ಭಾರತೀಯ ಸಿನಿರಂಗದ ಸೂಪರ್ ಸ್ಟಾರ್,ತಲೈವಾ ಖ್ಯಾತಿಯ ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಲಾಕ್ ಡೌನ್ ನಿಂದ ಚಿತ್ರೀಕರಣಕ್ಕೆ ಬಿಡುವು ಪಡೆದಿರುವ ರಜನಿಕಾಂತ್ ಸದ್ಯದಲ್ಲೇ ನಟನೆಗೆ ವಿದಾಯ ಹೇಳಲಿದ್ದಾರಾ? ಹೌದು ಅಂತಿದೆ ಸುದ್ದಿ ಮೂಲ.

ತಮ್ಮ 70 ನೇ ವಯಸ್ಸಿನಲ್ಲೂ ನಟನೆಯಲ್ಲಿ ತೊಡಗಿಕೊಂಡಿರುವ ರಜನಿಕಾಂತ್, ತಮ್ಮ 160 ನೇ ಸಿನಿಮಾ ಅಣ್ಣಾತೆ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಸತತವಾಗಿ ಅನಾರೋಗ್ಯ ಕಾಡುತ್ತಿರುವುದರಿಂದ ತಲೈವಾ ಅಣ್ಣಾತೆ ಸಿನಿಮಾದ ಜೊತೆ ತಮ್ಮ ನಟನೆಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.

ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಮಹತ್ವಾಕಾಂಕ್ಷಿಯಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಗೆ ಮೂತ್ರಪಿಂಡಗಳ ವೈಫಲ್ಯ ಕಾಡುತ್ತಿದೆ. ಹೀಗಾಗಿ ಈಗಾಗಲೇ ಹಲವು ಭಾರಿ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇದೇ ಕಾರಣಕ್ಕೆ ವೈದ್ಯರ ಸಲಹೆ ಮೇರೆಗೆ ರಜನಿಕಾಂತ್ ಸಕ್ರಿಯ ರಾಜಕಾರಣದಿಂದಲೂ ದೂರ ಉಳಿಯುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು. ಈಗ ಕೊರೋನಾದಂತಹ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸಿನಿಮಾ ಚಿತ್ರೀಕರಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಜನಸಂಪರ್ಕಕ್ಕೆ ಬರೋದು ಸೂಕ್ತ ಎಂದು ವೈದ್ಯರು ಹೇಳಿದ್ದಾರೆ.

ಈ ಕಾರಣಕ್ಕಾಗಿಯೇ ರಜನಿಕಾಂತ್ ಸದ್ಯದಲ್ಲೇ ಚಿತ್ರರಂಗಕ್ಕೆ ವಿದಾಯ ನಿರ್ಧಾರ ಪ್ರಕಟಿಸಲಿದ್ದಾರಂತೆ. ಅಣ್ಣಾತೆ ಸೆಟ್ ನಲ್ಲೂ ಭಾವುಕರಾದ ರಜನಿಕಾಂತ್ ಈ ಬಗ್ಗೆ ಸೂಕ್ಷ್ಮವಾಗಿ ಮುನ್ಸೂಚನೆ ನೀಡಿದ್ದಾರಂತೆ. ಒಂದೊಮ್ಮೆ ರಜನಿಕಾಂತ್ ನಟನೆಗೆ ವಿದಾಯ ಹೇಳಿದರೇ ಲಕ್ಷಾಂತರ ಅಭಿಮಾನಿಗಳು ನಿರಾಸೆಗೊಳ್ಳೋದು ಖಚಿತ.