ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದಿನಿಂದ ಲಾಕ್ಡೌನ್ 3.0 ಆದೇಶಿಸಲಾಗಿದೆ. ಲಾಕ್ ಡೌನ್ ನಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರಕಾರ ಗುಡ್ ನ್ಯೂಸ್ ನೀಡಿದ್ದು, ಎಲ್ ಪಿಜಿ ಸಿಲಿಂಡರ್ ಗಳ ಮೇಲಿನ ದರದಲ್ಲಿ ಬಾರೀ ಇಳಿಕೆ ಮಾಡಿದೆ. ಇದರಿಂದಾಗಿ ಮಧ್ಯಮ ಹಾಗೂ ಬಡವರ್ಗದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೇಂದ್ರ ಸರಕಾರ ಸಬ್ಸಿಡಿರಹಿತ ಸಿಲಿಂಡರ್ಗಳ ಮೇಲಿನ ಬೆಲೆಯಲ್ಲಿ 192 ರೂ. ಕಡಿಮೆಗೊಳಿಸಿದೆ. ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಕಡಿತಗೊಳಿಸಿದಂತಾಗಿದೆ.

ಭಾರತೀಯ ಅನಿಲ ಮತ್ತು ಗ್ಯಾಸ್ ಕಂಪನಿಗಳ ಉತ್ಪಾದನೆಯ ಮೌಲ್ಯ ಕಡಿಮೆ ಆಗಿರವುದರಿಂದ ಸಿಲಿಂಡರ್ ಬೆಲೆಯನ್ನು ದಾಖಲೆಯ ಮೊತ್ತಕ್ಕೆ ಕಡಿತಗೊಳಿಸಲಾಗಿದೆ.

ದೇಶದಾದ್ಯಂತ 14.2 ಕೆ.ಜಿ. ಸಿಲಿಂಡರ್ಗಳ ಬೆಲೆ ದೆಹಲಿಯಲ್ಲಿ 744 ರೂ. ಇದ್ದು, ಇದೀಗ ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 581.50 ರೂ. ಇಳಿಕೆಯಾಗಿದೆ. ಮುಂಬೈನಲ್ಲಿ 714.50 ರೂ. ನಿಂದ ಇದೀಗ 579 ರೂ. ಇಳಿದಿದೆ.

ಕೊಲ್ಕತಾದಲ್ಲಿ 774.50 ರೂ.ನಿಂದ 585.50 ರೂ.ಗೆ ಇಳಿಕೆಯಾಗಿದ್ರೆ, ಚೆನ್ನೈನಲ್ಲಿ 761.50 ರೂ.ನಿಂದ 569.50 ರೂ.ಗೆ ಎಲ್ಪಿಜಿ ದರ ಇಳಿಕೆಯಾಗಿದೆ.