ಉತ್ತರ ಪ್ರದೇಶ: (Boy fall into borewell) ಆರು ವರ್ಷದ ಬಾಲಕನೋರ್ವ ತೆರೆದ ಬೋರ್ ವೆಲ್ ಗೆ ಬಿದ್ದಿರುವ ಘಟನೆ ಕೋಟ್ಲಾ ಸಾದತ್ ಪ್ರದೇಶದ ಹಾಪುರದಲ್ಲಿ ಮಂಗಳವಾರ ನಡೆದಿದೆ. ಆಟವಾಡುತ್ತಿದ್ದಾಗ ಕಾಲು ಜಾರಿ ಬೋರ್ ವೆಲ್ ಗೆ ಬಿದ್ದಿದೆ ಎಂದು ವರದಿ ಮಾಧ್ಯಮಗಳು ತಿಳಿಸಿವೆ.
ಬೋರ್ ವೆಲ್ ಬಳಿಯಲ್ಲಿ ಆಟವಾಡುತ್ತಿದ್ದಾಗ ಆರು ವರ್ಷ ಬಾಲಕ ಕಾಲು ಜಾರಿ ಬೋರ್ ವೆಲ್ (Boy fall into borewell)ಗೆ ಬಿದ್ದಿದ್ದಾನೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಬಾಲಕನನ್ನು ರಕ್ಷಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡವು ಸ್ಥಳದಲ್ಲಿದ್ದು, ಬೋರ್ ವೆಲ್ ಗೆ ಆಮ್ಲಜನಕವನ್ನು ಕಳುಹಿಸಲಾಗುತ್ತಿದೆ. ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ ಹೊರತರುವ ಭರವಸೆಯನ್ನು ಅಧಿಕಾರಿಗಳು ಹೊಂದಿದ್ದಾರೆ.