ನವಾಬ್ ಮನೆತನಕ್ಕೆ ಮತ್ತೊಂದು ವಾರಸುದಾರನ ಆಗಮನವಾಗಲಿದ್ದು, ನಟ ಸೈಫ್ ಅಲಿಖಾನ್ ಹಾಗೂ ಬಾಲಿವುಡ್ ಬೇಬೋ ಕರೀನಾ ಕಪೂರ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ.

ಸಧ್ಯ ಗರ್ಭಿಣಿ ಕರೀನಾ ಕಪೂರ್ ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳನ್ನೆಲ್ಲ ಮುಗಿಸಿದ್ದರೂ ಮತ್ತೇ ಕ್ಯಾಮರಾ ಪೇಸ್ ಮಾಡೋದರಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಈಗ ಸಿನಿಮಾ ಶೂಟ್ ಬದಲು ಮೆಟರ್ನಟಿ ಹಾಗೂ ಬೇಬಿ ಪ್ರೊಡಕ್ಟ್ ಶೂಟ್ ಗಳಲ್ಲಿ ಕರೀನಾ ಕಪೂರ್ ತೊಡಗಿಸಿಕೊಂಡಿದ್ದು ಬೇಬಿ ಬಂಪ್ ಜೊತೆ ಕರೀನಾ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಜಾಹೀರಾತು ಶೂಟಿಂಗ್ ಸೆಟ್‌ನಲ್ಲಿ ಸಖತ್ ಎಂಜಾಯ್ ಮಾಡ್ತಿರೋ ಕರೀನಾ ಆ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ” ನಾವಿಬ್ಬರೂ ಈಗ ಸೆಟ್ “ನಲ್ಲಿದ್ದೇವೆ ಎಂದು ಪೋಸ್ಟ್ ಹಾಕಿದ್ದಾರೆ.

ಪುಮಾ ಇಂಡಿಯಾ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಜಾಹೀರಾತಿನಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದು, ಅಮೀರ ಖಾನ್ ಜೊತೆ ನಟಿಸಿದ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಕೆಲಸಗಳನ್ನು ಪೊರೈಸಿಕೊಟ್ಟ ಬಳಿಕ ಜಾಹೀರಾತು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

ಕಳೆದ ಅಗಸ್ಟ್ ನಲ್ಲಿ ಕರೀನಾ ಹಾಗೂ ಸೈಫ್ ಜೋಡಿ ತಾವು ಮತ್ತೊಮ್ಮೆ ತಂದೆ-ತಾಯಿ ಆಗುತ್ತಿರುವುದಾಗಿ ಘೋಷಿಸಿದ್ದು ಮುಂದಿನ ಮಾರ್ಚ್ ನಲ್ಲಿ ಸೈಫ್-ಕರೀನಾ ಮನೆಗೆ ಮತ್ತೊಬ್ಬ ಸದಸ್ಯರ ಸೇರ್ಪಡೆಯಾಗಲಿದ್ದಾರೆ.ನಟಿ ಅಮೃತಾ ಸಿಂಗ್ ಗೆ ಡಿವೋರ್ಸ್ ನೀಡಿದ ಬಳಿಕ ಕರೀನಾರನ್ನು ಮದುವೆಯಾದ ಸೈಫ್ ಗೆ ಇದು ನಾಲ್ಕನೇ ಮಗು ವಾಗಿದ್ದು ಕರೀನಾ ತೈಮೂರ್ ಬಳಿಕ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.