Vikrant Rona in Oscar list: ಕಾಂತಾರ ಅಷ್ಟೇ ಅಲ್ಲ: ಆಸ್ಕರ್‌ ಲಿಸ್ಟ್‌ ನಲ್ಲಿದೆ ʻವಿಕ್ರಾಂತ್‌ ರೋಣʼ!

(Vikrant Rona in Oscar list) ಆಸ್ಕರ್‌ ಪ್ರಶಸ್ತಿಗೆ ಭಾರತದ ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಈ ಭಾರೀ ಕಾಂತಾರ ಅಷ್ಟೇ ಅಲ್ಲ, ಕನ್ನಡ ಇನ್ನೊಂದು ಸಿನಿಮಾ ಕೂಡ ಆಸ್ಕರ್‌ ರೇಸ್‌ ನಲ್ಲಿದೆ. ಈ ಬಾರಿ ಕನ್ನಡದ ಎರಡು ಸಿನಿಮಾಗಳು ಆಸ್ಕರ್‌ ಲಿಸ್ಟ್‌ ನಲ್ಲಿರುವುದು ಕನ್ನಡಿಗರ ಹೆಮ್ಮೆಯ ವಿಷಯ.

ಗಡಿಯನ್ನು ಬಿಟ್ಟು ಹೊರ ಹೋಗದ ಕನ್ನಡ ಸಿನಿಮಾಗಳು 2022 ರಲ್ಲಿ ಇಡೀ ವಿಶ್ವದಲ್ಲೇ ಗಮನ ಸೆಳೆದಿತ್ತು. ಕೆಜಿಎಫ್‌ ೨, ಕಾಂತಾರ ಹಾಗೇ ವಿಕ್ರಾಂತ್‌ ರೋಣ ಸಿನಿಮಾಗಳು ವಿಶ್ವದಾದ್ಯಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದವು. ಈ ಮೂರು ಸಿನಿಮಾಗಳಲ್ಲಿ ಕಾಂತಾರ ಹಾಗೂ ವಿಕ್ರಾಂತ್‌ ರೋಣ ಎರಡು ಸಿನಿಮಾಗಳು ಆಸ್ಕರ್‌ (Vikrant Rona in Oscar list) ಮೆಟ್ಟಿಲೇರಿದೆ.

ಆಸ್ಕರ್‌ ಲಿಸ್ಟ್‌ ನಲ್ಲಿ ಭಾರತದ ಒಂಬತ್ತು ಸಿನಿಮಾಗಳು ಪೈಪೋಟಿ ನಡೆಸುತ್ತಿದ್ದು, ಅವುಗಳಲ್ಲಿ ಎರಡು ಕನ್ನಡದ ಸಿನಿಮಾಗಳಿರುವುದು ಕನ್ನಡಿಗರಿಗೆ ಇನ್ನೊಂದು ವಿಶೇಷದ ಸಂಗತಿ.

ಈ ಬಾರಿ ಕಾಂತಾರ ಸಿನಿಮಾ ಜೊತೆಗೆ 2023 ರಲ್ಲಿ ನಡೆಯುವ ಆಸ್ಕರ್‌ ಪ್ರಶಸ್ತಿಯ ಪಟ್ಟಿಯಲ್ಲಿ ಕಿಚ್ಚ ಸುದೀಪ್‌ ಅಭಿನಯಿಸಿದ ವಿಕ್ರಾಂತ್‌ ರೋಣ ಸಿನಿಮಾ ಕೂಡ ಸೇರಿದೆ. ದೇಶ ವಿದೇಶಗಳಲ್ಲಿಯೂ ತೆರೆಕಂಡಿದ್ದ ಈ ಸಿನಿಮಾ ಜೋರಾಗಿಯೇ ಸದ್ದು ಮಾಡಿತ್ತು. ಅಲ್ಲದೇ ದಕ್ಷಿಣ ಭಾರತದ ನಾಲ್ಕು ಭಾಷೆ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಈ ಸಿನಿಮಾ ಡಬ್‌ ಆಗಿತ್ತು. ಇದೀಗ ಆಸ್ಕರ್‌ ರೇಸ್‌ ನಲ್ಲಿ ವಿಕ್ರಾಂತ್‌ ರೋಣ ಕೂಡ ಸೇರಿಕೊಂಡಿದ್ದು, ಪ್ರಶಸ್ತಿ ಗೆಲ್ಲಲು ಕಾಂತಾರ ಜೊತೆಗೆ ವಿಕ್ರಾಂತ್‌ ರೋಣ ಕೂಡ ಪೈಪೋಟಿಗೆ ಇಳಿದಿದೆ.

ವಿಶ್ವದಾದ್ಯಂತ ಸುಮಾರು ಮುನ್ನೂರ ಒಂದು ಸಿನಿಮಾಗಳು ಆಸ್ಕರ್‌ ಲಿಸ್ಟ್‌ ಗೆ ಆಯ್ಕೆಯಾಗಿದ್ದು, ಅದರಲ್ಲಿ ಭಾರತದ ಒಂಬತ್ತು ಸಿನಿಮಾಗಳು ಇವೆ. ಇದರಲ್ಲಿ ದಕ್ಷಿಣ ಸಿನಿಮಾಗಳದ್ದು ಮೇಲುಗೈ. ಆರ್‌ ಆರ್‌ ಆರ್‌, ಕಾಂತಾರ, ವಿಕ್ರಾಂತ್‌ ರೋಣ, ರಾಕೆಟ್ರಿ ದಿ ನಂಬಿ ಎಫೆಕ್ಟ್‌, ಇರವಿನ್‌ ನಿಳಲ್‌, ದಿ ಕಾಶ್ಮೀರಿ ಫೈಲ್ಸ್‌, ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗಳು ಟಾಪ್‌ ಪಟ್ಟಿಯಲ್ಲಿವೆ.

ಇದನ್ನೂ ಓದಿ : Movies released on sankranthi: ಸಂಕ್ರಾಂತಿಯಂದು ತೆರೆಗೆ ಬರಲಿವೆ ಈ ನಾಲ್ಕು ಸಿನಿಮಾ

ಇದನ್ನೂ ಓದಿ : Kantara Oscar rase: ಆಸ್ಕರ್‌ಗೆ 2 ವಿಭಾಗಗಳಲ್ಲಿ ಅರ್ಹತೆ ಪಡೆದ ಕಾಂತಾರ ದಂತಕಥೆ

ಇದನ್ನೂ ಓದಿ : ಎಂಎಸ್ ಧೋನಿ ಎಲ್ಲರಿಗೂ ಮಾದರಿ ಎಂದ ಮಲಯಾಳಂ ನಟ ಟೋವಿನೋ ಥಾಮಸ್

ಆಸ್ಕರ್‌ ಬ್ಯಾಲೆಟ್‌ ಮತದಾನವು ಜನವರಿ 11 ರಿಂದ ಪ್ರಾರಂಭವಾಗಿ ಜನವರಿ 17 ರ ವೆರೆಗ ನಡೆಯುತ್ತದೆ. ಅಂತಿಮ ನಾಮನಿರ್ದೇಶನಗಳು ಜನವರಿ 24 ರಂದು ಹೊರಬರಲಿದೆ.

Vikrant Rona in Oscar list: Not only Kantara: “Vikrant Rona” is in the Oscar list!

Comments are closed.