ಕೊನೆಗೂ ಗೆದ್ದ ಯಜಮಾನ….! ಟಾಲಿವುಡ್ ನಲ್ಲಿ ರಾಬರ್ಟ್ ಗೆ ಗ್ರೀನ್ ಸಿಗ್ನಲ್….!!

ಕೊರೋನಾ ಬಳಿಕ ತೆರೆಗೆ ಬರಲು ಸಜ್ಜಾಗಿದ್ದ ರಾಬರ್ಟ್ ಗೆ ಟಾಲಿವುಡ್ ನಲ್ಲಿ ಅಡ್ಡಿ ಎದುರಾಗಿತ್ತು. ಇದಕ್ಕೆ ಯಜಮಾನ ದಚ್ಚು ಉಗ್ರ ರೂಪ ತಾಳಿ ಹೋರಾಟದ ಕಿಚ್ಚು ಹಚ್ಚಿದ್ದರು. ಫಲವಾಗಿ ತೆಲುಗಿನಲ್ಲಿ ರಾಬರ್ಟ್ ಗೆ ಗ್ರಿನ್ ಸಿಗ್ನಲ್ ಸಿಕ್ಕಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ರಿಲೀಸ್ ಗೆ ಸಿದ್ಧವಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ರಾಬರ್ಟ್ ಇಷ್ಟೊತ್ತಿಗೆ ತೆರೆ ಕಾಣ ಬೇಕಿತ್ತು. ಆದರೆ ಕೊರೋನಾದಿಂದ ಎಲ್ಲವೂ‌ ಮುಂದೂಡಿಕೆಯಾಗಿತ್ತು.ಈಗ ಥಿಯೇಟರ್ ಗಳಲ್ಲಿ ನೂರಕ್ಕೆ ನೂರು ಪ್ರೇಕ್ಷಕರಿಗೆ ಅವಕಾಶ ಸಿಗುತ್ತಿದ್ದಂತೆ ಮಾರ್ಚ್ ೧೧ ರ ಶಿವರಾತ್ರಿ ಹಬ್ಬದಂದು ರಾಬರ್ಟ್ ತೆರೆಗೆ ಬರಲು ಸಿದ್ಧವಾಗಿದೆ.

ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಏಕಕಾಲಕ್ಕೆ ತೆರೆಗೆ ಬರಲು ಸಿದ್ಧವಾಗಿದ್ದ ರಾಬರ್ಟ್ ಗೆ ತೆಲುಗಿನಲ್ಲಿ ಸಂಕಷ್ಟ ಎದುರಾಗಿತ್ತು.

ತೆಲುಗು ಚಿತ್ರ ರಿಲೀಸ್ ಕಾರಣ ಮುಂದಿಟ್ಟು ಮಾರ್ಚ್ ೧೧ ರಂದು ರಿಲೀಸ್ ಗೆ ಅವಕಾಶ ನೀಡದಿರಲು ಟಾಲಿವುಡ್ ನಿರ್ಧರಿಸಿತ್ತು. ಇದರಿಂದ ಕೆರಳಿದ ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.ಅಷ್ಟೇ ಅಲ್ಲ ತೆಲುಗು ಚಿತ್ರಗಳಿಗೆ ಕರ್ನಾಟಕದಲ್ಲಿ ಮುಕ್ತ ಅವಕಾಶವಿದೆ.ಆದರೆ ನಮಗ್ಯಾಕೆ ಅಡ್ಡಿ? ಎಂದು ಪ್ರಶ್ನಿಸಿದ್ದರು. ನಮ್ಮಲ್ಲಿ ಭಾಷಾಭಿಮಾನವಿಲ್ಲ ಎಂಬ ಆತಂಕವನ್ನು ಹಂಚಿಕೊಂಡಿದ್ದರು.

ದಚ್ಚು ಕಣಕ್ಕಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡು ಟಾಲಿವುಡ್ ಮಾರ್ಚ್ ೧೧ ರಂದು ಕನ್ನಡದ ಜೊತೆಗೆ ತೆಲುಗಿನಲ್ಲೂ ರಾಬರ್ಟ್ ರಿಲೀಸ್ ಗೆ ಅನುಮತಿ‌ ನೀಡಿದೆ.ಈ ಸಂಗತಿಯನ್ನು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಖಚಿತಪಡಿಸಿದ್ದಾರೆ. ತೆಲುಗು ವರ್ಸನ್ ರಾಬರ್ಟ್ ರಿಲೀಸ್ ಗೆ ಅನುಮತಿ ಸಿಕ್ಕಿದೆ.

ಆದರೆ ಎಷ್ಟು ಥಿಯೇಟರ್ ನಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂಬುದನ್ನು ನಿರ್ಮಾಪಕರು ಹಾಗೂ ವಿತರಕರು ಮಾತುಕತೆ ನಡೆಸಿ ನಿರ್ಧರಿಸಲಿದ್ದಾರೆ ಎಂದಿದ್ದಾರೆ.ದರ್ಶನ್ ತೆಲುಗು ಸಿನಿರಂಗದ ವರ್ತನೆ ಖಂಡಿಸಿ ದೂರು ನೀಡಿದ್ದಲ್ಲದೇ ನಿರ್ಮಾಪಕ ಉಮಾಪತಿ ಕೂಡ ಚೇಂಬರ್ ಗೆ ಮನವಿ ಮಾಡಿದ್ದರು. ಹೀಗಾಗಿ ಟಾಲಿವುಡ್ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ಗೆ ಬೆಚ್ಚಿದ್ದು ಚಿತ್ರ ರಿಲೀಸ್ ಗೆ ಅನುಮತಿ ನೀಡಿದೆ .

Comments are closed.