ಕುಂದಾಪುರ : ಕೊಳವೆ ಬಾವಿ ಕೊರೆಯುವ ವೇಳೆಯಲ್ಲಿ 15 ಅಡಿ ಮಣ್ಣಿನಲ್ಲಿ ಸಿಲುಕಿದ್ದ ರೋಹಿತ್ ಖಾರ್ವಿ ಕೊನೆಗೂ ಬದುಕಿ ಬಂದಿದ್ದಾರೆ. ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಡೆದ ಕಾರ್ಯಚರಣೆಯಲ್ಲಿ ರೋಹಿತ್ ಖಾರ್ವಿಯನ್ನು ರಕ್ಷಿಸಿರೋ ಅಗ್ನಿಶಾಮಕ ಸಿಬ್ಬಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಮರವಂತೆಯಲ್ಲಿ ಕೊಳವೆ ಬಾವಿ ಕೊರೆಯುವ ವೇಳೆಯಲ್ಲಿ ಮಣ್ಣು ಕುಸಿತವಾಗಿತ್ತು. ಈ ವೇಳೆಯಲ್ಲಿ ಒಮ್ಮಿಂದೊಮ್ಮೆಲೆ ಮಣ್ಣು ಕುಸಿದಿದೆ. ಹೀಗಾಗಿ ರೋಹಿತ್ ಖಾರ್ವಿ ಸುಮಾರು 15 ಅಡಿಗಳಷ್ಟು ಆಳದ ಮಣ್ಣಿನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ಕೂಡಲೇ ಸ್ಥಳೀಯರು ಕಾರ್ಯಾಚರಣೆಗೆ ಇಳಿದ್ರೂ ಕೂಡ ಮಣ್ಣು ಕುಸಿಯೋದಕ್ಕೆ ಶುರುವಾಗಿತ್ತು. ಕೊನೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂಧಿ ಜನರನ್ನು ಘಟನಾ ಸ್ಥಳದಿಂದ ದೂರ ಕಳುಹಿಸಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ರೋಹಿತ್ ಖಾರ್ವಿಗೆ ಕೃತಕ ಆಮ್ಲಜನಕದ ಪೂರೈಕೆ ಮಾಡಲಾಗಿತ್ತು. ಜೆಸಿಬಿ ಯಂತ್ರದ ಸಹಾಯದಿಂದ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿ ರೋಹಿತ್ ಖಾರ್ವಿಯನ್ನು ರಕ್ಷಿಸಲಾಗಿದೆ.
ರೋಹಿತ್ ಖಾರ್ವಿ ರಕ್ಷಣೆ ಕಾರ್ಯಾಚರಣೆಯ ವಿಡಿಯೋ