ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆರೋಪ ಸ್ಥಾನದಲ್ಲಿರೋ ಪತ್ರಕರ್ತ ನರೇಶ್ ಗೌಡ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು ನಾನು ನಿರಪರಾಧಿ, ನನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಮಾಜಿಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆಯಲ್ಲಿ ಪತ್ರಕರ್ತ ನರೇಶ್ ಕಿಂಗ್ ಪಿನ್ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಬಳಿಕ ಪತ್ರಕರ್ತ ನರೇಶ್ ತಲೆಮರೆಸಿಕೊಂಡಿದ್ಧರು.

ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರೋ ನರೇಶ್, ನಾನೊಬ್ಬ ಪತ್ರಕರ್ತನಾಗಿ ಆಕೆಯನ್ನು ಸಂಪರ್ಕಿಸಿದ್ದು ನಿಜ. ಅಕೆ ಅನ್ಯಾಯ ವಾಗಿದೆ ನ್ಯಾಯ ಕೊಡಿಸಿ ಎಂದಿದ್ದಳು.
ಆದರೆ ಈ ಆರೋಪದಲ್ಲಿ ಹುರುಳಿಲ್ಲ. ನಾನು ಯಾವ ಹಣವನ್ನು ಪಡೆದಿಲ್ಲ. ಕೋಟಿ ಕೋಟಿ ಆರೋಪ ಸುಳ್ಳು. ನಾನು ಈಗಲೇ ತನಿಖಾಧಿಕಾರಿ ಮುಂದೇ ಹಾಜರಾದರೇ ನನ್ನನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಷಡ್ಯಂತ್ರ ನಡೆದಿದೆ. ಹೀಗಾಗಿ ಸೂಕ್ತ ಸಂದರ್ಭದಲ್ಲಿ ಹಾಜರಾಗುತ್ತೇನೆ ಎಂದಿದ್ದಾರೆ.

ತುಮಕೂರಿನ ಭುವನಹಳ್ಳಿಯಲ್ಲಿರೋ ಮನೆಯಲ್ಲಿ ಸೋರುವ ಸೂರಿದೆ. ಮೈತುಂಬ ಸಾಲವಿದೆ. ಹೀಗಿದ್ದರೂ ನನ್ನ ಮೇಲೆ ಕೋಟ್ಯಾಂತರ ರೂಪಾಯಿ ಲಂಚ ಪಡೆದ ಆರೋಪ ಮಾಡಲಾಗುತ್ತಿದೆ.ನನ್ನ ಮಗಳ ನಾಮಕರಣ ಕ್ಕೆ ಎಲ್ಲ ಪಕ್ಷದ ನಾಯಕರು ಬಂದಿದ್ದರು ಇದಕ್ಕೂ ಸಿಡಿಗೂ ಸಂಬಂಧವಿಲ್ಲ ಎಂದಿದ್ದಾನೆ.

ಒಟ್ಟಿನಲ್ಲಿ ನರೇಶ್ ಗೌಡ್ ಸಿಡಿ ಪ್ರಕರಣದ ಕಿಂಗ್ ಪಿನ್ ಎಂಬ ಆರೋಪದ ಬೆನ್ನಲ್ಲೇ ನರೇಶ್ ಬಿಡುಗಡೆ ಮಾಡಿರೋ ವಿಡಿಯೋ ಹೊಸ ಚರ್ಚೆ ಹುಟ್ಟುಹಾಕಿದ್ದು ಎಸ್ ಆಯ್ ಟಿ ನರೇಶ್ ಬಂಧನಕ್ಕೆ ಹುಡುಕಾಟ ನಡೆಸಿದೆ ಎಂಬ ಮಾತು ಕೇಳಿಬಂದಿದೆ.