ಮುಂಬೈ : ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ದೇಶದಾದ್ಯಂತ ಮೇ 3ರ ವೆರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಪೂಜೆಗೆಂದು ಮುಂಬೈಗೆ ತೆರಳಿದ್ದ ಅರ್ಚಕರೋರ್ವರು ಊರಿಗೆ ಬರಲಾಗಿಲ್ಲಾ ಅನ್ನೋ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೀರೆ ಬೈಲೂರು ಗ್ರಾಮದ ಕೃಷ್ಣ ಶಾಂತಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚಿಗಷ್ಟೇ ಕೃಷ್ಣ ಶಾಂತಿ ಅವರು ಮುಂಬೈನ ಕಾಂದಿವಿಲಿಯಲ್ಲಿನ ಭದ್ರಕಾಳಿ ದೇವಸ್ಥಾನಕ್ಕೆ ಪೂಜೆಗೆ ಅಂತಾ ತೆರಳಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಾಗಿದೆ. ಹೀಗಾಗಿ ಕಳೆದ 22 ದಿನಗಳಿಂದಲೂ ಕೃಷ್ಣಶಾಂತಿ ಅವರು ಮುಂಬೈನಲ್ಲಿಯೇ ಉಳಿದುಕೊಂಡಿದ್ದರು.

ಒಂದೆಡೆ ಮುಂಬೈನಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇನ್ನೊಂದೆಡೆ ಊರಿಗೆ ತೆರಳೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಕೊರಗು ಕೃಷ್ಣಶಾಂತಿ ಅವರನ್ನು ಕಾಡುತ್ತಿತ್ತು. ಇದರಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಕೃಷ್ಣಶಾಂತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.