- ರಕ್ಷಾ ಬಡಾಮನೆ
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ಧ ಮತ್ತು ಪೋಷಕಾಂಶಯುಕ್ತ ಆಹಾರ ತಿನ್ನುವುದು ಎಷ್ಟು ಮುಖ್ಯವೋ ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಗೆ ಹಾಕುವುದು ಅಷ್ಟೆ ಮುಖ್ಯ. ಮಲ ಬದ್ಧತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ.

ಈ ಒಂದು ಸಮಸ್ಯೆ ನಮ್ಮ ದೇಹದಲ್ಲಿ ಅನೇಕ ಬೇರೆ ಬೇರೆ ತರದ ಖಾಯಿಲೆಗಳನ್ನು ತಂದೊಡ್ಡುತ್ತದೆ. ತಲೆ ನೋವು, ತಲೆ ಹೊಟ್ಟು, ದೇಹದಲ್ಲಿ ನೀರು ಕಮ್ಮಿ ಆಗುವುದು, ದೇಹದ ತೂಕ ಹೆಚ್ಚಾಗುವುದು ಮಹಿಳೆಯರಲ್ಲಿ ಋತುಸ್ರಾವದ ತೊಂದರೆ ಗಳು ಮೊಡವೆ ಹೀಗೆ ಹತ್ತು ಹಲವು ತೊಂದರೆ ಗಳು ಬರುತ್ತದೆ.

ಈ ಮಲ ಬದ್ಧತೆ ಉಂಟಾಗುವುದು ನಮ್ಮ ಆಹಾರ ಪದ್ಧತಿಯಿಂದಲೇ. ಮಲ ಬದ್ಧತೆ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲು ಎಷ್ಟೇ ಮಾತ್ರೆ ತಿಂದರೂ ಕೂಡ ಪರಿಣಾಮ ಬೀರುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಈ ಮಲ ಬದ್ಧತೆ ಕಡಿಮೆ ಮಾಡಲು ಸುಲಭ ವಿಧಾನಗಳು ಇಲ್ಲಿವೆ.

ನಾನು ನಿತ್ಯವೂ ಕುಡಿಯುವ ನೀರು ದೇಹದ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಮಲಬದ್ದತೆ ಸಮಸ್ಯೆಯಿಂದ ಮುಕ್ತರಾಗಲು ನೀರು ಹೆಚ್ಚು ಸಹಕಾರಿಯಾಗಿದೆ. ನಿತ್ಯವೂ ಹೆಚ್ಚಾಗಿ ನೀರು ಕುಡಿಯುವುದರಿಂದ ದೇಹದಲ್ಲಿ ಪಚನ ಕ್ರೀಯೆ ಸರಾಗವಾಗಿ ನಡೆಯುತ್ತದೆ ಇದರಿಂದಾಗಿ ಮಲ ಬದ್ದತೆ ಇಂದ ದೂರವಿರಬಹುದು.

ಇನ್ನು ಮೂಲಂಗಿ ಕೂಡ ಮಲಬದ್ದತೆ ಸಮಸ್ಯೆ ನಿವಾರಿಸಲು ಸಹಕಾರಿಯಾಗಿದೆ. ಮೂಲಂಗಿ ಸೊಪ್ಪಿನ ಜೊತೆ 15 ಕರಿಬೇವಿನ ಸೊಪ್ಪನ್ನು ಸೇರಿಸಿ ಅದಕ್ಕೆ ಕಾಲು ಚಮಚ ಓಂ ಕಾಳು ಸೇರಿಸಿ ಜಜ್ಜಿ ಅದನ್ನು ಮಿಶ್ರಣ ತಯಾರಿಸಿ ಸೇವನೆ ಮಾಡಿ ನಂತರ ನೀರಿಗೆ ತುಪ್ಪ ಸೇರಿಸಿ ಕುಡಿಯಬೇಕು.ಇದರಿಂದ ಮಲ ಬದ್ಧತೆ ತಡೆಯಬಹುದು.

ನಮ್ಮ ದಿನನಿತ್ಯದ ಆಹಾರದಲ್ಲಿ ನಾರಿನ ಅಂಶ ಹೆಚ್ಚಿರುವ ಆಹಾರ ತಿನ್ನುವುದರಿಂದ ಮಲಬದ್ಧತೆ ಇಂದ ದೂರವಿರಬಹುದು. ನಿತ್ಯದ ಆಹಾರದೊಂದಿಗೆ ಸೀಬೆ ಹಣ್ಣು ತಿನ್ನುವುದರಿಂದ ಕೂಡ ಮಲ ಬದ್ಧತೆ ಕಮ್ಮಿ ಆಗುವುದು.

ಪಾಲಕ್ ಸೊಪ್ಪು ದೇಹದ ಆರೋಗ್ಯವನ್ನು ಸುಧಾರಿಸಲು ಸಹಕಾರಿಯಾಗಿದೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಪಾಲಕ್ ಸೊಪ್ಪು ರಾಮಬಾಣದಂತೆ ಕೆಲಸ ಮಾಡುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ತಯಾರಿಸಿ ಅದಕ್ಕೆ ಎರಡು ಚಮಚದಷ್ಟು ಶುಂಠಿ ರಸ ಸೇರಿಸಿ ಅದನ್ನು ಸೇವಿಸಿದರೆ ಮಲ ಬದ್ಧತೆ ದೂರವಾಗುತ್ತದೆ.

ಒಣದ್ರಾಕ್ಷಿಯಲ್ಲಿಯೂ ಔಷಧೀಯ ಗುಣವಿದೆ. ದೇಹದ ಆಕಾರದಲ್ಲಿನ ಬದಲಾವಣೆಯಲ್ಲಿ ಒಣದ್ರಾಕ್ಷಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ರಾತ್ರಿ ಮಲಗುವುದಕ್ಕೆ ಮುನ್ನ 10 ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ನೆನೆಸಿಟ್ಟ ದ್ರಾಕ್ಷಿಯನ್ನು ಸೇವೆನೆ ಮಾಡುತ್ತಾ ಬಂದರೆ ಮಲಬದ್ದತೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಮಾವಿನ ಹಣ್ಣಿನ ರಸವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಿರಿ ಇದರಿಂದ ಕೂಡ ಮಲ ಬದ್ಧತೆ ಕಮ್ಮಿ ಆಗುವುದು. ಮಲಬದ್ಧತೆ ಕಮ್ಮಿ ಮಾಡಲು ಖಾಲಿ ಹೊಟ್ಟೆಗೆ ನೀರಿನಲ್ಲಿ ನಿಂಬೆ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುವುದು ಉತ್ತಮ.