ಬಾಲಿವುಡ್ ನಟಿ ಕಂಗನಾ ರನಾವುತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ಟ್ವಿಟ್ಟರ್ ಖಾತೆ ರದ್ದಾದ ಕಾರಣಕ್ಕೆ ಮುಖಭಂಗ ಅನುಭವಿಸಿದ್ದ ಕಂಗನಾ, ಆ ಬೇಸರದಿಂದ ಚೇತರಿಸಿಕೊಳ್ಳುವ ಮುನ್ನವೇ ಆರೋಗ್ಯ ಕೈಕೊಟ್ಟಿದ್ದು, ಕಂಗನಾಗೆ ಕೊರೋನಾ ಪಾಸಿಟಿವ್ ಆಗಿದೆ.

ಟ್ವಿಟ್ಟರ್ ಖಾತೆಯಲ್ಲಿ ನಿಯಮ ಮೀರಿದ ಶಬ್ದಬಳಕೆ ಕಾರಣಕ್ಕೆ ಕಂಗನಾ ಖಾತೆಯನ್ನು ಟ್ವಿಟ್ಟರ್ ಶಾಶ್ವತವಾಗಿ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಕಂಗನಾ ಮುಂಬೈನಿಂದ ತಮ್ಮ ಹಿಮಾಚಲಪ್ರದೇಶ ನಿವಾಸಕ್ಕೆ ತೆರಳಲು ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಕಂಗನಾಗೆ ಕೊರೋನಾ ತಗುಲಿರುವ ಸಂಗತಿ ಬೆಳಕಿಗೆ ಬಂದಿದೆ.

ಟ್ವಿಟ್ಟರ್ ಅಕೌಂಟ್ ಕಳೆದುಕೊಂಡಿರುವ ಕಂಗನಾ ಈ ವಿಚಾರವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದು, ನನಗೆ ಎರಡು ದಿನದಿಂದ ಕೊವಿಡ್ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ನಾನು ಪರೀಕ್ಷೆಗೆ ಒಳಪಟ್ಟೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಹೋಂ ಕ್ವಾರಂಟೈನ್ ನಲ್ಲಿದ್ದೇನೆ ಎಂದಿದ್ದಾರೆ.
https://www.instagram.com/p/COmVsjTBQ9e/?igshid=mb75qrm7g3py
ಕಂಗನಾ ರನಾವುತ್ ಗೂ ಮುನ್ನ ಸೋನುಸೋದ್, ರಣ್ಬೀರ್ ಕಪೂರ್, ಆಲಿಯಾ ಭಟ್, ಅಕ್ಷಯ್ ಕುಮಾರ್,ದಿಪೀಕಾ ಪಡುಕೋಣೆ ಸೇರಿದಂತೆ ಹಲವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ.

ಕಂಗನಾಗೆ ಈ ಸೋಂಕು ತಗುಲಿರುವುದಾಗಿ ಹೇಳಿಕೊಂಡಿದ್ದಾರೆ. ಕೊರೋನಾದಿಂದ ಕಂಗನಾ ನಟನೆಯ ಬಹುನೀರಿಕ್ಷಿತ ಚಿತ್ರ ತಲೈವಿ ರಿಲೀಸ್ ಕೂಡ ಮುಂದಕ್ಕೆ ಹೋಗಿದೆ.
