ಕಾಫಿನಾಡಿನಿಂದ ರಾಷ್ಟ್ರ ರಾಜಧಾನಿಯವರೆಗೂ….! ದಂಡಯಾತ್ರೆ ನೆನಪಿಸಿಕೊಂಡ ಚಿಕ್ಕಮಾಗರವಳ್ಳಿ ರವಿ…!!

ಆಟವಿದ್ದಂತೆ. ಇಲ್ಲಿ ಶ್ರಮಕ್ಕೆ ತಕ್ಕ ಬೆಲೆಯೂ ಇದೆ. ಕಾಲ ಕೆಟ್ಟರೇ ಅಧಿಕಾರದ ಗದ್ದುಗೆ ಕಾಲು ಮುರಿದು ಮನೆ ಸೇರುವ ಸೋಲು ಇದೆ. ಆದರೇ ಇದು ಚಿಕ್ಕಮಾಗರವಳ್ಳಿಯ ಬ್ಯಾನರ್ ಕಟ್ಟುವ ಹುಡುಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತ ದಂಡಯಾತ್ರೆಯ ಕತೆ.

ಚಿಕ್ಕಮಗಳೂರಿನ‌ ಶಾಸಕ ಸಿ.ಟಿ.ರವಿ ರಾಜ್ಯದ ಗಡಿ ಮೀರಿ ರಾಷ್ಟ್ರ ನಾಯಕರಾಗಿ ಬೆಳೆದು ನಿಂತಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಿ.ಟಿ.ರವಿ ಇಂದು ನಡೆದ ಸರಳ ಪೂಜೆಯ ಬಳಿಕ ದೆಹಲಿಯ ತಮ್ಮ ಕಚೇರಿ ಪ್ರವೇಶಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯ ಮೆಟ್ಟಿಲೇರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿ ಹೊತ್ತ ಸಿ.ಟಿ.ರವಿ ಕೊಂಚ ಭಾವುಕರಾಗಿದ್ದು, ತಮ್ಮ ಈ ಪಯಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಹಳ್ಳಿಯ ಸಾಮಾನ್ಯ ರೈತನ ಮಗನೊಬ್ಬ ಈ ಎತ್ತರಕ್ಕೆ ಏರಲು ಕಾರಣವಾದ ಚಿಕ್ಕಮಗಳೂರಿನ ಜನತೆಯನ್ನು ಸ್ಮರಿಸಿ ಧನ್ಯತಾ ಭಾವದಿಂದ ಧನ್ಯವಾದ ಅರ್ಪಿಸುವ ಪತ್ರವೊಂದನ್ನು ಬರೆದಿದ್ದಾರೆ.

ಚಿಕ್ಕಮಾಗರವಳ್ಳಿಯ ಸಾಮಾನ್ಯ ರೈತ ಕುಟುಂಬದ ಯುವಕನೊರ್ವ ದೇಶದ ರಾಜಧಾನಿ ನವದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಂತಿದ್ದಾನೆ. ಹಳ್ಳಿಯಿಂದ ಆರಂಭವಾದ ರಾಜಕೀಯ ಯಾತ್ರೆ ದೆಹಲಿಯವರೆಗೂ ಬಂದು ನಿಂತಿದೆ ಎಂದಿದ್ದಾರೆ‌.

ಅಷ್ಟೇ ಅಲ್ಲ, ತಾವು ಬಿಜೆಪಿ ಪಕ್ಷ ಸೇರಿದ ದಿನಗಳನ್ನು ನೆನಪಿಸಿಕೊಂಡ ಸಿ.ಟಿ.ರವಿ, ೧೯೮೮ ರಲ್ಲಿ ಅಟೋ ಚಂದ್ರಣ್ಣನವರು ನನಗೆ ಬಿಜೆಪಿ ಸದಸ್ಯನಾಗಲು ಕರೆದರು. ಅಲ್ಲಿಂದ ಜನರು ನನ್ನನ್ನು ಬೆಂಬಲಿಸಿ ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವರೆಗೂ ನನ್ನ ಬೆಳೆಸಿದರು ಎಂದಿದ್ದಾರೆ.

