ಜೋಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಪ್ರಕರಣ…! ಸಂತ್ರಸ್ಥೆಯ ಹಾಟ್ ಪೋಟೋಕ್ಕೆ ಮುಗಿಬಿದ್ದ ಸೋಷಿಯಲ್ ಮೀಡಿಯಾ ಮಂದಿ…!

ಕಳೆದ ವಾರ ರಾಜ್ಯದಾದ್ಯಂತ ಪರ ವಿರೋಧ ಚರ್ಚೆಗೊಳಗಾದ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಪ್ರಕರಣದಲ್ಲಿ ಈಗ ಬೇರೆ ಸ್ವರೂಪ ಪಡೆದುಕೊಂಡಿದ್ದು, ಸೋಷಿಯಲ್ ಮೀಡಿಯಾ ದಲ್ಲಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದ ಹಿತೇಶಾ ಹಾಟ್ ಪೋಟೋಸ್ ಸದ್ದು‌ ಮಾಡಿದೆ.


ಡೆಲಿವರಿ ಬಾಯ್ ಕಾಮರಾಜ್ ಹಲ್ಲೆ ಮಾಡಿದ್ದ ಎಂದು ಆರೋಪಿಸಿದ್ದ ಹಿತೇಶಾ ಚಂದ್ರಾಣಿ ಆರೋಪಕ್ಕೆ ಪ್ರತಿಯಾಗಿ ಕಾಮರಾಜ್ ಕೂಡ ದೂರು ದಾಖಲಿಸಿದ್ದರು.


ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲೇ ಹಿತೇಶಾ ಚಂದ್ರಾಣಿ ಅರಬೆತ್ತಲೆ ಪೋಟೋಗಳು,ಮಾಡೆಲಿಂಗ್ ಪೋಟೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ನಡೆದಿದೆ.

ಮೂಲತಃ ಆಂಧ್ರಪ್ರದೇಶದವರಾದ ಹಿತೇಶಾ ಚಂದ್ರಾಣಿ ವೃತ್ತಿಯಲ್ಲಿ ಮೇಕಪ್ ಕಲಾವಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಹಲವು ಮಾದಕ ಪೋಟೋಶೂಟ್ ಮಾಡಿಸಿರುವ ಹಿತೇಶಾಗೆ ಮಾಡೆಲಿಂಗ್ ನಲ್ಲಿ ಆಸಕ್ತಿ ಇತ್ತು ಎನ್ನಲಾಗಿದೆ‌.ಕಾಮರಾಜ್ ಊಟ ಡೆಲಿವರಿ ಯಲ್ಲಿ ವಿಳಂಬವಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಆರೋಪಿಸಿದ ಮೇಲೆ ವರ್ತನೆ ಸಾಕಷ್ಟು ಚರ್ಚೆಗೊಳಗಾಗಿತ್ತು.

ಹಿತೇಶಾ ಪರ ಹಾಗೂ ಕಾಮರಾಜ್ ಪರ ಸಾಕಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಹಿತೇಶಾ ಬಗ್ಗೆ ಸಾಕಷ್ಟು ಹುಡುಕಾಟ ನಡೆಸಿದ ನೆಟ್ಟಿಗರು ಆಕೆಯ ಮಾದಕ ಪೋಟೋಗಳನ್ನು ವೈರಲ್ ಮಾಡಿದ್ದಾರೆ.

ಈ ಪ್ರಕರಣ ದಿಂದ ಹಿತೇಶಾಗೆ ಸಖತ್ ಪ್ಲಬಿಸಿಟಿ ಸಿಕ್ಕಂತಾಗಿದ್ದು ಸೋಷಿಯಲ್ ಮೀಡಿಯಾ ಕ್ವೀನ್ ಆಗಿದ್ದಾರೆ

Comments are closed.