ಸೋಮವಾರ, ಏಪ್ರಿಲ್ 28, 2025
HomeBreakingಸಂಕಷ್ಟಕ್ಕೆ ಸಿಲುಕಿದ್ರಾ ಸೈಫ್ ಅಲಿಕಾನ್ ಪುತ್ರಿ….! ನನಗೆ ಡ್ರಗ್ಸ್ ಕೊಟ್ಟಿದ್ದು ಸಾರಾ ಅಲಿಖಾನ್ ಎಂದ ರಿಯಾ...

ಸಂಕಷ್ಟಕ್ಕೆ ಸಿಲುಕಿದ್ರಾ ಸೈಫ್ ಅಲಿಕಾನ್ ಪುತ್ರಿ….! ನನಗೆ ಡ್ರಗ್ಸ್ ಕೊಟ್ಟಿದ್ದು ಸಾರಾ ಅಲಿಖಾನ್ ಎಂದ ರಿಯಾ ಚಕ್ರವರ್ತಿ…!!

- Advertisement -

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅನಾವರಣಗೊಂಡ ಬಾಲಿವುಡ್ ಡ್ರಗ್ ಮಾಫಿಯಾ ತನಿಖೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ನನಗೆ ಡ್ರಗ್ಸ್ ಕೊಟ್ಟಿದ್ದು ನಟಿ ಸಾರಾ ಅಲಿಖಾನ್ ಎನ್ನುವ ಮೂಲಕ ರಿಯಾ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಬಳಿಕ ಮುಂಬೈ ನಾರ್ಕೋಟಿಕ್ ಕ್ರೈಂ ಬ್ರ್ಯಾಂಚ್ ಬಾಲಿವುಡ್ ನ ಡ್ರಗ್ ಮಾಫಿಯಾದ ಬಗ್ಗೆ ತನಿಖೆ ಆರಂಭಿಸಿತ್ತು. ಈ ವೇಳೆ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಡೀಲರ್ ಆಗಿ ಕೆಲಸ ನಿರ್ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು.

ಸುಶಾಂತ್ ಸಿಂಗ್ ಅನುಮಾನಾಸ್ಪದ ಪ್ರಕರಣದಲ್ಲಿ ಜೈಲು ಸೇರಿದ ರಿಯಾ ಚಕ್ರವರ್ತಿ ಇತ್ತೀಚಿಗೆ ಹೊರಬಂದಿದ್ದಾರೆ. ಈ ಮಧ್ಯೆ ಡ್ರಗ್ ಮಾಫಿಯಾ ಪ್ರಕರಣದ  ತನಿಖಾ ವರದಿಯನ್ನು ಎನ್ಸಿಬಿ ಪೊಲೀಸರು ಸಿದ್ಧಪಡಿಸಿದ್ದು,ಇದರಲ್ಲಿ ರಿಯಾ ಚಕ್ರವರ್ತಿ ನೀಡಿರುವ ಸ್ಪೋಟಕ ಹೇಳಿಕೆ ದಾಖಲಾಗಿದೆ.

ಎನ್ ಸಿಬಿ ಅಧಿಕಾರಿಗಳ ಎದುರು ತಮಗೆ ಡ್ರಗ್ಸ್ ಸಿಕ್ಕಿತ್ತು ಎಂಬುದನ್ನು ಒಪ್ಪಿಕೊಂಡಿರುವ ರಿಯಾ ಚಕ್ರವರ್ತಿ, ನನಗೆ ಸಾರಾ ಅಲಿಖಾನ್, ಗಾಂಜಾ ಹಾಗೂ ವೋಡ್ಕಾವನ್ನು ನೀಡಿದ್ದರು ಎಂದು ಹೇಳಿಕೆ ಕೊಟ್ಟಿದ್ದಾರೆ.

ಸುರುಳಿಸುತ್ತಿದ ಸಿಗರೇಟ್ ನಂತಹ ಡೂಡಲ್ ನಲ್ಲಿ ಗಾಂಜಾ ಇಟ್ಟು ನನಗೆ ಸಾರಾ ನೀಡಿದ್ದರು ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ ಎನ್ನಲಾಗಿದೆ. ಸಾರಾ ಅಲಿಕಾನ್ ನಟ ಸೈಫ್ ಅಲಿಖಾನ್ ಹಾಗೂ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಪುತ್ರಿ.ಬಾಲಿವುಡ್ ನಟಿಯಾಗಿಯೂ ಗುರುತಿಸಿಕೊಂಡಿರುವ ಸಾರಾ ಅಲಿಖಾನ್,ಕಳೆದ ವರ್ಷ ಸುಶಾಂತ್ ಸಿಂಗ್ ಸಾವು ಹಾಗೂ ಡ್ರಗ್ಸ್ ಪ್ರಕರಣದಲ್ಲೂ ಎನ್ಸಿಬಿ ವಿಚಾರಣೆಗೆ ಹಾಜರಾಗಿದ್ದರು.

ಅಲ್ಲದೇ ಸಾರಾ ಹಾಗೂ ರಿಯಾ ನಡೆಸಿದ್ದ ವಾಟ್ಸಪ್ ಚಾಟ್ ಗಳು ಬಹಿರಂಗಗೊಂಡಿತ್ತು. ಸುಶಾಂತ್ ಸಿಂಗ್ ಜೊತೆಯೂ ಕಾಣಿಸಿಕೊಂಡಿದ್ದ ಸಾರಾ, ಒಮ್ಮೆ ಸುಶಾಂತ್ ಜೊತೆ ಥೈಲ್ಯಾಂಡ್ ಗೆ ಡೇಟಿಂಗ್ ಹೋಗಿ ಬಂದಿರುವುದಾಗಿಯೂ ಹೇಳಿಕೊಂಡಿದ್ದರು.

ಇದೀಗ ಸಾರಾ ಗಾಂಜಾ ಸರಬರಾಜು ಮಾಡಿರುವ ಹೇಳಿಕೆ ಆಧರಿಸಿ ಪೊಲೀಸರು ಆರೋಪಪಟ್ಟಿ ಸಿದ್ಧಪಡಿಸಿದ್ದು, ಮುಂದಿನ ದಿನಗಳಲ್ಲಿ ಸಾರಾ ಅಲಿಖಾನ್ ಗೆ ಸಂಕಷ್ಟ ಕಾದಿದೆ ಎನ್ನಲಾಗುತ್ತಿದೆ.

RELATED ARTICLES

Most Popular