ರಶ್ಮಿಕಾ ಬಗ್ಗೆ ಅಸಹ್ಯ ಕಮೆಂಟ್….! ಅಭಿಮಾನಿಗಳ ಅತಿರೇಕದ ವರ್ತನೆಗೆ ರಕ್ಷಿತ್ ಶೆಟ್ಟಿ ತಿರುಗೇಟು…!!

ಜನರಿಗೆ ಸಿನಿಮಾ ನಟ-ನಟಿಯರ ಪರ್ಸನಲ್ ಲೈಫ್ ಬಗ್ಗೆ ಕಮೆಂಟ್ ಮಾಡೋದು, ನಟಿಯರನ್ನು ಹೀಯಾಳಿಸೋದು ತುಂಬ ಇಷ್ಟದ ಕೆಲಸ. ಆದರೆ ಅಭಿಮಾನಿಗಳ  ಈ ಪ್ರವೃತ್ತಿಗೆ ಸಿಂಪಲ್ ಸ್ಟಾರ್ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಕಡಿವಾಣ ಹಾಕಿದ್ದು, ಮೊದಲು ಮಾನವರಾಗೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿಯ ಬಳಿಕ ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇಷ್ಟೇ ಅಲ್ಲ ವಿವಾಹ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಯಾವುದೋ ಕಾರಣಕ್ಕೆ ಕೊನೆಗೆ ಮದುವೆ ಮುರಿದು ಬಿದ್ದಿತ್ತು.

ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಪರಸ್ಪರ ದೂರವಾದರೂ ಅಭಿಮಾನಿಗಳು ರಶ್ಮಿಕಾರ ನಿರ್ಧಾರದ ಬಗ್ಗೆ ಟೀಕೆ ಮಾಡೋದನ್ನು ಬಿಟ್ಟಿಲ್ಲ. ರಕ್ಷಿತ್ ಶೆಟ್ಟಿ ಹುಟ್ಟಹಬ್ಬದ ಸಂದರ್ಭದಲ್ಲೂ ಇದೇ ಘಟನೆ ಪುನರಾವರ್ತನೆಯಾಗಿದೆ.

ನಟ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ 777 ಚಾರ್ಲಿ ತಂಡ ಟೀಸರ್ ರಿಲೀಸ್ ಮಾಡಿತ್ತು. ಈ ಕುರಿತು ಮಾತನಾಡಲು ನಟ ರಕ್ಷಿತ್ ಶೆಟ್ಟಿ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು.  ಈ ವೇಳೆ ಹಲವು ಅಭಿಮಾನಿಗಳು ರಶ್ಮಿಕಾ ಬಗ್ಗೆ ಪ್ರಶ್ನೆ ಮಾಡಿದ್ದಲ್ಲದೇ ರಶ್ಮಿಕಾರ ಬಗ್ಗೆ ಅಸಹ್ಯವಾಗಿ ಕಮೆಂಟ್ ಮಾಡಿದ್ದರು.

ಆದರೆ ಅಭಿಮಾನಿಗಳ  ಈ ಅತಿರೇಕದ ವರ್ತನೆಗೆ ಸಖತ್ ತಿರುಗೇಟು ಕೊಟ್ಟ ನಟ ರಕ್ಷಿತ್ ಶೆಟ್ಟಿ, ಇಲ್ಲಿ ಕೆಲವು ಕಮೆಂಟ್ಸ್ ಓದೋಕೆ ಹಿಂಸೆಯಾಗುತ್ತೆ. ನನ್ನ ಬಗ್ಗೆ ಅಲ್ಲ ಬೇರೊಬ್ಬರ ಬಗ್ಗೆ. ಆದರೆ ಮುಗಿದು ಹೋದ ಹಳೆ ವಿಚಾರಗಳನ್ನು ಮತ್ತೆ ಮತ್ತೆ ಕೆದಕಿ ಯಾರಿಗೂ ನೋವು ಮಾಡೋದು ಬೇಡ. ಅದನ್ನೆಲ್ಲ ಬಿಟ್ಟು ಬಿಡೋಣ.

ಯಾವುದೇ ವ್ಯಕ್ತಿಗೆ ಅಗೌರವ ಮಾಡೋದು ಬೇಡ. ನಮ್ಮ ಬಗ್ಗೆ ನಾವೇ ಅಸಹ್ಯ ಪಟ್ಟುಕೊಳ್ಳುವಂತಹ ಕಮೆಂಟ್ ಅನ್ನು ನಾನು ಯಾವ ಬಗ್ಗೆಯೂ ಮಾಡೋದು ಬೇಡ. ಮೊದಲು ಮಾನವರಾಗೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ ಮನವಿ ಬಳಿಕ ಬುದ್ಧಿಕಲಿತ ಕೆಲ ಅಭಿಮಾನಿಗಳು ತಾವು ರಶ್ಮಿಕಾ ಬಗ್ಗೆ ಮಾಡಿದ್ದ ಕಮೆಂಟ್ ಗಳನ್ನು ಡಿಲೀಟ್ ಮಾಡಿದ್ದಾರೆ. ಈ ಹಿಂದೆಯೂ ಸಾಕಷ್ಟು ಭಾರಿ ರಕ್ಷಿತ್ ಶೆಟ್ಟಿ ಲೈವ್ ಬಂದಾಗ ಅಥವಾ ರಕ್ಷಿತ್ ಶೆಟ್ಟಿ ಪೋಸ್ಟರ್ ಗಳಿಗೆ ಅಭಿಮಾನಿಗಳು ರಶ್ಮಿಕಾರನ್ನು ಟ್ಯಾಗ್ ಮಾಡಿ ಅಸಹ್ಯವಾಗಿ ಕಮೆಂಟ್ ಮಾಡುತ್ತಿದ್ದರು.

ಹೀಗಾಗಿ ಅಭಿಮಾನದ ಹೆಸರಿನಲ್ಲಿ ನಡೆಯುತ್ತಿದ್ದ ಈ ಅತಿರೇಕದ ವರ್ತನೆಗೆ ರಕ್ಷಿತ್ ಶೆಟ್ಟಿ ಕಡಿವಾಣ ಹಾಕಿದ್ದಾರೆ. ವೈಯಕ್ತಿಕವಾಗಿ ರಕ್ಷಿತ್ ಶೆಟ್ಟಿ ರಶ್ಮಿಕಾ ಪರ ಗೌರವ ಹೊಂದಿದ್ದು, ರಶ್ಮಿಕಾ ಸಾಧನೆಗಳ ವೇಳೆ ಇನ್ ಸ್ಟಾಗ್ರಾಂ, ಟ್ವೀಟ್ ಮೂಲಕ ಶುಭಹಾರೈಸುತ್ತಾರೆ.

Comments are closed.