ್ಟು ಬೇರೆಡೆ ಹಾರಿದ್ದು ಸೋಷಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿದ್ದರು.

Comments are closed.