ಐಸೊಲೇಷನ್ ವಾರ್ಡ್ ಆಗಿ ಬದಲಾಗಲಿದೆ ಕೇರಳದ ಬೋಟ್‌ಹೌಸ್..!

0

ಕೇರಳ : ದೇವರನಾಡು ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಆದ್ರೀಗ ಕೇರಳದ ಬೋಟ್ ಹೌಸ್ ಗಳನ್ನೇ ಐಸೋಲೇಷನ್ ವಾರ್ಡ್ ಆಗಿ ಬಳಕೆ ಮಾಡಲು ಕೇರಳ ಸರಕಾರ ಮುಂದಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಕೇರಳದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕು ಇಂದು ದೇಶದಾದ್ಯಂತ ವ್ಯಾಪಿಸಿದೆ. ಅದ್ರಲ್ಲೂ ಕೇರಳದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಒದಗಿಸುವುದೇ ಕೇರಳ ಸರಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿಯೇ ಕೇರಳ ಸರಕಾರ ಇದೀಗ ಕೇರಳದಲ್ಲಿರುವ ಬೋಟ್ ಹೌಸ್ ಗಳನ್ನೇ ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸುವುದು ಸರಕಾರ ಮುಂದಾಗಿದೆ.

ಪ್ರಾಯೋಗಿಕವಾಗಿ ಕೇರಳದ ಆಲಾಪುಝಾ ಜಿಲ್ಲೆಯಲ್ಲಿ ಬೋಟ್‌ಹೌಸ್‌ಗಳನ್ನ ಐಸೊಲೇಷನ್ ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಐಸೋಲೇಷನ್ ವಾರ್ಡ್ ಗಳ ಸಂಖ್ಯೆ 1500 ರಿಂದ 2000ಕ್ಕೆ ಹೆಚ್ಚಳವಾಗಲಿದೆ ಎಂದು ಅಲಾಪುಝಾ ಜಿಲ್ಲಾಧಿಕಾರಿ ಎಂ.ಅಂಜನಾ ಹೇಳಿದ್ದಾರೆ.

ಕೇರಳದಲ್ಲಿರುವ ಬೋಟ್ ಹೌಸ್ ಗಳಲ್ಲಿ ಹಾಸಿಗೆಯ ವ್ಯವಸ್ಥೆಗಳಿವೆ. ಹೀಗಾಗಿ ಇಂತಹ ಬೋಟ್ ಹೌಸ್ ಗಳಿಗೆ ಕೇವಲ ವೈದ್ಯಕೀಯ ಉಪಕರಣ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಿದ್ರೆ ಸಾಕು ಬೋಟ್ ಹೌಸ್ ಗಳು ಐಸೋಲೇಷನ್ ವಾರ್ಡ್ ಗಳಾಗಿ ಪರಿವರ್ತನೆಯಾಗಲಿವೆ.

ಹೀಗಾಗಿ ಅಲಾಫುಝಾ ಜಿಲ್ಲೆಯಲ್ಲಿರುವ ಬೋಟ್ ಹೌಸ್ ಗಳನ್ನು ಐಸೋಲೇಷನ್ ವಾರ್ಡ್ ಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಮಾತ್ರವೇ ಬೋಟ್ ಹೌಸ್ ಗಳನ್ನು ಬಳಕೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.

Leave A Reply

Your email address will not be published.