ಚಿಕ್ಕಮಗಳೂರಿನ ಜನತೆಯ ಬೆಂಬಲವನ್ನು ನೆನಪಿಸಿಕೊಳ್ಳುತ್ತ, ಪ್ರಚಾರ ಮುಗಿಸಿ ಹಸಿದು ಬಂದಾಗ ಅಕ್ಕರೆಯಿಂದ ಕೈ ತುತ್ತು ಕೊಟ್ಟಿದ್ದೀರಿ,ಖಾಲಿ ಜೇಬಿನಲ್ಲಿ ಹೋರಾಟ ಆರಂಭಿಸಿದಾಗ ಖರ್ಚಿಗೆ ಹಣ ಕೊಟ್ಟಿದ್ದೀರಿ.ನನ್ನ ತಪ್ಪು ಗಳನ್ನು ತಿದ್ದಿ ಕಿವಿ ಹಿಂಡಿ ಬುದ್ಧಿ ಹೇಳಿದ್ದಿರಿ. ಇದುವರೆಗಿನ ರಾಜಕೀಯ ಜೀವನದಲ್ಲಿ ಸರಿತಪ್ಪುಗಳನ್ನು ಹೇಳಿಕೊಟ್ಟವರು ನೀವು ಎಂದು ಸಿ.ಟಿ.ರವಿ ಚಿಕ್ಕಮಗಳೂರಿನ ಜನರನ್ನು ಸ್ಮರಿಸಿಕೊಂಡಿದ್ದಾರೆ.

೩೩ ವರ್ಷದ ಹಿಂದೆ ಪಕ್ಷದ ಬ್ಯಾನರ್ ಕಟ್ಟುತ್ತ ಆರಂಭವಾದ ನನ್ನ ಪಯಣ ಇಂದು ಈ ಉನ್ನತ ಸ್ಥಾನಕ್ಕೇರುವ‌ ತನಕ ಬಂದು‌ ನಿಂತಿದೆ. ಇವತ್ತು ದೆಹಲಿಯಲ್ಲಿ ಹೊಸ ರಾಜಕೀಯ ಯಾನವೊಂದು ಆರಂಭವಾಗುತ್ತಿರುವ ಹೊತ್ತಿನಲ್ಲಿ ಹಳೆಯ ನೆನಪಿನ‌ ಹಾಯಿ ದೋಣಿ ಗಳು ನನ್ನ‌ಭಾವ ಕಡಲಿನಲ್ಲಿ ತೇಲಿ ಹೋಗುತ್ತಿವೆ. ಹೃದಯ ತುಂಬಿ ಬಂದಿದೆ. ನಾನು ನಿಮಗೆ ಸದಾ ಅಭಾರಿ ಎನ್ನುತ್ತ ಭಾವುಕ ನುಡಿನಮನ ಸಲ್ಲಿಸಿದ್ದಾರೆ.

ಅಷ್ಟೇ ಅಲ್ಲ ನಿಮ್ಮೆಲ್ಲರ ಋಣ ನನ್ನ ಮೇಲಿದೆ ಎಂದಿರುವ ಸಿ.ಟಿ.ರವಿ ಜೀವ ಇರುವ ತನಕ ನಿಮ್ಮೆಲ್ಲರ ಮನೆ ಮಗನಂತೆ ಸೇವೆ ಮಾಡುವ ಭಾಗ್ಯ ನನಗಿರಲಿ ಎಂದು ಬರೆದಿದ್ದಾರೆ.

ಸಿ.ಟಿ.ರವಿ ಈ ಭಾವುಕ ಪತ್ರ ಚಿಕ್ಕಮಗಳೂರಿನ ಜನತೆಯ ಸಂಭ್ರಮ ಕ್ಕೆ ಕಾರಣವಾಗಿದ್ದು ಹತ್ತಿದ ಏಣಿ ಮರೆಯೋ ಕಾಲದಲ್ಲಿ ಸಾಧನೆಯ ಹಾದಿಯಲ್ಲಿ ಸಹಾಯ ಮಾಡಿದವರನ್ನು ಮರೆಯದೇ ಸ್ಮರಿಸಿದ ಸಿ.ಟಿ.ರವಿಯನ್ನು ಜನ ಮೆಚ್ಚಿಕೊಂಡಿದ್ದಾರೆ.

Comments are closed.