ವಾಕ್ಸಿನ್ ಪಡೆಯಿರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ…! ಅಧ್ಯಯನ ವರದಿಯಲ್ಲಿ ಸಾಬೀತಾಯ್ತು ಲಸಿಕೆ ಮಹತ್ವ…!

ಕೊರೋನಾ ಕಾಟದಿಂದ ಕಂಗಾಲಾಗಿ ವಾಕ್ಸಿನ್ ಮೊರೆ ಹೋಗುತ್ತಿರುವ ವರಿಗೆ ಸಿಹಿಸುದ್ದಿಯೊಂದು ಕಾದಿದೆ. ವಾಕ್ಸಿನ್ ಪಡೆದವರು 97.38 ರಷ್ಟು ಸೇಫ್ ಎಂಬುದನ್ನು ಅಧ್ಯಯನ ಹೇಳಿದೆ.

ಲಸಿಕೆ ಪಡೆದವರಿಗೆ ಒಂದೊಮ್ಮೆ ಕೊರೋನಾ ಸೋಂಕು ತಗುಲಿದರೇ ಅವರ ಆಸ್ಪತ್ರೆ ಗೆ ದಾಖಲಾಗುವ ಪ್ರಮಾಣ ಕೇವಲ ಶೇಕಡಾ ೦.೦6 ರಷ್ಟು ಎಂದು ಅಧ್ಯಯನ ಹೇಳಿದ್ದು ಇದು ಲಸಿಕೆಯ ಮಹತ್ವವನ್ನು ಎತ್ತಿ ಹಿಡಿದಿದೆ.

https://kannada.newsnext.live/two-wife-husband-umapathi-arrest-kolara/

ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ನಡೆಸಿದ ಅಧ್ಯಯನ ದಲ್ಲಿ ಈ ಅಂಶ ಸಾಬೀತಾಗಿದೆ. ಕೋವಿಶೀಲ್ಡ್ ಪಡೆದುಕೊಂಡ 1೦೦ ಅಪೋಲೋ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ ಎಂದು ಪೀರ್ ರಿವಿವ್ಯೂಡ್ ಮೆಡಿಕಲ್ ಜರ್ನಲ್ ವರದಿ ಪ್ರಕಟಿಸಿದೆ.

ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ನ ಗ್ರೂಪ್ ಮೆಡಿಕಲ್ ಡೈರೆಕ್ಟರ್ ಡಾ.ಅನುಪಮ್ ಸಿಬಲ್ ಹೆಚ್ಚಿನ ಮಾಹಿತಿ ನೀಡಿದ್ದು, ಎರಡನೆ ಅಲೆ ಭಾರಿ ಏರಿಕೆ ಕಂಡಿದೆ. ಜೊತೆಗೆ ಲಸಿಕೆ ನೀಡುವಿಕೆಯೂ ನಡೆದಿದೆ. ಲಸಿಕೆ ಪಡೆದವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.

https://kannada.newsnext.live/nhai-job-offers-for-civil-engineers/

ಈ ರೀತಿಯ ಪ್ರಕರಣವನ್ನು ನಾವು ಬ್ರೇಕ್ ಥ್ರೂ ಎಂದು ಕರೆಯುತ್ತೇವೆ. ಆದರೆ ಇದರಲ್ಲಿ ಸೋಂಕಿನ ಪ್ರಭಾವ ಕಡಿಮೆ‌ ಇರುತ್ತದೆ. ವಾಕ್ಸಿನ್ ನೂರಕ್ಕೆ ನೂರು ಇಮ್ಯುನಿಟಿ ನೀಡೋದಿಲ್ಲ.ಆದರೆ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಸೋಂಕು ಪಡೆದವರಲ್ಲಿ 1೦೦ ಜನರಿಗೆ ಸೋಂಕು ಬಂದ್ರೇ ಅದರಲ್ಲಿ ಆಸ್ಪತ್ರೆ ಗೆ ದಾಖಲಾಗುವವರ ಸಂಖ್ಯೆ ಕಡಿಮೆ.

https://kannada.newsnext.live/sandalwood-meghanaraj-instagram-stories-funnyvideo-reality-vs-expectation/

ಹೀಗೆ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ದ ಅಂಶ ಹಂಚಿಕೊಂಡಿದ್ದಾರೆ. ಈ ಅಧ್ಯಯನಕ್ಕೆ 3,235 ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗಿದ್ದು ಈ ಪೈಕಿ ಕೇವಲ 85 ಜನರಿಗೆ ಆಸ್ಪತ್ರೆ ಸೇರುವ ಪ್ರಮೇಯ ಬಂದಿತ್ತು.

Comments are closed.