ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಅದ್ರಲ್ಲೂ ಹೊರ ರಾಜ್ಯಗಳಿಂದ ಬರುವವರಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಠಿಣ ಕ್ವಾರಂಟೈನ್ ಆದೇಶ ಹೊರಡಿಸಿದ್ದು, ಕೈಯಲ್ಲಿ ಕ್ವಾರಂಟೈನ್ ಸೀಲ್ ಹೊಂದಿದ್ದರೇ ಅಂತವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧ ಹೇರಿದೆ.

ಹೊರ ರಾಜ್ಯದವರಿಂದಲೇ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಅದ್ರಲ್ಲೂ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ ಸಾಂಸ್ಥಿಕ ಹಾಗೂ 7 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿತ್ತು.

ಇದೀಗ ಕ್ವಾರಂಟೈನ್ ಅವಧಿ ಮುಗಿಯುತ್ತಲೇ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯ ಕ್ವಾರಂಟೈನ್ ಅವಧಿಯನ್ನು 21 ದಿನಗಳಿಗೆ ವಿಸ್ತರಿಸಲಾಗಿದೆ. ಹೀಗಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 14 ದಿನ ಹೋಮ್ ಕ್ವಾರಂಟೈನ್ ಒಳಪಡಿಸಲು ಸರಕಾರ ಆದೇಶಿಸಿದೆ. ಗರಿಕರು, ವಸತಿ ಸಂಕೀರ್ಣಗಳ ವಸತಿ ಕಲ್ಯಾಣ ಸಮಿತಿ ಸದಸ್ಯರು ಸಹ ಈ ರೀತಿಯ ಉಲ್ಲಂಘನೆಗಳು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಕ್ವಾರಂಟೈನ್ ಅವಧಿಯಲ್ಲಿ ಹೊರ ರಾಜ್ಯದವರು ಮನೆಗಳಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.

ಇನ್ನು ಹೊರ ರಾಜ್ಯಗಳಿಂದ ಬರುವವರಿಗೆ ಮುಂಬೈಗೆ ಕ್ವಾರಂಟೈನ್ ಮುದ್ರೆಯನ್ನು ಕಡ್ಡಾಯವಾಗಿ ಜಿಲ್ಲಾಡಳಿತಗಳು ಹಾಕಲೇ ಬೇಕು. ಕ್ವಾರಂಟೈನ್ ಸೀಲ್ ಹಾಕಿಸಿಕೊಂಡವರು ಕಡ್ಡಾಯವಾಗಿ ಕ್ವಾರಂಟೈನ್ ಆದೇಶವನ್ನು ಪಾಲನೆ ಮಾಡಲೇಬೇಕು. ವಾಣಿಜ್ಯ ಮಹಿಳೆ, ಮಾಲ್, ಕಚೇರಿ, ಅಂಗಡಿ, ಹೋಟೆಲ್ ಹಾಗೂ ದೇವಸ್ಥಾನಗಳನ್ನು ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೇ ಪ್ರವೇಶ ದ್ವಾರದಲ್ಲಿಯೇ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದೂ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಕೂಡಲೇ ಪೊಲೀಸ್ ಠಾಣೆಯ ಸಹಾಯವಾಣಿ 100 ಕರೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ.