ಭಾನುವಾರ, ಏಪ್ರಿಲ್ 27, 2025
HomeBreakingಜಾಹೀರಾತು ಲೋಕಕ್ಕೆ ಸ್ಟಾರ್ ಕ್ರಿಕೇಟರ್ ಪುತ್ರಿ...! ಮಗಳ ಸಾಧನೆಗೆ ಅಪ್ಪ ಏನಂದ್ರು ಗೊತ್ತಾ...?

ಜಾಹೀರಾತು ಲೋಕಕ್ಕೆ ಸ್ಟಾರ್ ಕ್ರಿಕೇಟರ್ ಪುತ್ರಿ…! ಮಗಳ ಸಾಧನೆಗೆ ಅಪ್ಪ ಏನಂದ್ರು ಗೊತ್ತಾ…?

- Advertisement -

ಕ್ರಿಕೆಟರ್ ಗಳು ಜಾಹೀರಾತು ಲೋಕದಲ್ಲಿ ಮಿಂಚೋದು ಕಾಮನ್. ಒಂದೆರಡು ಮ್ಯಾಚ್ ನಲ್ಲಿ ಹಿಟ್ ಆಟ ಪ್ರದರ್ಶಿಸಿದ್ರೇ ಸಾಕು ಬ್ರ್ಯಾಂಡ್ ಗಳು ಜಾಹೀರಾತು ಹಿಡಿದು ಮನೆಬಾಗಿಲಿಗೆ ಬರುತ್ತವೆ. ಆದರೇ ಇಲ್ಲಿ ಅಪ್ಪನ ಕ್ರಿಕೆಟ್ ಸಾಧನೆ ಗಿಂತ ಮಗಳ ಮುಗ್ಧತೆಯೇ ಆಕರ್ಷಣೀಯವಾಗಿದ್ದು, ಪುಟ್ಟ ಕಂದಮ್ಮ ಜಾಹೀರಾತು ಲೋಕದಲ್ಲಿ ಮೋಡಿ ಮಾಡ್ತಿದ್ದಾಳೆ.

ಭಾರತ ಕ್ರಿಕೆಟ್ ತಂಡದ ಬ್ಲ್ಯಾಸ್ಟಿಂಗ್ ಬ್ಯಾಟ್ಸಮನ್ ಆಗಿದ್ದ ಎಂ.ಎಸ್.ದೋನಿ ಕ್ರೀಡಾಂಗಣದಲ್ಲಿ ಮಿಂಚಿದ್ದರೇ ಅವರ ಪುತ್ರಿ ಜೀವಾ ದೋನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಕ್ರಿಯೆಟ್ ಮಾಡಿದ್ದಾರೆ.

ತಮ್ಮ ತುಂಟಾಟಗಳಿಂದ ಸಖತ್ ಫೇಮಸ್ ಅಗಿರುವ ಜೀವಾ ಇದೀಗ ತಂದೆ ಜೊತೆ ಜಾಹೀರಾತು ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಆ್ಯಡ್ ಸುಂದರವಾಗಿ ಮೂಡಿಬಂದಿದೆ.

ಬಹುತೇಕ ಮಕ್ಕಳ ಫೆವರಿಟ್ ಆಗಿರುವ ಒರಿಯಾ ಬಿಸ್ಕಿಟ್ ನ ಜಾಹೀರಾತಿಗಾಗಿ ಜೀವಾ ತಂದೆ ದೋನಿ ಜೊತೆ ಬಣ್ಣ ಹಚ್ಚಿದ್ದಾರೆ.

ಮಗಳ ಈ ಸಾಧನೆಯನ್ನು ಎಂ.ಎಸ್.ದೋನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದಿಂದ‌ ಹಂಚಿಕೊಂಡಿದ್ದು, ಮೈದಾನಕ್ಕೆ ಯಾರು ಇಳಿದಿದ್ದಾರೆ ನೋಡಿ ಎಂಬ ಬರಹದ ಜೊತೆಗೆ ಜೀವಾ ನಟನೆಯ ಜಾಹೀರಾತಿನ ತುಣುಕನ್ನು ಶೇರ್‌ಮಾಡಿದ್ದಾರೆ.

ಬಾಲ್ಯದಿಂದಲೂ ಸಖತ್ ಆಕ್ಟಿವ್ ಮತ್ತು ಅಟ್ರಾಕ್ಷನ್ ಬೇಬಿ ಆಗಿದ್ದ ಜೀವಾ ತನ್ನದೇ ಆದ ಸೋಷಿಯಲ್ ಮೀಡಿಯಾ ಖಾತೆಯನ್ನು ಹೊಂದಿದ್ದು ಅಲ್ಲಿ ಅವಳ ಬಾಲ್ಯದ ಹಲವು ವಿಡಿಯೋಗಳಿವೆ.

ಐಪಿಎಲ್ ಮ್ಯಾಚ್ ಗಳಿಗೂ ಹಾಜರಾಗುತ್ತಿದ್ದ ಜೀವಾ ಟೀಂ ಇಂಡಿಯಾದ ಎಲ್ಲ ಆಟಗಾರರ ಐಬಾಲ್ .ಸಧ್ಯ ಮಗಳೊಂದಿಗೆ ವೆಕೆಶನ್ ಎಂಜಾಯ್ ಮಾಡ್ತಿರೋ ಧೋನಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದು, ಐಪಿಎಲ್ ೧೩ ನೇ ಆವೃತ್ತಿಯಲ್ಲಿ ಆಡಿದ್ದರು.

RELATED ARTICLES

Most Popular