ಬಿಬಿಎಂಪಿ ಚುನಾವಣೆ ಸಧ್ಯಕ್ಕಿಲ್ಲ….! ಕನಿಷ್ಟ 6 ತಿಂಗಳು ವಿಳಂಬ ಸಾಧ್ಯತೆ…!!

ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿಯುವ ಕನಸಿನಲ್ಲಿದ್ದ ಮೂರು ಪಕ್ಷಗಳಿಗೆ ನಿರಾಸೆ ಎದುರಾಗಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇನ್ನು ಆರು ತಿಂಗಳು ವಿಳಂಬವಾಗಲಿದೆ.

ಬಿಬಿಎಂಪಿಗೆ ಮುಂದಿನ ಆರು ತಿಂಗಳು ಚುನಾವಣೆ ನಡೆಯೋದಿಲ್ಲ ಎಂಬ ಸಂಗತಿಯನ್ನು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಖಚಿತಪಡಿಸಿದ್ದಾರೆ.

ಬಿಬಿಎಂಪಿ ಕೌನ್ಸಿಲರ್ ಗಳ ಸಂಖ್ಯೆಯನ್ನು 243 ಕ್ಕೆ ಹೆಚ್ಚಿಸಿದೆ. ಅಲ್ಲದೇ ಆರು ತಿಂಗಳ ಒಳಗೆ ಬಿಬಿಎಂಪಿ ಗಡಿ ರೇಖೆಗಳ ಪುನರ್ ವಿಂಗಡನೆ ಮಾಡಬೇಕಾಗಿದೆ. ಈಗಿನ ಗಡಿಯ ಹೊರಭಾಗದ ಒಂದು ಕಿಲೋಮೀಟರ್ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸರ್ಕಾರ ಸೂಚಿಸಿದೆ.

ಕೆಲ ಪಂಚಾಯತ್ ನ ಏರಿಯಾಗಳನ್ನು ನಗರದ ವ್ಯಾಪ್ತಿಗೆ ಸೇರಿಸಲು ಶಾಸಕರು ಮನವಿ ಮಾಡಿದ್ದಾರೆ. ಈ ಎಲ್ಲ ಸೂಚನೆ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಆ ಬಳಿಕ ಸರ್ಕಾರ ಅನುಮೋದನೆ ನೀಡಿದ ಬಳಿಕ ವಾರ್ಡ್ ಗಳ ಜನಸಂಖ್ಯೆ ಆಧರಿಸಿ ವಾರ್ಡ್ ವಿಂಗಡಿಸಿ ನೋಟಿಫೀಕೇಶನ್ ಹೊರಡಿಸಿ ಬಳಿಕ ಚುನಾವಣೆ ನಡೆಯಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಹೊಸ ಪ್ರದೇಶಗಳ ಸೇರ್ಪಡೆ,‌ಅಢಳಿತಾತ್ಮಕ ಬದಲಾವಣೆಗೆ ಕನಿಷ್ಟ ೬ ತಿಂಗಳು ಬೇಕಾಗುತ್ತದೆ. ಹೀಗಾಗಿ ಈ ಎಲ್ಲ ಪ್ರಕ್ರಿಯೆ ಬಳಿಕ ಚುನಾವಣೆ ನಡೆಯಲಿದೆ ಎಂದಿದ್ದಾರೆ.

Comments are closed.