ಸೋಮವಾರ, ಜೂನ್ 16, 2025
HomeBreakingಬಾಲಿವುಡ್ ನಟಿ ಬ್ಯಾನ್ ಮಾಡಿದ ಡಿಸೈನರ್ಸ್….! ಸಹೋದರಿ ಪರ ನಿಂತ ರಂಗೋಲಿ ಚಂದೇಲ್….!!

ಬಾಲಿವುಡ್ ನಟಿ ಬ್ಯಾನ್ ಮಾಡಿದ ಡಿಸೈನರ್ಸ್….! ಸಹೋದರಿ ಪರ ನಿಂತ ರಂಗೋಲಿ ಚಂದೇಲ್….!!

- Advertisement -

ಟ್ವೀಟ್ ಸಂಸ್ಥೆ ಬಾಲಿವುಡ್ ನಟಿ ಕಂಗನಾ ರನಾವುತ್ ಟ್ವೀಟ್ ಅಕೌಂಟ್ ನ್ನು ಶಾಶ್ವತವಾಗಿ ರದ್ದುಗೊಳಿಸಿದ ಬೆನ್ನಲ್ಲೇ ನಟಿಮಣಿಗೆ ಮತ್ತೊಂದು ಶಾಕ್ ಎದುರಾಗಿದೆ. ಬಾಲಿವುಡ್ ನ ಹೆಸರಾಂತ ಡಿಸೈನರ್ ಗಳು ಕಂಗನಾ ಜೊತೆ ಕೈಜೋಡಿಸುವುದಿಲ್ಲ ಎಂದಿದ್ದರೇ, ಅವರ್ಯಾರೋ ನಮಗೆ ಗೊತ್ತೇ ಇಲ್ಲ ಎಂದು ಕಂಗನಾ ಸಹೋದರಿ ರಂಗೋಲಿ ಚಾಂದೆಲ್ ಕುಟುಕಿದ್ದಾರೆ.

ಕಳೆದ ಎರಡು ದಿನಗಳಿಂದ ನಟಿ ಕಂಗನಾ ರನಾವುತ್ ಸುದ್ದಿಯಲ್ಲಿದ್ದಾರೆ. ದ್ವೇಷಪೂರಿತ ಶಬ್ದಗಳ ಬಳಕೆ ಕಾರಣಕ್ಕೆ ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಮಗಳ ಅನ್ವಯ ಕಂಗನಾ ಅಕೌಂಟ್ ಶಾಶ್ವತವಾಗಿ ರದ್ದಾಗಿದೆ. ಈ ಮಧ್ಯೆ ಕಂಗನಾ ಟ್ವೀಟರ್ ಕಾರಣಕ್ಕೆ ಸುದ್ದಿಯಾಗುತ್ತಿದ್ದಂತೆ ಆಕೆಯೊಂದಿಗಿನ ಡಿಸೈನರ್ ವ್ಯವಹಾರವನ್ನು ಕಡಿದುಕೊಳ್ಳುವುದಾಗಿ ಬಾಲಿವುಡ್ ನ ಖ್ಯಾತ ಡಿಸೈನರ್ ಗಳಾದ ಆನಂದ ಭೂಷಣ್ ಹಾಗೂ ರಿಮ್ ಜಿಮ್ ದಾಡು ಹೇಳಿದ್ದಾರೆ.

ಡಿಸೈನರ್ ಆನಂದ ಭೂಷಣ್, ಇಂದು ನಡೆದ ಘಟನೆಯ ಬಳಿಕ ಕಂಗನಾ ರನಾವುತ್ ಜೊತೆಗಿನ ಎಲ್ಲ ಸಂಬಂಧವನ್ನು ಕಡಿದುಕೊಳ್ಳುತ್ತೇವೆ. ಅವರ ಸಹಯೋಗದಲ್ಲಿ ಯಾವುದೇ ಕೆಲಸ ಮಾಡುವುದಿಲ್ಲ ಮತ್ತು ಇದುವರೆಗೆ ಕೆಲಸ ಮಾಡಿದ ಪೋಟೋಗಳನ್ನು ಡಿಲೀಟ್ ಮಾಡುತ್ತೇವೆ ಎಂದು ಪ್ರಕಟಿಸಿದ್ದಾರೆ.

ಭವಿಷ್ಯದಲ್ಲಿ ಅವರ ಜೊತೆ ಯಾವುದೇ ಪ್ರಾಜೆಕ್ಟ್ ಗೂ ಕೆಲಸ ಮಾಡಲ್ಲ ಎಂದಿರುವುದಲ್ಲದೇ, ನಾವು ದ್ವೇಷದ ಯಾವುದೇ ಸಂಗತಿಯನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಇನ್ನು ಕಂಗನಾ ಬಗ್ಗೆ ಟ್ವೀಟ್ ಮಾಡಿರುವ ರಿಮ್ ಜಿಮ್ ಒಳ್ಳೆಯ ಕೆಲಸ ಮಾಡಲು ಯಾವತ್ತು ವಿಳಂಬ ಮಾಡಬಾರದು.ಹೀಗಾಗಿ ಕಂಗನಾ ಜೊತೆಗಿನ ಎಲ್ಲ ಪೋಟೋ ಡಿಲೀಟ್ ಮಾಡುತ್ತಿದ್ದೇವೆ ಎಂದಿದ್ದಾರೆ.

ಆದರೆ ಈ ಡಿಸೈನರ್ ಗಳ ಪೋಸ್ಟ್ ಹಾಗೂ ನಿರ್ಧಾರ ಕೇವಲ ಪ್ರಚಾರದ ಗಿಮಿಕ್ ಎಂದಿರುವ ಕಂಗನಾ ರನಾವುತ್ ಸಹೋದರಿ ರಂಗೋಲಿ ಚಂದೇಲ್ ಇವರ್ಯಾರು ನಮಗೆ ಗೊತ್ತಿಲ್ಲ. ಕಂಗನಾ ಯಾವತ್ತು ಇವರೊಂದಿಗೆ ಕೆಲಸ ಮಾಡಿಲ್ಲ. ಸಣ್ಣ ಡಿಸೈನರ್ ಗಳು ತಮ್ಮನ್ನು ತಾವು ಪ್ರಮೋಟ್ ಮಾಡಿಕೊಳ್ಳಲು ಕಂಗನಾ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲ ಡಿಸೈನರ್ ಗಳ ವಿರುದ್ಧ ನಾವು ಕೋರ್ಟ್ ನಲ್ಲಿ ಮೊಕದ್ದಮೆ ಹೂಡುತ್ತೇವೆ. ಅವರು ನ್ಯಾಯಾಲಯದಲ್ಲೇ ನಾವು ಯಾವಾಗ ಅವರ ಉತ್ಪನ್ನ ಅಥವಾ ವಸ್ತ್ರ ಬಳಸಿದ್ದೇವೆ ಎಂಬುದನ್ನು ನ್ಯಾಯಾಲಯಕ್ಕೆ ಸಾಬೀತುಪಡಿಸಲಿ ಎಂದು ರಂಗೋಲಿ ಸವಾಲು ಒಡ್ಡಿದ್ದಾರೆ.

RELATED ARTICLES

Most Popular