ಮತ್ತೊಮ್ಮೆ ಬಾಲಿವುಡ್ ನಲ್ಲಿ ರಾಮಾಯಣ ಸದ್ದು ಮಾಡುತ್ತಿದೆ. ರಾಮಾಯಣದ ಕತೆಯನ್ನು ತ್ರಿಡಿ ತಂತ್ರಜ್ಞಾನದಲ್ಲಿ ತೆರೆಗೆ ತರಲು ಸಿದ್ಧತೆ ನಡೆದಿದ್ದು ಹೃತಿಕ್ ರೋಶನ್ ತೆರೆಮೇಲೆ ಶ್ರೀರಾಮನಾಗಲಿದ್ದಾರೆ.

ನಿರ್ಮಾಪಕ ಮಧು ಮಂತೇನಾ ನಿರ್ದೇಶನದಲ್ಲಿ ರಾಮಾಯಣ ಸಿನಿಮಾ ಸೆಟ್ಟೇರುತ್ತಿದ್ದು ಅಂದಾಜು 300 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ.

ನಿತೇಶ್ ತಿವಾರಿ ನಿರ್ದೇಶನದಲ್ಲಿ ಬರಲಿರುವ ಈ ರಾಮಾಯಣ ಸಿನಿಮಾದಲ್ಲಿ ರಾಮಾಯಣದ ಎಲ್ಲ ಪ್ರಮುಖ ಅಂಶಗಳನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ನ ಎ ಕೆಟೆಗರಿಯ ನಟ-ನಟಿಯರನ್ನೇ ಆಯ್ಕೆ ಮಾಡಲಾಗುತ್ತಿದ್ದು, ಶ್ರೀರಾಮನಾದ ಹೃತಿಕ್ ಗೆ ನಟಿ ದೀಪಿಕಾ ಪಡುಕೋಣೆ ಸೀತೆಯಾಗಿ ಸಾಥ್ ನೀಡಲಿದ್ದಾರೆ.

ರಾಮಾಯಣದ ಸಂಪೂರ್ಣ ಕತೆಯನ್ನು ಎರಡು ಭಾಗದಲ್ಲಿ ತೆರೆಗೆ ತರೋದು ನಿರ್ಮಾಪಕರ ತೀರ್ಮಾನವಾಗಿದ್ದು, ಈಗಾಗಲೇ ಸಿದ್ಧತೆ ನಡೆದಿದೆ.

ಹಿಂದಿಯ ರಾಮಾಯಣದ ಜೊತೆಗೆ ಆದಿಪುರುಷ ಹೆಸರಿನಲ್ಲಿ ರಾಮಾಯಣದ ಕತೆ ಆಧರಿಸಿದ ಇನ್ನೊಂದು ಸಿನಿಮಾ ಸಿದ್ಧವಾಗುತ್ತಿದ್ದು ಇದರಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸುತ್ತಿದ್ದರೇ, ಸೀತೆಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.