ಸೋಮವಾರ, ಏಪ್ರಿಲ್ 28, 2025
HomeBreakingನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು...! ಸಿಎಂಗಳ ಜೊತೆ ಪಿಎಂ ಮಹತ್ವದ ಸಭೆ...!!

ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು…! ಸಿಎಂಗಳ ಜೊತೆ ಪಿಎಂ ಮಹತ್ವದ ಸಭೆ…!!

- Advertisement -

ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶತಪ್ರಯತ್ನದ ಬಳಿಕವೂ ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ನಿಯಂತ್ರಣ ನೀರಿಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ.

ಹೀಗಾಗಿ ಈ ಬಗ್ಗೆ ಆತಂಕಿತರಾಗಿರುವ ಪ್ರಧಾನಿ ಮೋದಿ ನಾಳೆ ೮ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಲಿದ್ದಾರೆ. ಕರ್ನಾಟಕದ ಸಿಎಂ ಬಿಎಸ್ವೈ ಸೇರಿದಂತೆ ಕೊರೋನಾ ಸೋಂಕು ಹೆಚ್ಚಿರುವ ರಾಜ್ಯಗಳ ಸಿಎಂ ಜೊತೆ ಸಭೆ ನಡೆಯಲಿದೆ.

ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಅಂಕಿ-ಸಂಖ್ಯೆ ಹಾಗೂ ರೋಗನಿಯಂತ್ರಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಿಎಂಗಳ ಜೊತೆ ಮೋದಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಒಟ್ಟು ಎರಡು ಹಂತದಲ್ಲಿ ಸಿಎಂಗಳ ಜೊತೆ ಸಭೆ ನಡೆಯಲಿದ್ದು, ನಾಳಿನ ಸಭೆ ಬಳಿಕ ಮುಂದಿನ ಸಭೆಯಲ್ಲಿ ಲಸಿಕೆ ಕುರಿತು ಚರ್ಚೆ ಹಾಗೂ ಲಸಿಕೆ ವಿತರಣೆಯ ರೂಪುರೇಷೆಯ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

ಎರಡನೇ ಹಂತದ ಸಭೆಯಲ್ಲಿ ಪಿಎಂ ನರೇಂದ್ರ‌ಮೋದಿ ಎಲ್ಲ ರಾಜ್ಯಗಳ ಸಿಎಂ ಹಾಗೂ ಕೇಂದ್ರಾಢಳಿತ ಪ್ರದೇಶಗಳ ಅಧಿಕಾರಿಗಳ ಜೊತೆಗೂ ಸಭೆ ನಡೆಸಲಿದ್ದಾರೆ.

RELATED ARTICLES

Most Popular