ನವದೆಹಲಿ : ಚೀನಾ – ಭಾರತ ನಡುವಿನ ಗಡಿ ಸಂಘರ್ಷದ ನಂತರ ಪ್ರಧಾನಿ ನರೇಂದ್ರ ಮೋದಿ ಲೇಹ್ ಗೆ ಭೇಟಿ ಕೊಟ್ಟ ಅಚ್ಚರಿ ಮೂಡಿಸಿದ್ದಾರೆ. ಲೇಹ್ ಗಡಿಗೆ ಭೇಟಿ ನೀಡುವ ಮೂಲಕ ಭಾರತ ಪಾಪಿ ಚೀನಾಗೆ ಪ್ರಬಲ ಸಂದೇಶವನ್ನು ರವಾನಿಸಿದೆ.

ಜೂನ್ 15ರಂದು ಚೀನಾ ಗಡಿಯಲ್ಲಿ ನಡೆದಿರುವ ಗಡಿ ಸಂಘರ್ಷದಲ್ಲಿ ಭಾರತದ 20 ಮಂದಿ ಯೋಧರು ವೀರ ಮರಣವನ್ನಪ್ಪಿದ್ದರು. ಅಲ್ಲದೇ 60 ಯೋಧರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಲೇಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿ ಆರೋಗ್ಯವನ್ನು ವಿಚಾರಿಸಲಿದ್ದಾರೆ. ನಂತರ ಚೀನಾ ಗಡಿ ಭಾಗಕ್ಕೆ ಭೇಟಿಯನ್ನು ಕೊಟ್ಟು ಗಡಿಯನ್ನ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಲಿದ್ದಾರೆ.

ನರೇಂದ್ರ ಮೋದಿ ಅವರ ಜೊತೆಗೆ ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಕೂಡ ಭೇಟಿಯನ್ನು ಕೊಟ್ಟಿದ್ದಾರೆ. ಚೀನಾ ಭಾರತ ನಡುವೆ ಯುದ್ದ ನಡೆಯುತ್ತೆ ಅಂತಾ ಮಾತುಗಳು ಕೇಳಿಬರುತ್ತಿರುವ ನಡುವಲ್ಲೇ ಮೋದಿ ಭೇಟಿ ಹಲವು ಕೂತೂಹಲಗಳನ್ನು ಮೂಡಿಸಿದೆ