ಸ್ವಂತ ದುಡ್ಡಿನಿಂದ ಆಕ್ಸಿಜನ್ ಒದಗಿಸಲು ಮುಂದಾದ ಸಂಸದೆ…! ಇದು ರಾಜಕೀಯ ಮಾಡೋ ಸಮಯವಲ್ಲ ಎಂದ ಸುಮಲತಾ…!!

ಕೆಲದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿದ್ದೀಯಾ ಸುಮಕ್ಕ ಅಭಿಯಾನ ಆರಂಭಿಸಿದ್ದ ಕೆಲವರು ಸಂಸದೆ ಸುಮಲತಾ ವಿರುದ್ಧ ಸಮರ ಸಾರಿದ್ದರು. ಆದರೆ ಈ ಟೀಕೆಗೆ ತಮ್ಮ ಶೈಲಿಯಿಂದಲೇ ಉತ್ತರಿಸಿರುವ ಸಂಸದೆ ಸುಮಲತಾ ಜಿಲ್ಲೆಯ ಆಕ್ಸಿಜನ್ ಸಮಸ್ಯೆಗೆ ಸ್ಪಂದಿಸಿ ಸ್ವಂತ ದುಡ್ಡಿನಲ್ಲೇ ಜೀವನಾಶವ್ಯಕ ಆಮ್ಲಜನಕ ಪೊರೈಕೆಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ ಇದು ರಾಜಕೀಯ ಮಾಡೋ ಸಮಯವಲ್ಲ ಎಂದು ಎಚ್ಚರಿಸಿದ್ದಾರೆ.

ಚಾಮರಾಜನಗರದಲ್ಲಿ ನಡೆದ  ಆಕ್ಸಿಜನ್ ದುರಂತ ಎಲ್ಲ ಜಿಲ್ಲಾಢಳಿತಕ್ಕೆ ಚುರುಕು ಮುಟ್ಟಿಸಿದ್ದು,  ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಸಂಸದೆ ಸುಮಲತಾ ಜಿಲ್ಲೆಯ ಆಕ್ಸಿಜನ್ ಕೊರತೆಗೆ ತುರ್ತು ಸ್ಪಂದನೆ ನೀಡಿದ್ದಾರೆ. ಅಷ್ಟೇ ಅಲ್ಲ ಸದ್ಯ ಸಂಸದರ ನಿಧಿಯಲ್ಲಿ ಅನುದಾನವಿಲ್ಲದ ಕಾರಣ ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿನಿತ್ಯ ಅಗತ್ಯವಿರುವ 3 ಸಾವಿರ ಲೀಟರ ಆಕ್ಸಿಜನ್ ಒದಗಿಸಲು ಮುಂದಾಗಿದ್ದಾರೆ.

ಈ ಬಗ್ಗೆ ಸಂಸದೆ ಸುಮಲತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮಂಡ್ಯ ಜಿಲ್ಲೆಯ ಎಂಪಿಯಾಗಿ ಕೊರೋನಾ ಸಂಕಷ್ಟದಲ್ಲಿ ನನ್ನ ಹೋರಾಟ ಜಾರಿಯಲ್ಲಿದೆ. ನನ್ನ ಸ್ವಪ್ರಯತ್ನದಿಂದ ತಡೆರಹಿತವಾಗಿ ಸೇವೆ ಮುಂದುವರೆಯುತ್ತದೆ.  ಮಂಡ್ಯ ಜಿಲ್ಲೆಯ ಈಗಿನ ಮತ್ತು ಮುಂದಿನ ಅಗತ್ಯತೆಗಳು ನನ್ನ ಮೊದಲ ಆದ್ಯತೆ. ಇದು ರಾಜಕೀಯ ಮಾಡುವ ಸಮಯವಲ್ಲ. ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಡಿಎಚ್ಓ ಮಂಡ್ಯ ಜಿಲ್ಲೆಗೆ ಪ್ರತಿನಿತ್ಯ 3 ಸಾವಿರ ಲೀಟರ್ ಆಕ್ಸಿಜನ್ ಕೊರತೆ ಇರುವುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಸದ್ಯ ಸಂಸದರ ನಿಧಿಯಲ್ಲಿ ದುಡ್ಡಿಲ್ಲ. ನಿಧಿ ಸಂಗ್ರಹಕ್ಕೆ ವಿಳಂಬವಾಗಬಹುದು. ಹೀಗಾಗಿ ನನ್ನ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಪೊರೈಸುತ್ತಿದ್ದೇನೆ. ಯಾವುದೇ ಕಾರಣಕ್ಕೂ  ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು  ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಈಗ ಆಮ್ಲಜನಕ ತುಂಬಿಸಲು ಮೈಸೂರು,ರಾಮನಗರಕ್ಕೆ ಹೋಗಬೇಕಾದ ಸ್ಥಿತಿ ಇದೆ. ಹೀಗಾಗಿ ಶೀಘ್ರದಲ್ಲೇ ಮಂಡ್ಯದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೊರೋನಾ ಮೂರನೇ ಅಲೆ ಬರುವ ಮುನ್ನ ಜಿಲ್ಲೆಯಲ್ಲಿ 13000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟನೆ ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಇತ್ತೀಚಿಗಷ್ಟೇ ಕೊರೋನಾ ಎರಡನೇ ಅಲೆ ಬಂದಾಗಿನಿಂದ ಸಂಸದೆ ಸುಮಲತಾ ಮಂಡ್ಯದತ್ತ ಮುಖಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.ಇದಕ್ಕೆಲ್ಲ ತಾವೇನು ಮಾಡುತ್ತಿದ್ದೇವೆ ಎಂಬ ವಿವರದೊಂದಿಗೆ ಉತ್ತರ ರವಾನಿಸಿದ್ದಾರೆ ಸಂಸದೆ ಸುಮಲತಾ.

 

Comments are closed.