ಲಾಕ್ ಡೌನ್ 2.0 ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ : ಯಾರಿಗೆಲ್ಲಾ ವಿನಾಯಿತಿ ? ಯಾರಿಗೆಲ್ಲಾ ನಿರ್ಬಂಧ !

0

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಹಳೆಯ ಅನುಸೂಚಿಯನ್ನೇ ಮುಂದುವರಿಸಿದ್ದು, ಕೆಲವು ಸೇವೆಗಳಿಗೆ ಮಾತ್ರವೇ ಕೇಂದ್ರ ಸರಕಾರ ಅವಕಾಶವನ್ನು ಕಲ್ಪಿಸಿದೆ. ಮನೆಯಿಂದ ಹೊರಗೆ ಬರಬೇಕಾದ್ರೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕಟ್ಟಪ್ಪಣೆಯನ್ನು ಹೊರಡಿಸಿದೆ. ಹಾಗಾದ್ರೆ ಯಾವುದಕ್ಕೆಲ್ಲಾ ವಿನಾಯಿತಿ ನೀಡಿದ್ರೆ, ಇನ್ನೂ ಯಾವುದಕ್ಕೆ ನಿರ್ಬಂಧ ಹೇರಿವೆ ಅನ್ನೋ ಕುರಿತು ಮಾಹಿತಿ ಇಲ್ಲಿದೆ.

ಯಾವುದಕ್ಕೆಲ್ಲಾ ವಿನಾಯಿತಿ ?
ಲಾಕ್ ಡೌನ್ 2.0 ಮಾರ್ಗ ಸೂಚಿಯ ಪ್ರಕಾರ ಜನರಿಗೆ ಈಗಾಗಲೇ ಕೃಷಿ ಚಟುವಟಿಕೆ ಹಾಗೂ ಮೀನುಗಾರಿಕೆಗೆ ನೀಡಲಾಗಿದ್ದ ವಿನಾಯಿತಿಯನ್ನು ಕೇಂದ್ರ ಸರಕಾರ ಮುಂದುವರಿಸಿದೆ.

ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಜನರಿಗೆ ಮೀನು, ಮಾಂಸ, ತರಕಾರಿ ಹಾಗೂ ದಿನಸಿ ವಸ್ತುಗಳ ಲಭ್ಯತೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವಂತೆ ಕೇಂದ್ರ ಸರಕಾರ ರಸಗೊಬ್ಬರ, ಕೀಟನಾಶಕ, ಬೀಜ ಮಾರಾಟದ ಅಂಗಡಿಗಳನ್ನು ತೆರೆಯಲು ಅವಕಾಶವನ್ನು ಕಲ್ಪಿಸಿದೆ. ಕೃಷಿ ಚಟುವಟಿಕೆಯನ್ನು ನಡೆಸೋದಕ್ಕೆ ಕೂಡ ರೈತರಿಗೆ ಲಾಕ್ ಡೌನ್ ಆದೇಶದಿಂದ ವಿನಾಯಿತಿಯನ್ನು ನೀಡಲಾಗಿದೆ.

ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಬ್ಯಾಂಕಿಂಗ್ ಸೇವೆಯನ್ನು ಮುಂದುವರಿಸಲಾಗುತ್ತದೆ. ಎಟಿಎಂಗಳು ತೆರೆಯಲಿದ್ದು, ಎಟಿಎಂ ಸಿಬ್ಬಂಧಿಗಳು ಕೂಡ ಎಂದಿನಂತೆಯೇ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಇನ್ಶುರೆನ್ಸ್ ಕಂಪೆನಿಗಳು ಕೂಡ ಕಾರ್ಯನಿರ್ವಹಿಸಲಿವೆ.

