ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನಕ್ಕೇರುತ್ತೆ ಭಾರತ !

0

ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಲ್ಲಿ ರಣಕೇಕೆ ಹಾಕುತ್ತಿದೆ. ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತುದೆ. ನಿತ್ಯವೂ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಕೊರೊನಾ ಸೋಂಕು ದೃಢಪಡುತ್ತಿದ್ದು, ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೇರಲು ಬಹುದೂರವಿಲ್ಲ.

ಕಳೆದೊಂದು ತಿಂಗಳಿನಿಂದಲೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲೀ ಭಾರೀ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ನಿತ್ಯವೂ 20 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿರೋದು ಆತಂಕವನ್ನು ತಂದೊಡ್ಡಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿರುವ ಭಾರತ ರಷ್ಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವುದು ಗ್ಯಾರಂಟಿ.

ವಿಶ್ವದಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಅಮೇರಿಕಾದಲ್ಲಿ 27,82, 539 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಬ್ರಿಜಿಲ್ ನಲ್ಲಿ 14,56,969 ಮಂದಿ ಸೋಂಕಿತರಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 6,61,461 ಮಂದಿ ಸೋಂಕಿತರಿದ್ದಾರೆ. ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಭಾರತದಲ್ಲಿ 6,04,461 ಮಂದಿ ಸೋಂಕಿತರಿದ್ದಾರೆ.

ಆದರೆ ರಷ್ಯಾವನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೇರಲು ಕೇವಲ 50 ಸಾವಿರ ಸೋಂಕಿತರ ಅಂತರವಿದೆ. ಸದ್ಯ ದೇಶದಲ್ಲಿ ದಾಖಲಾಗುತ್ತಿರುವ ಕೊರೊನಾ ಸೋಂಕಿತರನ್ನು ನೋಡಿದ್ರೆ ಇನ್ನು ಒಂದೆರಡು ದಿನಗಳಲ್ಲಿಯೇ ಭಾರತ ವಿಶ್ವಮಟ್ಟದಲ್ಲಿ ಕೆಟ್ಟ ದಾಖಲೆಯೊಂದನ್ನು ಬರೆಯಲಿದೆ.

ಕೇವಲ ಸೋಂಕಿತರ ಸಂಖ್ಯೆ ಮಾತ್ರವಲ್ಲ ವೇಗವಾಗಿ ಕೊರೊನಾ ಸೋಂಕು ಹರಡುತ್ತಿರುವ ದೇಶಗಳ ಪಟ್ಟಿಯಲ್ಲಿಯೂ ಭಾರತ ಸದ್ಯ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಹೊಂದಿರುವ ಅಮೇರಿಕಾದಲ್ಲಿ ನಿತ್ಯವೂ 45 ರಿಂದ 50 ಸಾವಿರ ಮಂದಿಗೆ ಕೊರೊನಾ ಸೋಂಕು ದೃಢಪಡುತ್ತಿದ್ರೆ, ಎರಡನೇ ಸ್ಥಾನದಲ್ಲಿರುವ ಬ್ರಿಜಿಲ್ ದೇಶದಲ್ಲಿಯೂ 50,000ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 6 ರಿಂದ 7 ಸಾವಿರ ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ಭಾರತದಲ್ಲಿ ನಿತ್ಯವೂ ಬರೋಬ್ಬರಿ 19 ರಿಂದ 20 ಸಾವಿರ ಮಂದಿ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ದೇಶದಲ್ಲಿ ಅತೀ ವೇಗವಾಗಿ ಸೋಂಕು ಹರಡುತ್ತಿದ್ದು, ಶೀಘ್ರದಲ್ಲಿಯೇ ಭಾರತ ವಿಶ್ವದಲ್ಲಿಯೇ ಮೂರನೇ ಸ್ಥಾನಕ್ಕೇರುವುದು ಖಚಿತ.

Leave A Reply

Your email address will not be published.