ಭಾನುವಾರ, ಏಪ್ರಿಲ್ 27, 2025
HomeBreakingವಿರುಷ್ಕಾ ಮಗಳು ವಮಿಕಾ....! ಪುತ್ರಿ ಜೊತೆ ಪೋಟೋಗೆ ಪೋಸ್ ಕೊಟ್ಟ ಕೊಹ್ಲಿ ದಂಪತಿ...!!

ವಿರುಷ್ಕಾ ಮಗಳು ವಮಿಕಾ….! ಪುತ್ರಿ ಜೊತೆ ಪೋಟೋಗೆ ಪೋಸ್ ಕೊಟ್ಟ ಕೊಹ್ಲಿ ದಂಪತಿ…!!

- Advertisement -

ಇತ್ತೀಚೆಗಷ್ಟೇ ಮನೆಗೆ ಮುದ್ದಾದ ಮಗಳನ್ನು ಸ್ವಾಗತಿಸಿದ ಬಾಲಿವುಡ್ ನಟಿ ಅನುಷ್ಕಾ ಹಾಗೂ ಕ್ರಿಕೇಟರ್, ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮಗಳ ಪೋಟೋ ಹಾಗೂ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮಗಳನ್ನು ಎತ್ತಿಕೊಂಡಿರುವ ಪೋಟೋ ಹಂಚಿಕೊಂಡಿರುವ ವಿರುಷ್ಕಾ ದಂಪತಿ ಮಗಳ ಹೆಸರನ್ನು ವಮಿಕಾ ಎಂದು ಘೋಷಿಸಿದ್ದಾರೆ.

ಜನವರಿ ೧೧ ರಂದು ಅನುಷ್ಕಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ, ಎಲ್ಲರೂ ನಮ್ಮ ಪ್ರವೈಸಿ ಗೌರವಿಸಬೇಕು ಮತ್ತು ಮಗಳ ಪೋಟೋ ತೆಗೆಯಬಾರದೆಂದು ಮನವಿ ಮಾಡಿದ್ದರು.
ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದಾಗಲೂ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಕ್ಯಾಮರಾಗೆ ಪೋಸ್ ನೀಡಿದ್ದರು. ಈಗ ಮಗಳ ಪೋಟೋ ಹಂಚಿಕೊಂಡಿದ್ದಾರೆ.

ನಾಮಕರಣ ಸೇರಿದಂತೆ ಯಾವುದೇ ಶಾಸ್ತ್ರದ ಹಿಂಟ್ ನೀಡದೇ ನೇರವಾಗಿ ಅನುಷ್ಕಾ ಹಾಗೂ ವಿರಾಟ್ ಮಗಳ ಹೆಸರನ್ನು ಅನೌನ್ಸ್ ಮಾಡಿದ್ದಾರೆ.

ಇನ್ನು ವಿರುಷ್ಕಾ ದಂಪತಿ ಮಗಳ ಹೆಸರನ್ನು ಬಹಿರಂಗಪಡಿಸುತ್ತಿದ್ದಂತೆ ಜನರು ವಮಿಕಾ ಎಂಬ ಹೆಸರಿನ ಅರ್ಥ ಹುಡುಕಲು ಮುಗಿಬಿದ್ದಿದ್ದಾರೆ.

ವಮಿಕಾ ಎಂಬುದು ದುರ್ಗಾದೇವಿಯ ಹೆಸರಾಗಿದ್ದು ಅರ್ಧನಾರಿಶ್ವರ ಎಂಬ ಅರ್ಥವನ್ನು ನೀಡುತ್ತದೆ ಎನ್ನಲಾಗಿದೆ .

ವಮಿಕಾ ಜೊತೆ ಪೋಟೋ ಶೇರ್ ಮಾಡಿರುವ ಅನುಷ್ಕಾ, ನಾವು ನಮ್ಮ ಬದುಕನ್ನು ಪ್ರೀತಿ ಹಾಗೂ ಕೃತಜ್ಞತೆಯಿಂದ ಬದುಕಿದ್ದೇವೆ. ಆದರೆ ಈ ಪುಟ್ಟ ಕಂದ ನಮ್ಮ ಬದುಕನ್ನು ಮತ್ತೊಂದು ಎತ್ತರಕ್ಕೆ ಏರಿಸಿದೆ‌.ನಿಮ್ಮ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿ ಎಂದಿದ್ದಾರೆ

RELATED ARTICLES

Most Popular