ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಅಗತ್ಯ ವಸ್ತುಗಳ ಸೇವೆಯ ಕಾರ್ಖಾನಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಆದರೆ ಲಾಕ್ ಡೌನ್ ನಿಂದಾಗಿ ಕಾಂಡೋಮ್ ಗಳಿಗೆ ಬಾರೀ ಬೇಡಿಕೆ ಬಂದಿದ್ದು, ಜಾಗತಿಕವಾಗಿ ಕೊರತೆ ಕಾಣಿಸಿಕೊಂಡಿದ್ದು, ಕಾಂಡೋಮ್ ಕಾರ್ಖಾನೆಯ ನೌಕರರನ್ನು ಅಗತ್ಯ ಸೇವೆ ಪಟ್ಟಿಗೆ ಸೇರ್ಪಡೆಗೊಳಿಸಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ವರ್ಕ್ ಪ್ರಮ್ ಹೋಮ್ ಮಾಡಲಾಗುತ್ತಿದೆ. ಜೊತೆ ಜೊತೆಗೆ ಸದಾ ಕಾಲ ಮನೆಯಲ್ಲಿಯೇ ಇರೋದ್ರಿಂದ ಕಾಂಡೋಮ್ ಗಳಿಗೆ ಬಾರೀ ಬೇಡಿಕೆ ಎದುರಾಗಿತ್ತು.

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಾಂಡೋಮ್ ದಾಸ್ತಾನು ಖಾಲಿಯಾಗಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಏರಿಕೆಯನ್ನು ತಡೆಯೋ ಸಲುವಾಗಿಯೇ ಕಾಂಡೋಮ್ ಕಾರ್ಖಾನೆಯ ನೌಕರ ಸೇವೆಯನ್ನು ಅಗತ್ಯಸೇವೆಯೆಂದು ಪರಿಗಣಿಸಲಾಗುತ್ತಿದೆ.

ಕೊರೊನಾ ವೈರಸ್ ಸೋಂಕು ಕಾಣಸಿಕೊಳ್ಳುತ್ತಿದ್ದಂತೆಯೇ ಚೀನಾ ಕಾಂಡೋಮ್ ಕಾರ್ಖಾನೆಗಳನ್ನು ಮುಚ್ಚಿತ್ತು. ನಂತರದಲ್ಲಿ ಒಂದೊಂದೆ ದೇಶಗಳು ಕಾರ್ಖಾನೆಗಳಿಗೆ ಬೀಗ ಜಡಿದಿವೆ. ಅದ್ರಲ್ಲೂ ಕಾಂಡೋಮ್ ಉತ್ಪಾದಕ ದೇಶಗಳ ಪಟ್ಟಿಯಲ್ಲಿರೋ ಭಾರತ, ಮಲೇಡ್ಯಾ, ಥೈಲ್ಯಾಂಡ್ ನಂತಹ ದೇಶಗಳಲ್ಲಿರುವ ಕಾರ್ಖಾನೆಗಳು ಮುಚ್ಚಿರೋದ್ರಿಂದಾಗಿ ಕಾಂಡೋಮ್ ಕೊರತೆ ಜಾಗತಿಕ ಮಟ್ಟದಲ್ಲಿ ಎದುರಾಗಿದೆ.

ವಿಶ್ವದಾದ್ಯಂತ ಕಾಂಡೋಮ್ ಕೊರತೆ ಎದುರಾಗುತ್ತಲೇ ಮಲೇಷ್ಯಾ ಹಾಗೂ ಚೀನಾ ದೇಶಗಳಲ್ಲಿರುವ ಕಾರ್ಖಾನೆಗಳು ಕಾಂಡೋಮ್ ಉತ್ಪಾದನೆಗೆ ಮುಂದಾಗಿವೆ. ಕೊರೊನಾ ಭೀತಿಯ ನಡುವಲ್ಲೇ ಕಾರ್ಮಿಕರು ಕಾರ್ಖಾನೆಗಳಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಹೀಗಾಗಿ ಜಗತ್ತಿನಲ್ಲಿ ಇನ್ನೊಂದು ವಾರ ಅಥವಾ ತಿಂಗಳಲ್ಲಿ ಕಾಂಡೋಮ್ ಕೊರತೆ ನಿವಾರಣೆಯಾಗಲಿದೆ ಎನ್ನಲಾಗುತ್ತಿದೆ.