ಮತ್ತೆ ಫಿಟ್ನೆಸ್ ಮೊರೆ ಹೋದ ಅಭಿನಯ ಚಕ್ರವರ್ತಿ…! ಇಷ್ಟಕ್ಕೂ ಸುದೀಪ್ ಬಾಡಿಬಿಲ್ಡಿಂಗ್ ಮಾಡ್ತಿರೋದ್ಯಾಕೆ ಗೊತ್ತಾ…?!

ಕಿಚ್ಚ್ ಸುದೀಪ್…ಕನ್ನಡಿಗರ ಹಾಟ್ ಫೆವರಿಟ್ ಆಂಕ್ಯರ್ ಹಾಗೂ ಸ್ಟಾರ್ ನಟ. ಪೈಲ್ವಾನ್ ಸಿನಿಮಾದಲ್ಲಿ ಜಗಜಟ್ಟಿಯಂತೇ ಬಾಡಿಬಿಲ್ಡಿಂಗ್ ಮಾಡಿ ಮೆರೆದಿದ್ದ ಸುದೀಪ್ ಈಗ ಮತ್ತೆ ಮೈಹುರಿಗೊಳಿಸಲು ಆರಂಭಿಸಿದ್ದಾರೆ.

ತಮ್ಮ ಸಿನಿ ಕೆರಿಯರ್ ನಲ್ಲೇ ಅಪರೂಪದ ಪಾತ್ರ ಪೈಲ್ವಾನ್ ಚಿತ್ರದಲ್ಲಿ ನಿರ್ವಹಿಸಿದ್ದ ಸುದೀಪ್ ಅದಕ್ಕಾಗಿ ಸಖತ್ ವರ್ಕೌಟ್ ಮಾಡಿ ಸುದ್ದಿಯಾಗಿದ್ದರು. ಕೇವಲ ಬಾಡಿ ಬಿಲ್ಡಿಂಗ್ ಮಾತ್ರವಲ್ಲ, ಕುಸ್ತಿಯ ಪಟ್ಟುಗಳನ್ನು ಕಲಿತಿದ್ದರು.

ವರ್ಕೌಟ್ ಮತ್ತು ಡಯಟ್ ಮಾಡೋಕೆ ಮನೆಯ ವಾತಾವರಣ ಸರಿಹೋಗಲ್ಲ ಅನ್ನೋ ಕಾರಣಕ್ಕೆ ಚೈನೈನಲ್ಲೇ ಮನೆ ಮಾಡಿಕೊಂಡು ದೇಹ ದಂಡಿಸಿ ಪೈಲ್ವಾನ್ ನಾಗಿ ಮಿಂಚಿದ್ದರು.


ಸುದೀಪ್ ನ್ಯೂ ಲುಕ್ ಹಾಗೂ ವಿಭಿನ್ನ ಕಥಾಹಂದರ ಹೊಂದಿದ್ದ ಪೈಲ್ವಾನ್ ಗೆದ್ದಿತ್ತು. ಈ ಚಿತ್ರದ ಬಳಿಕ ಈಗ ಫ್ಯಾಂಟಮ್ ಮೂವಿಗೆ ಶೂಟಿಂಗ್ ಆರಂಭಿಸಿರುವ ಸುದೀಪ್, ಈ ಚಿತ್ರದ ಗೆಟಪ್ ಗಾಗಿ ಮತ್ತೆ ವರ್ಕೌಟ್ ಆರಂಭಿಸಿದ್ದಾರೆ ಎನ್ನಲಾಗಿದೆ.

ಒಂದಷ್ಟು ದಿನ‌ ವರ್ಔಟ್ ನಿಂದ ದೂರ ಇದ್ದಿದ್ದನ್ನು ಹಾಗೂ ಈಗ ವರ್ಕೌಟ್ ಶುರು ಮಾಡಿರೋದನ್ನು ಸ್ವತಃ ಕಿಚ್ಚ್ ಸುದೀಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಒಂದಷ್ಟು ಒಳ್ಳೆಯ ಫುಡ್, ಡಿಸೆಂಟ್ ಲೈಫ್ ಸ್ಟೈಲ್, ಒಂದಿಷ್ಟು ರೂಲ್ಸ್ ಫ್ಯಾಂಟಮ್ ಕ್ಲೈಮ್ಯಾಕ್ಸ್ ಗಾಗಿ ಈ ಸರ್ಕಸ್ ಎಂಬರ್ಥದಲ್ಲಿ ಸುದೀಪ್ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸುದೀಪ್ ಫ್ಯಾಂಟಮ್ ಮೂವಿ ಸಖತ್ ಆಕ್ಷ್ಯನ್ ಮೂವಿ ಎಂಬ ಕ್ಲೂ ಸಿಕ್ಕಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿದೆ.

Comments are closed.