ಹೆಚ್ಚುತ್ತಿದೆ ಕೊರೊನಾ ಮಹಾಮಾರಿ : ಕುಂದಾಪುರ, ಬೈಂದೂರು 80 ಕಡೆ ಸೀಲ್ ಡೌನ್

0

ಕುಂದಾಪುರ : ಕರಾವಳಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಜಿಲ್ಲೆಯ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಸುಮಾರು 80 ಕಡೆಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಬೈಂದೂರು ತಾಲೂಕಿನಲ್ಲಿ ಅತೀ ಹೆಚ್ಚು ಕಡೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಪ್ರಮುಖವಾಗಿ ಬೈಂದೂರು, ಶಿರೂರು, ಯಡ್ತರೆ, ಗೋಳಿಹೊಳೆ, ಜಡ್ಕಲ್, ಕೊಲ್ಲೂರು, ಗುಜ್ಜಾಡಿ, ನಾವುಂದ, ಕಂಬದಕೋಣೆ, ಹಡವುನಾಡ, ನೇಂಪು, ಕುಂದಾಪುರ, ಹಕ್ಲಾಡಿ, ಹಳ್ನಾಡು, ಬೀಜಾಡಿ, ತೆಕ್ಕಟ್ಟೆ, ಕುಂದಾಪುರ ಕೋಡಿ, ತಲ್ಲೂರು, ಮರವಂತೆ, ಕರ್ಕುಂಜೆ, ಬಸ್ರೂರು, ಕೋಣಿ, ಕೆದೂರು, ಗಂಗೊಳ್ಳಿ ಸೇರಿದಂತೆ ಒಟ್ಟು 80 ಕಡೆಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಕೊರೊನಾ ಪಾಸಿಟಿವ್ ದೃಢಪಡುತ್ತಿರುವ ವ್ಯಕ್ತಿಯ ಮನೆ ಸುತ್ತಲಿನ ಸುಮಾರು 200 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಅದ್ರಲ್ಲೂ ಮುಂಬೈನಿಂದ ಬಂದವರಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ. ಬಹುತೇಕರು ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ ನಂತರ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕವನ್ನು ಮೂಡಿಸಿದೆ.

Leave A Reply

Your email address will not be published.