ಜನರಿಗೆ ಅಗತ್ಯ ಸೇವೆಗಳನ್ನು ಪೂರೈಸುವ ಸಲುವಾಗಿ ಆಹಾರ, ವೈದ್ಯಕೀಯ ಸರಬರಾಜು ಹಾಗೂ ಅಗತ್ಯ ತುರ್ತು ಸೇವೆಗಳಿಗೂ ಕೂಡ ಕೇಂದ್ರ ಸರಕಾರ ವಿನಾಯಿತಿಯನ್ನು ನೀಡಿದೆ. ಮಾತ್ರವಲ್ಲ ಈ ಕಾಮರ್ಸ್ ಸಿಬ್ಬಂಧಿಗಳಿಗೂ ಕೂಡ ಲಾಕ್ ಡೌನ್ ಆದೇಶದಿಂದ ವಿನಾಯಿತಿ ಕಲ್ಪಿಸಲಾಗಿದೆ.

ಇನ್ನು ಪೆಟ್ರೋಲ್ ಬಂಕ್, ಎಲ್ ಪಿಜಿ ಹಾಗೂ ವಿದ್ಯುತ್ ನಿಗಮದ ಸಿಬ್ಬಂಧಿಗಳಿಗೆ ಲಾಕ್ ಡೌನ್ 2.0 ಮಾರ್ಗ ಸೂಚಿಯಲ್ಲಿ ವಿನಾಯಿತಿಯನ್ನು ನೀಡಲಿದ್ದು, ಪೆಟ್ರೋಲ್ ಬಂಕ್ ಗಳು ಹಾಗೂ ವಿದ್ಯುತ್ ನಿಗಮಗಳು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ. ಮೀನುಗಾರಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸೋ ಸಲುವಾಗಿ ಕೋಲ್ಡ್ ಸ್ಟೋರೆಜ್ ಹಾಗೂ ಎಪಿಎಂಸಿ ವ್ಯಾಪಾರಿಗಳಿಗೂ ಕೂಡ ವಿನಾಯಿತಿಯನ್ನು ಕಲ್ಪಿಸಲಾಗಿದೆ.

ಖಾಸಗಿ ಭದ್ರತೆ, ಸರಕಾರಿ ಸೇವೆಗಳ ಡೇಟಾ ಎಂಟ್ರಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು, ಸರಕಾರಿ ಕಾಲ್ ಸೆಂಟರ್ ಸಿಬ್ಬಂಧಿಗಳಿಗೆ ಹಾಗೂ ಮಾಧ್ಯಮದವರಿಗೆ ವಿನಾಯಿತಿಯನ್ನು ಮುಂದುವರಿಸಲಾಗಿದೆ. ಪ್ರಿಂಟ್, ಇಲೆಕ್ಟ್ರಾನಿಕ್ ಮಾಧ್ಯದವರ ಜೊತೆಗೆ ಇಂಟರ್ ನೆಟ್ ಸೇವೆ, ಕೇಬಲ್ ಆಪರೇಟರ್ ಹಾಗೂ ಟೆಲಿಕಾಂ ಕಂಪೆನಿಗಳ ಸಿಬ್ಬಂಧಿಗಳಿಗೂ ಕೂಡ ಹೊಸ ಮಾರ್ಗಸೂಚಿಯ ಮೂಲಕ ವಿನಾಯಿತಿಯನ್ನು ನೀಡಲಾಗಿದೆ.

