Suresh Raina: ತೆರೆಗೆ ಬರಲಿದೆ ಮತ್ತೊಬ್ಬ ಕ್ರಿಕೆಟರ್ ಕಹಾನಿ….!! ತಮ್ಮ ಪಾತ್ರಕ್ಕೆ ಇಬ್ಬರು ನಟರನ್ನು ಆಯ್ಕೆ ಮಾಡಿದ ಸುರೇಶ್ ರೈನಾ…!!

ಬಾಲಿವುಡ್ ನಲ್ಲಿ ಇತ್ತೀಚಿಗೆ ಬಯೋಪಿಕ್ ಗಳು ಭಾರಿ ಸದ್ದು ಮಾಡುತ್ತಿವೆ. ಅದರಲ್ಲೂ ಕ್ರಿಕೆಟರ್ ಲೈಫ್ ಸ್ಟೋರಿ ಸಖತ್ ಹಿಟ್ ಆಗುತ್ತಿರುವ ಬೆನ್ನಲ್ಲೇ ಸುರೇಶ್ ರೈನಾ ಬಯೋಪಿಕ್ ಕೂಡ ನಿರ್ಮಾಣಕ್ಕೆ ಸಿದ್ಧವಾಗ್ತಿದೆ.

ಸಚಿನ್ ತೆಂಡೂಲ್ಕರ್ ಹಾಗೂ ಎಂ.ಎಸ್.ದೋನಿ ಜೀವನಕತೆ ಚಿತ್ರವಾಗಿ ಕ್ರಿಕೆಟ್ ಪ್ರಿಯರನ್ನು ಸೆಳೆದಿತ್ತು. ಹೀಗಾಗಿ ಹಲವು ಕ್ರೀಡಾಪಟುಗಳ ಸಾಧನೆ ತೆರೆಗೆ ತರಲು ಸಿದ್ಧತೆ ನಡೆದಿದೆ. ಸುರೇಶ್ ರೈನಾ ಕತೆ ಕೂಡ ಸಿನಿಮಾ ರೂಪ ಪಡೆಯಲಿದ್ದು, ಸನ್ ಪಿಕ್ಚರ್ಸ್ ರೈನಾ ಸಿನಿಮಾ ನಿರ್ಮಾಣ ಮಾಡಲಿದೆ ಎನ್ನಲಾಗಿದೆ.

ಸನ್ ಪಿಕ್ಚರ್ಸ್ ಸುರೇಶ್ ರೈನಾ ಸ್ಟೋರಿ ತೆರೆಗೆ ತರಲು ಸಿದ್ಧವಾಗಿದ್ದು, ಟೈಟಲ್ ಇನ್ನೂ ರಿವೀಲ್ ಆಗಿಲ್ಲ.  ಈ ಮಧ್ಯೆ ನನ್ನ ಜೀವನ ಕತೆಯಲ್ಲಿ ನನ್ನ ಪಾತ್ರಕ್ಕೆ ದಕ್ಷಿಣ ಭಾರತದ ಇಬ್ಬರು ನಟರು ಸೂಕ್ತ ಎಂದು ರೈನಾ ಹೇಳಿದ್ದಾರೆ.

ತಮಿಳು ನಟ ಸೂರ್ಯ ಅಥವಾ ಮಲೆಯಾಳಂ ನಟ ದುಲ್ಕರ್ ಸಲ್ಮಾನ್ ನನ್ನ ಪಾತ್ರಕ್ಕೆ ಜೀವ ತುಂಬಬಲ್ಲರು ಎಂದು ನನಗನ್ನಿಸುತ್ತದೆ ಎಂದು ಸುರೇಶ್ ರೈನಾ ಇತ್ತೀಚಿಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಅಕ್ಷಯ ಕುಮಾರ್ ಅಥವಾ ರಣವೀರ್ ಸಿಂಗ್ ರೈನಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಸ್ವತಃ ರೈನಾ ತಮ್ಮ ಪಾತ್ರಕ್ಕೆ ಸೂರ್ಯ ಅಥವಾ ದುಲ್ಕರ್ ಸಲ್ಮಾನ್ ಹೆಸರನ್ನು ಆಯ್ಕೆ ಮಾಡಿದ್ದಾರೆ.

Absolute fanboy moment for Dulquer Salmaan as Suresh Raina mentions about Zoya Factor

ಸುರೇಶ್ ರೈನಾ ಜೊತೆ ತಮಿಳು ನಟ ಸೂರ್ಯ ತುಂಬ ಒಳ್ಳೆಯ ಬಾಂಧವ್ಯ ಹೊಂದಿದ್ದು, ರೈನಾ ಪಾತ್ರಕ್ಕೆ ಸೂರ್ಯ ಆಯ್ಕೆಯಾಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸದ್ಯದಲ್ಲೇ ಮತ್ತೊಂದು ಕ್ರಿಕೆಟ್ ಸ್ಟಾರ್ ಕಹಾನಿ ತೆರೆಗೆ ಬರಲಿದೆ.

Comments are closed.