ಸಚಿವರು, ಅಧಿಕಾರಿಗಳ ವಿರುದ್ದ ಗುಡುಗಿದ ಯಡಿಯೂರಪ್ಪ : ನನ್ನ ಆದೇಶ ಚಾಚೂ ತಪ್ಪದೇ ಪಾಲನೆ ಆಗಲೇ ಬೇಕು

0

ಬೆಂಗಳೂರು : ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಯಾವ ಆದೇಶವನ್ನು ಹೊರಡಿಸುತ್ತೇನೋ, ನನ್ನ ಆದೇಶ ಚಾಚೂ ತಪ್ಪದೇ ಪಾಲನೆ ಆಗಲೇ ಬೇಕು. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲೇ ಬೇಕು. ಕೊರೊನಾ ಪರಿಕರ ಖರೀದಿ ಹಗರಣದ ಕುರಿತು ಸಮಗ್ರ ವರದಿ ನೀಡಿ ಎಂದು ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸ ಕಾವೇರಿಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಸಭೆಯಲ್ಲಿ ಯಡಿಯೂರಪ್ಪ ಸಚಿವರು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಸಮಸ್ಯೆಗಳು ಪದೇ ಪದೇ ಪುನರಾವರ್ತನೆಯಾಗುತ್ತಿದೆ. ಎರಡು ದಿನಗಳಲ್ಲಿ ಎಲ್ಲಾ ಸಮಸ್ಯೆಗಳು ಬಗೆ ಹರಿಯಬೇಕು. ನಾನು ಸಿಎಂ, ನನ್ನ ಆದೇಶವನ್ನು ಚಾಚೂ ತಪ್ಪದೇ ಪಾಲನೆ ಮಾಡಬೇಕು. ಅಂಬ್ಯುಲೆನ್ಸ್ ಖರೀದಿಸುವಂತೆ ಸೂಚನೆಯನ್ನು ನೀಡಿ 15 ದಿನಗಳೇ ಕಳೆದಿದೆ. ಆದರೆ ಇದುವರೆಗೂ ಖರೀದಿಯನ್ನು ಮಾಡಿಲ್ಲ. ಕೊರೊನಾ ನಿಯಂತ್ರಣ ಆಗಲೇ ಬೇಕು ಎಂದಿದ್ದಾರೆ.

ಇನ್ನು ಅಧಿಕಾರಿಗಳನ್ನೂ ಕೂಡ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊರೊನಾ ಪರಿಕರಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ವಿರುದ್ದ ಸಿಎಂ ಗರಂ ಆಗಿದ್ದಾರೆ. ಅವ್ಯವಹಾರ ನಡೆಸಿದ್ರೆ ಜೈಲಿಗೆ ಕಳುಹಿಸಿ ಬಿಡುತ್ತೇನೆ. ಹೆಚ್ಚಿನ ಬೆಲೆಕೊಟ್ಟು ಪರಿಕರಗಳನ್ನು ಖರೀದಿ ಮಾಡಿದ್ದೀರಿ. ಪ್ರತಿಪಕ್ಷಗಳು ಸರಕಾರದ ವಿರುದ್ದ ಆರೋಪ ಮಾಡುತ್ತಿವೆ. ಖರೀದಿ ಹಗರಣದ ಕುರಿತು ಸಮಗ್ರ ವರದಿಯನ್ನು ನೀಡುವಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

Leave A Reply

Your email address will not be published.