ತೇಜಸ್ವಿ ಸೂರ್ಯ ಉಲ್ಲೇಖಿಸಿದ ಆರೋಗ್ಯ ಮಿತ್ರ ಸಿಬ್ಬಂದಿ ಆಯ್ಕೆಯಲ್ಲಿ ನಡೆದಿದೆ ಭ್ರಷ್ಟಾಚಾರ ..?

ಬೆಂಗಳೂರು : ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಬಯಲಾದ ಬೆನ್ನಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದೆ. ಅದ್ರಲ್ಲೂ ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ಧಂದೆ ಹಿಂದೆ ಆರೋಗ್ಯ ಮಿತ್ರರ ಕೈವಾಡ ಇರುವುದಾಗಿ ನೇರವಾಗಿ ಆರೋಪಿಸಿದ್ದರು. ಇದೀಗ ಸಿಬ್ಬಂದಿ ನೇಮಕಾತಿ ಯಲ್ಲೂ ಭ್ರಷ್ಟಾಚಾರದ ಮಾತುಗಳು ಕೇಳಿಬಂದಿದೆ.

ಆರೋಗ್ಯ ಮಿತ್ರರ ಆಯ್ಕೆಯ ಮಾನದಂಡವನ್ನು ಕೂಡ  ಸಂಸದ ತೇಜಸ್ವಿ ಸೂರ್ಯ ಸ್ಥಳದಲ್ಲಿಯೇ ಪ್ರಶ್ನಿಸಿದ್ದರು. ಆದರೆ ಆಂತರಿಕ ವರದಿಗಳ ಪ್ರಕಾರ ಈ ಆರೋಗ್ಯ ಮಿತ್ರರ  ನೇಮಕದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಬಹುದೊಡ್ಡ ಹಗರಣಗಳು ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ಸುವರ್ಣ ಆರೋಗ್ಯ ಟ್ರಸ್ಟ್ ಉನ್ನತ ಅಧಿಕಾರಿಗಳು ತಮಗೆ ಬೇಕಾದ ವರನ್ನು ಆರೋಗ್ಯ ಮಿತ್ರರನ್ನಾಗಿ ನೇಮಕ ಮಾಡಿಕೊಂಡಿರುವ ಬಗ್ಗೆ ಹಿಂದಿರುವ ಉದ್ಯೋಗಿಗಳು ಆಂತರಿಕವಾಗಿ ಆರೋಪಿಸುತ್ತಾ ಬಂದಿದ್ದರು. ಆದರೆ ಹಳೆಯ ವ್ಯವಸ್ಥಾಪಕ ನಿರ್ದೇಶಕ ರುಗಳು ತಮಗೆ ಬೇಕಾದವರನ್ನು ಎಲ್ಲಾ ಮಾನದಂಡ ಗಳನ್ನು ಗಾಳಿಗೆ ತೂರಿ ನೇಮಕ ಮಾಡಿದ್ದಾರೆಂಬುದು ಆಂತರಿಕ ಮಾಹಿತಿಗಳು ಹೇಳಿದೆ. ಇದನ್ನು ತಿಳಿದು ಪ್ರಸ್ತುತ ಆರೋಗ್ಯ ಸಚಿವರು, ಹೆಚ್ಚು ಗಮನ ಹರಿಸಿಲ್ಲ ಎಂಬುದು ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಿಬಿಎಂಪಿ ಹಾಗೂ ಆರೋಗ್ಯ ಮಿತ್ರರು ಜೊತೆಯಾಗಿ ಈ ಬೆಡ್  ಬ್ಲಾಕಿಂಗ್ ದಂದೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಸಂಸದ ತೇಜಸ್ವಿ ಸೂರ್ಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಆದರೆ ಇದರ ಹಿಂದೆ ಬಹಳಷ್ಟು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ತಿಳಿದುಬಂದಿದೆ. ಸಂಸದ ತೇಜಸ್ವಿ ಸೂರ್ಯ ಇನ್ನಷ್ಟು ಇದನ್ನ ಆಗಬೇಕಾದ ಅಗತ್ಯ ಇದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಆರೋಗ್ಯ ಮಿತ್ರರ ಮತ್ತು ಬೆಡ್ ಬ್ಲಾಕಿಂಗ್ ಬಗ್ಗೆ ವಿರೋಧ ಪಕ್ಷ ಸುಮ್ಮನಿದ್ದು ಸಾರ್ವಜನಿಕರಲ್ಲಿ ಅಚ್ಚರಿ ಹುಟ್ಟಿಸಿದೆ. ಆದರೆ ವಿರೋಧ ಪಕ್ಷದ ಕೆಲವು ನಾಯಕರುಗಳು ಈ ಆರೋಗ್ಯ ಮಿತ್ರರ ನೇಮಕದ ಹಿಂದೆ ಇದ್ದಾರೆ ಎಂಬುದು ಉನ್ನತ ಮೂಲಗಳ ಮಾಹಿತಿಗಳಿಂದ ತಿಳಿದುಬಂದಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಸಾವಿರಾರು ಜನರ ಸಾವಿಗೆ ಕಾರಣರಾದ ಇಂತಹ ದುರುಳರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ.

Comments are closed.