ನವದೆಹಲಿ : ಈ ಬಾರಿಯ ಬಜೆಟ್ ನಲ್ಲಿ ವಾಹನ ರದ್ದಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಹೀಗಾಗಿ ಇನ್ನುಂದೆ 20 ವರ್ಷಗಳಷ್ಟು ಹಳೆಯದಾಗಿರುವ ವಾಹನಗಳು ಗುಜರಿಗೆ ಸೇರಲಿವೆ.
ವಾಯು ಮಾಲಿನ್ಯ ತಡೆಯ ಜೊತೆಗೆ ವಾಹನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟ ಕ್ರಮವನ್ನು ಕೈಗೊಂಡಿದೆ. ಈ ಬಾರಿಯ ಬಜೆಟ್ ನಲ್ಲಿ ವಾಹನ ರದ್ದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಹೀಗಾಗಿ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಗೆ ಹಾಕಲು ಆದ್ಯತೆ ನೀಡಲಾಗುತ್ತದೆ.
ಹಳೆಯ ವಾಹನಗಳನ್ನು ಗುಜರಿಗೆ ಹಾಕುವವರಿಗೆ ಕೇಂದ್ರ ಸರಕಾರ ಪ್ರೋತ್ಸಾಹ ಧನವನ್ನು ಕೂಡ ನೀಡಲಿದ್ದು, ಹೊಸ ವಾಹನದ ಖರೀದಿಗೆ ಉತ್ತೇಜಿಸಲಾಗುತ್ತಿದೆ.