ಯಾವುದಕ್ಕೆಲ್ಲಾ ನಿರ್ಬಂಧ ಮುಂದುವರಿಕೆ ?
ಮೇ 3ರ ವರೆಗೆ ಲಾಕ್ ಡೌನ್ ಆದೇಶ ಮುಂದುವರಿಯಲಿದ್ದು, ಲಾಕ್ ಡೌನ್ 2.0 ಮಾರ್ಗಸೂಚಿಯ ಪ್ರಕಾರ ವಿಮಾನಯಾನ, ರೈಲು ಸೇವೆ, ಮೆಟ್ರೋ ಸೇವೆ ಹಾಗೂ ಸಾರ್ವಜನಿಕ ರಸ್ತೆ ಸಾರಿಗೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಶೈಕ್ಷಣಿಕ ಸೇವೆಗಳ ಮೇಲೆಯೂ ನಿರ್ಬಂಧವನ್ನು ಮುಂದುವರಿಸಲಾಗಿದ್ದು, ಶೈಕ್ಷಣಿಕ ಸಂಸ್ಥೆಗಳು ಯಾವುದೇ ಕಾರಣಕ್ಕೂ ಓಪನ್ ಮಾಡುವಂತಿಲ್ಲ. ಮಾತ್ರವಲ್ಲ ಟ್ರೈನಿಂಗ್, ಸಂಶೋಧನೆ ಹಾಗೂ ಕೋಚಿಂಗ್ ಸೆಂಟರ್ ಗಳು ಕೂಡ ಬಂದ್ ಆಗಲಿವೆ.

ಇನ್ನು ಸಭೆ, ಸಮಾರಂಭ ಹಾಗೂ ಧಾರ್ಮಿಕ ಸಭೆಗಳನ್ನು ಯಾವುದೇ ಕಾರಣಕ್ಕೂ ನಡೆಸುವಂತಿಲ್ಲ. ಅಲ್ಲದೇ ಸಾಮಾಜಿಕ, ರಾಜಕೀಯ ಸಮಾರಂಭ, ಕ್ರೀಡಾ ಚಟುವಟಿಕೆ ಹಾಗೂ ಮನೋರಂಜನಾ ಕಾರ್ಯಕ್ರಮಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಇನ್ನು ಕುಟುಂಬದಲ್ಲಿ ಯಾರಾದ್ರೂ ಮೃತಪಟ್ಟರೆ 20 ಜನರಿಗಿಂತ ಹೆಚ್ಚು ಜನರು ಯಾವುದೇ ಕಾರಣಕ್ಕೂ ಸೇರುವಂತಿಲ್ಲ ಅಂತಾ ಕೇಂದ್ರ ಸರಕಾರದ ಹೊಸ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರಕಾರಕ್ಕೆ ಪರಮಾಧಿಕಾರ
ಕಾಫಿ, ರಬ್ಬರ್ ಹಾಗೂ ಕಲ್ಲಿದ್ದಲು ಕಾರ್ಖಾನೆಗಳು ಕಾರ್ಯನಿರ್ವಹಿಸೋದಕ್ಕೆ ಹೊಸ ಮಾರ್ಗ ಸೂಚಿಯ ಪ್ರಕಾರ ಅನುಮತಿಯನ್ನು ನೀಡಲಾಗಿದೆ. ಆದರೆ ಕೇವಲ ಶೇಕಡಾ 50 ರಷ್ಟು ಮಾತ್ರವೇ ಕಾರ್ಮಿಕರನ್ನು ಬಳಕೆ ಮಾಡುವಂತೆಯೇ ಸೂಚನೆ ನೀಡಿದೆ. ಒಂದೊಮ್ಮೆ ಹೆಚ್ಚುವರಿ ಸಿಬ್ಬಂಧಿಯನ್ನು ಬಳಕೆ ಮಾಡಿದ್ರೆ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿಯೂ ಎಚ್ಚರಿಕೆಯನ್ನು ನೀಡಿದೆ. ಮಾತ್ರವಲ್ಲ ಕೃಷಿ ಸೇರಿ ಇನ್ನಿತರ ಸೇವೆಗಳಿಗೆ ವಿನಾಯಿತಿಯನ್ನು ನೀಡುವ ಪರಮಾಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ.

ಪರಿಸ್ಥಿತಿಗೆ ಅನುಗುಣವಾಗಿ ಉದ್ಯಮ, ಉತ್ಪಾದನೆ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನಿರ್ಣಯವನ್ನು ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡಲಾಗಿದೆ.

Leave A Reply

Your email address will not be published.