ಮತದಾರರ ಗುರುತಿನ ಪತ್ರಕ್ಕೂ ಬಣ್ಣದ ಬೆಸುಗೆ…! ಇನ್ಮುಂದೆ ಸಿಗಲಿದೆ ಕಲರ್ ಓಟರ್ ಐಡಿ..!!

ನವದೆಹಲಿ: ಪೋಟೋ ಹೇಗೆ ಬಂದಿದೆ ಅಂದ್ರೇ ಓಟರ್ ಐಡಿ ತರ ಅನ್ನೋ ತಮಾಷೆ ಮಾತೇ ಹೇಳುತ್ತೆ ನಮ್ಮ ಓಟರ್ ಐಡಿ ಕಾರ್ಡ್ ಪೋಟೋ ಹೇಗಿರುತ್ತೆ ಅಂತ. ಆದರೇ ಇನ್ಮುಂದೆ ಈ ಜೋಕ್ ಗೆ ನೀವು ಬ್ರೇಕ್ ಹಾಕಬೇಕು. ಯಾಕಂದ್ರೇ ದೇಶದಲ್ಲಿ ಕಲರ್ ಓಟರ್ ಐಡಿ ವಿತರಣೆಗೆ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.

ಮತದಾರರ ಗುರುತಿನ ಪತ್ರ ಅಥವಾ ಓಟರ್ ಐಡಿ ಕೇವಲ ಚುನಾವಣೆಗೆ ಮಾತ್ರವಲ್ಲದೇ ದೇಶದಲ್ಲಿ ವಾಸಿಸುವ ಪ್ರಜೆಗಳಿಗೆ ಒಂದು ಗುರುತಿನ ಪತ್ರವಾಗಿಯೂ ಬಳಸಲ್ಪಡುತ್ತದೆ.

ಐಡಿಪ್ರೂಫ್, ಅಡ್ರೆಸ್ ಪ್ರೂಫ್ ಹೀಗೆ ನಾನಾ ಕೆಲಸಕ್ಕೆ ಸಹಾಯವಾಗೋ ಓಟರ್ ಐಡಿಯನ್ನು ಇದುವರೆಗೂ ಸಾಂಪ್ರದಾಯಿಕವಾಗಿ ಕಪ್ಪು-ಬಿಳುಪಿನಲ್ಲೇ ಪ್ರಿಂಟ್ ಮಾಡಲಾಗುತ್ತಿತ್ತು.

ಆದರೆ ಇನ್ಮುಂದೆ ಮತದಾರರ ಗುರುತಿನ ಪತ್ರವನ್ನು ಕಲರ್ ಪ್ರಿಂಟ್ ನಲ್ಲಿ ನೀಡಲು ಆಯೋಗ ನಿರ್ಧರಿಸಿದೆ. ಮತದಾರನ ಭಾವಚಿತ್ರ, ಅಡ್ರೆಸ್, ಹುಟ್ಟಿದ ದಿನಾಂಕ, ಹೋಲೋಗ್ರಾಮ್ ಸ್ಟಿಕ್ಕರ್ ಹೊಂದಿರೋ ಈ ಐಡಿ ಕಾರ್ಡ್ ನ್ನು ಇನ್ಮುಂದೆ ಕಲರ್ ಪ್ರಿ‌ಂಟ್ ನಲ್ಲೂ ತೆಗೆದುಕೊಳ್ಳಬಹುದು.

ಈ ಅವಕಾಶ ಕೇವಲ ಹೊಸತಾಗಿ ಐಡಿ ಕಾರ್ಡ್ ಮಾಡಿಸುವವರಿಗೆ ಮಾತ್ರವಲ್ಲ, ಓಟರ್ ಐಡಿ ಕರೆಕ್ಷನ್ ಮಾಡಿಸುವವರಿಗೂ ಲಭ್ಯವಿದೆ. ಕೇವಲ ೩೦ ರೂಪಾಯಿ ಪಾವತಿಸಿ ಬಣ್ಣದ ಓಟರ್ ಐಡಿ ಕಾರ್ಡ್ ಪಡೆಯಬಹುದು.

ಅದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ…
ಸ್ಟೆಪ್-೧
ಎನ್ವಿಎಸ್ಪಿ .ಕಾಮ್ (nvsp.com) ಗೆ ಹೋಗಿ
೨. ಹೋಂ ಪೇಜ್ ನಲ್ಲಿ ಓಟರ್ ಐಡಿ ಪೋರ್ಟಲ್ ಗೆ ಕ್ಲಿಕ್ ಮಾಡಿ.
೩. ನಿಮ್ಮ ಎಂಟ್ರಿ ಯನ್ನು voterportal.eci.gov.in ನಲ್ಲಿ ರಿಜಿಸ್ಟರ್ ಮಾಡಿ ಕೊಳ್ಳಿ
೪. ನಿಮ್ಮ ಮೇಲ್ ಐಡಿ ಹಾಕಿ ಮತ್ತು ಕಂಟಿನ್ಯೂ ಕೊಡಿ. ನಿಮಗೊಂದು ಮೇಲ್ ಬರುತ್ತದೆ.
೫.ಮೇಲ್‌ನಲ್ಲಿ ಕೇಳಲಾದ ನೋಂದಣಿ ಪ್ರೊಸೆಸ್ ಪೂರ್ತಿಗೊಳಿಸಿ.
೬. ಫಾರ್ಮ್ ಸಿಕ್ಸ್ ( form-6) ಪೂರ್ತಿಗೊಳಿಸಿ
೭. ನಿಮ್ಮ ಭಾವಚಿತ್ರ ಹಾಗೂ ಕೇಳಲಾದ ಡಾಕ್ಯುಮೆಂಟ್ ಗಳನ್ನು ಅಪ್ ಮಾಡಿ.
ಹೀಗೆ ಈ ಹಂತಗಳಲ್ಲಿ‌ನೀವು ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಬಳಿಕ ಆಯೋಗ ನಿಮಗೆ ಓಟರ್ ಐಡಿ ನೀಡುತ್ತದೆ.

www.nvsp.in ಮೂಲಕ ನೀವು ನಿಮ್ಮ ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು.

Comments are closed.