ಕೃಷ್ಣ ಸುಂದರಿ ತ್ರಿಷಾ ಕೃಷ್ಣನ್ ಹುಟ್ಟು ಹಬ್ಬದ ಸಂಭ್ರಮ

0

ಬಹುಭಾಷಾ ನಟಿ.. ಕೃಷ್ಣ ಸುಂದರಿ.. ಡಿಫರೆಂಟ್ ಆ್ಯಕ್ಟಿಂಗ್ ನಿಂದಲೇ ಸಿನಿರಸಿಕರ ಮನಗೆದ್ದ ತ್ರಿಷಾ ಕೃಷ್ಣನ್ 36ನೇ ವಸಂತಕ್ಕೆ ಕಾಲಿರಿಸಿದ್ದಾರೆ.

16ನೇ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ತ್ರಿಷಾ ಕೃಷ್ಣನ್ ಕಾಲಿವುಡ್​ನ ಜೋಡಿ ಸಿನಿಮಾ ಮೂಲಕ ಚಿತ್ರರಸಿಕ ಮನಗೆದ್ದಿದ್ದರು. ಮಾತ್ರವಲ್ಲ ತನ್ನ ಪ್ರತಿಭೆಯಿಂದಲೇ ಭಾರತೀಯ ಚಿತ್ರರಂಗದಲ್ಲಿಯೇ ಛಾಪು ಮೂಡಿಸಿದ್ದಾರೆ.

ಹಾಟ್​​​ ಆ್ಯಂಡ್​​​ ಬೋಲ್ಡ್​​ ಲುಕ್​​ನಿಂದಲೇ ಲಕ್ಷಾಂತರ ಮಂದಿ ಫಾಲೋವರ್ಸ್ ಗಳನ್ನು ಹೊಂದಿರೋ ಬೆಡಗಿ ತ್ರಿಷಾ ಕೃಷ್ಣನ್ ಕಾಲಿವುಡ್​​​​ ಮಾತ್ರವಲ್ಲದೆ ಸ್ಯಾಂಡಲ್ ವುಡ್, ಟಾಲಿವುಡ್​​, ಬಾಲಿವುಡ್​​​​ ಸೇರಿದಂತೆ ಮಾಲಿವುಡ್​ನಲ್ಲಿಯೂ ಮಿಂಚಿದ್ದಾರೆ.

ಮೂಲತ: ಚೆನ್ನೈನವರಾಗಿರೋ ತ್ರಿಷಾ ಕಾಲೇಜ್​​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಮಾಡೆಲಿಂಗ್​ ಲೋಕಕ್ಕೆ ಎಂಟ್ರಿ ಕೊಟ್ಟವರು. ತನ್ನ ಚೆಲುವು, ಬ್ಯೂಟಿಫುಲ್​ ಲುಕ್​ನಿಂದ ಮಿಸ್​​ ಮದ್ರಾಸ್​​ ಪಟ್ಟ ಗಿಟ್ಟಿಸಿಕೊಂಡಿದ್ದವರು.

ಸದ್ಯ ತ್ರಿಷಾ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಮಾತ್ರವಲ್ಲ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ತ್ರಿಷಾ ಹಾಟ್​ ಎಂಡ್​​ ಬೋಲ್ಡ್​​ ಅವತಾರದಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳೋ ಮೂಲಕ ಪಡ್ಡೆ ಹೈಕಳ ನಿದ್ದೆಗೆಡಿಸುತ್ತಿದ್ದಾರೆ.

Leave A Reply

Your email address will not be published.