ಸ್ಯಾಂಡಲ್ ವುಡ್ ನಲ್ಲಿ ಕಿಚ್ಚನಿಗೆ ಬೆಳ್ಳಿ ಹಬ್ಬ ….!ಸವಿನೆನಪಿಗಾಗಿ ಸುದೀಪ್ ಅಭಿಮಾನಿಗಳಿಗೆ ಸಿಲ್ವರ್ ಕಾಯಿನ್….!!

ಸಾಲು ಸಾಲು ಸೋಲುಗಳಿಂದ ಕಂಗೆಡದೇ‌ ಮನೆಪತ್ರ ಅಡವಿಟ್ಟು ಸಿನಿಮಾ ‌ನಿರ್ಮಿಸಿ ಗೆದ್ದ ಸುದೀಪ್ ಈಗ ಕನ್ನಡಿಗರ ಹೆಮ್ಮೆ.‌ ಸ್ಯಾಂಡಲ್ ವುಡ್ ನಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸುದೀಪ್ ಗೆ ಬೆಳ್ಳಿ ಕಾಯಿನ್ ಗೌರವ ಸಲ್ಲಲಿದೆ.

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೊರೈಸಿದ ಸವಿ ನೆನಪಿಗೆ ಸುದೀಪ್ ಸಾಂಸ್ಕೃತಿಕ ಪರಿಷತ್ ೨೫ ಗ್ರಾಂನ ಬೆಳ್ಳಿ ಕಾಯಿನ್ ತರಲು ನಿರ್ಧರಿಸಿದೆ.

ಸಿನಿಮಾ ರಂಗದಲ್ಲಿ ಸುದೀಪ್ ಸಾರ್ಥಕ 25 ವರ್ಷ ಗಳನ್ನು ಕಳೆದಿರುವ ನೆನಪಿಗಾಗಿ 1000 ಬೆಳ್ಳಿಯ ನಾಣ್ಯ ಮುದ್ರಿಸಲು ಪರಿಷತ್ ನಿರ್ಧರಿಸಿದೆ. ಅಲ್ಲದೇ ವಿಶೇಷವಾಗಿ 100 ಗ್ರಾಂ ನ ಬೆಳ್ಳಿಯ ನಾಣ್ಯವೊಂದನ್ನು ಮುದ್ರಿಸಿ ಅದನ್ನು ದುಬೈನಿಂದ ಹಿಂತಿರುಗಿದ ಬಳಿಕ ಸುದೀಪ್ ಗೆ ಗಿಫ್ಟ್ ಆಗಿ‌ ನೀಡಲು ಸಿದ್ಧತೆ ನಡೆದಿದೆ.

ಸುದೀಪ್ ವೃತ್ತಿ ಬದುಕಿನ 25 ವರ್ಷಗಳನ್ನು ನೆನಪಿಸುವ ಸುದೀಪ್ ಭಾವಚಿತ್ರ ಹೊಂದಿರುವ 25 ಗ್ರಾಂ ತೂಕದ ಬೆಳ್ಳಿ ನಾಣ್ಯಗಳನ್ನು ಅಭಿಮಾನಿಗಳು ಖರೀದಿಸಬಹುದಾಗಿದೆ ಎಂದು ಸುದೀಪ್ ಸಾಂಸ್ಕೃತಿಕ ಪರಿಷತ್ ತಿಳಿಸಿದೆ.

25 ಗ್ರಾಂ ಬೆಳ್ಳಿಯ ಮೊತ್ತ ಪಾವತಿಸಿ ಕಾಯಿನ್ ಪಡೆಯಬಹುದಾಗಿದ್ದು ಕೇವಲ ೧ ಸಾವಿರ ಕಾಯಿನ್ ಗಳನ್ನು ಮಾತ್ರ ಪರಿಷತ್ ಮುದ್ರಿಸಿದೆ.

Comments are closed.