ಮಂಗಳವಾರ, ಏಪ್ರಿಲ್ 29, 2025
HomeBreakingಸೋನುಸೂದ್ ಟ್ರಸ್ಟ್ ಹೆಸರಿನಲ್ಲೂ ವಂಚನೆ…! ಸೋಷಿಯಲ್ ಮೀಡಿಯಾದಲ್ಲಿ ವಂಚಕರಿದ್ದಾರೆ ಎಚ್ಚರ…..!!

ಸೋನುಸೂದ್ ಟ್ರಸ್ಟ್ ಹೆಸರಿನಲ್ಲೂ ವಂಚನೆ…! ಸೋಷಿಯಲ್ ಮೀಡಿಯಾದಲ್ಲಿ ವಂಚಕರಿದ್ದಾರೆ ಎಚ್ಚರ…..!!

- Advertisement -

ಕೊರೋನಾ ಇರಲಿ ಯಾವುದೇ ಸಂಕಷ್ಟ ಇರಲಿ ಒಂದಿಷ್ಟು ಜನರು ಸಹಾಯಕ್ಕೆ ಸದಾ ಸಿದ್ಧವಾಗಿ ನಿಂತಿದ್ದರೇ, ಇನ್ನೊಂದಿಷ್ಟು ಜನರು ಮಾತ್ರ ಮೋಸ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಇಲ್ಲೂ ಅಷ್ಟೇ  ಬಾಲಿವುಡ್ ನಟ ಸೋನುಸೂದ್ ಲಕ್ಷಾಂತರ ಜನರಿಗೆ ನೆರವಾಗಿದ್ದರೇ,  ಕೆಲ ವಂಚಕರು ಅವರ ಹೆಸರಿನಲ್ಲೂ ವಸೂಲಿಗೆ ನಿಂತಿದ್ದು, ಸ್ವತಃ ಸೋನು ಸೂದ್ ಈ ಬಗ್ಗೆ ಎಚ್ಚರಿಸಿದ್ದಾರೆ.

https://kannada.newsnext.live/orphaned-children-get-10-lakh-fd-andrapradesh-cm-jagamohanreddy/

ಕೊರೋನಾ ಮೊದಲನೆ ಅಲೆ ಹಾಗೂ ಎರಡನೇ ಅಲೆಯಲ್ಲೂ ಬಾಲಿವುಡ್ ನಟ ಸೋನು ಸೂದ್ ಅಕ್ಷರಷಃ ಜನರ ಪಾಲಿಗೆ ಆಪತ್ಬಾಂಧವರಂತೆ ನಿಂತಿದ್ದಾರೆ. ಆಕ್ಸಿಜನ್, ಮೆಡಿಸಿನ್, ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಸೇರಿದಂತೆ ಜನರಿಗೆ ಎಲ್ಲ ಅಗತ್ಯ ನೆರವು ನೀಡುತ್ತಿದ್ದಾರೆ.

ಸೋನುಸೂದ್ ಮಾಡುತ್ತಿರುವ ಈ ಮಾನವೀಯ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೆ ಗುರಿಯಾಗಿಸಿಕೊಂಡ ಕೆಲ ವಂಚಕರು ಸೋಷಿಯಲ್ ಮೀಡಿಯಾದಲ್ಲಿ ಸೋನುಸೂದ್ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಹಣ ಸಂಗ್ರಹಕ್ಕೆ ಮುಂಧಾಗಿದ್ದಾರೆ.

https://kannada.newsnext.live/sandalwood-kgf-1-villain-maran-passedaway-corona-covid-19/

ಸೋನುಸೂದ್ ಫೌಂಡೇಶನ್ ಹೆಸರಿನಲ್ಲಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ ವಂಚಕರ ತಂಡ.  ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ನಟ ಸೋನುಸೂದ್, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.

ಈ ಸೋನುಸೂದ್ ಟ್ರಸ್ಟ್ ಗೂ ನನಗೂ ಯಾವುದೇ ಸಂಬಂಧವಿಲ್ಲ.  ಈ ಬಗ್ಗೆ ಎಚ್ಚರಿಕೆಯಿಂದಿರಿ ಮತ್ತು ಇಂಥಹವರು ನಿಮ್ಮ ಬಳಿ ಬಂದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಂದಿದ್ದಾರೆ.

https://kannada.newsnext.live/question-paper-leak-case-kingpin-shivakumar-death-corona-virus/

ಸೋನುಸೂದ್ ಸಾರ್ವಜನಿಕರಿಗೆ ಸಹಾಯ ಮಾಡಲು ಮುಂಧಾಗಿದ್ದು, ಬಾಲಿವುಡ್ ನ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುವ ನಟರನ್ನು ಮೀರಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ ವಂಚಕರು ಅವರನ್ನು ಬಿಟ್ಟಿಲ್ಲ ಅನ್ನೋದು ವಿಷಾದದ ಸಂಗತಿ.

RELATED ARTICLES

Most Popular