ಬೆಂಗಳೂರು : ಕರ್ನಾಟಕದಲ್ಲಿಂದು ಕೊರೊನಾ ಸುನಾಮಿಯೇ ಬೀಸಿದೆ. ರಾಜ್ಯದಲ್ಲಿಂದು ಒಂದೇ ದಿನ 196 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದ್ದು, ಸಂಜೆಯ ವೇಳೆಗೆ ಸೋಂಕಿತರ ಸಂಖ್ಯೆ 2,000 ದ ಗಡಿದಾಟುವ ಸಾಧ್ಯತೆಯಿದೆ.

ಯಾದಗಿರಿ ಜಿಲ್ಲೆಯಲ್ಲಿಂದು ಕೊರೊನಾ ಶಾಕ್ ಕೊಟ್ಟಿದೆ. ಇಂದು ಬರೋಬ್ಬರಿ 72 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, ರಾಯಚೂರಿನಲ್ಲ 39 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದೆ. ಉಳಿದಂತೆ ಸಕ್ಕರೆ ನಾಡು ಮಂಡ್ಯದಲ್ಲಿಯೂ ಇಂದು 28 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ ನಿನ್ನೆ ದಾಖಲೆಯ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿದ್ದ ಚಿಕ್ಕಬಳ್ಳಾಪುರದಲ್ಲಿ ಇಂದು 20 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಗದಗ 15, ಬೆಂಗಳೂರು ನಗರ 4, ಉತ್ತರ ಕನ್ನಡ 3, ದಕ್ಷಿಣ ಕನ್ನಡ 3, ಕೋಲಾರ 2, ಉಡುಪಿ 1, ಧಾರವಾಡ 1, ಬೆಳಗಾವಿ, 1, ಕಲಬುರಗಿ 1, ಗುಲ್ಬರ್ಗಾ 1 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇನ್ನು ಮುಂಬೈನಿಂದ ವಾಪಾಸಾಗಿದ್ದವರ ಪೈಕಿ 16 ಮಂದಿ ಮಕ್ಕಳು ಸೇರಿದಂತೆ 72 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ 196 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಂಜೆಯ ವೇಳೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.