SRH vs RCB 2024: ಐಪಿಎಲ್‌ 2024 ರಲ್ಲಿ ವಿರಾಟ್‌ ಕೊಹ್ಲಿ3 ನೇ ಅರ್ಧ ಶತಕ, 400 ರನ್‌ ಪೂರೈಸಿದ ಆಟಗಾರ

SRH vs RCB IPL 2024 Virat Kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮೂರನೇ ಅರ್ಧ ಶತಕ ಪೂರೈಸಿದ್ದಾರೆ

SRH vs RCB IPL 2024 Virat Kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB ) ತಂಡದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮೂರನೇ ಅರ್ಧ ಶತಕ ಪೂರೈಸಿದ್ದಾರೆ. ಅಷ್ಟೇ ಅಲ್ಲದೇ ಪ್ರಸಕ್ತ ಐಪಿಎಲ್‌ ಋತುವಿನಲ್ಲಿ 400 ರನ್‌ ಪೂರೈಸಿದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

SRH vs RCB IPL 2024 Virat Kohli 3rd Half Century, 400 Runs in IPL 2024
Image Credit to Original Source

ಐಪಿಎಲ್‌ನಲ್ಲಿ ಒಟ್ಟು ವಿರಾಟ್‌ ಕೊಹ್ಲಿ 245 ಪಂದ್ಯಗಳನ್ನು ಆಡಿದ್ದು, ಈ ಪೈಕಿ 8 ಶತಕ ಹಾಗೂ 52 ಅರ್ಧ ಶತಕದ ನೆರವಿನಿಂದ 7,642 ರನ್‌ ಬಾರಿಸಿದ್ದಾರೆ. ಅಷ್ಟೇ ಅಲ್ಲದೇ ಬೌಲಿಂಗ್‌ ದಾಳಿ ನಡೆಸಿ ಒಟ್ಟು 4 ವಿಕೆಟ್‌ ಪಡೆದುಕೊಂಡಿದ್ದಾರೆ. ಪ್ರಸಕ್ತ ಐಪಿಎಲ್‌ ಋತುವಿನಲ್ಲಿ ವಿರಾಟ್‌ ಕೊಹ್ಲಿ ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ.

2024ರ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಒಟ್ಟು 9 ಪಂದ್ಯಗಳನ್ನು ಆಡಿದ್ದು, ಒಂದು ಶತಕದ ನೆರವಿನಿಂದ 430 ರನ್‌ ಬಾರಿಸಿದ್ದಾರೆ. ಇದರಲ್ಲಿ 3 ಅರ್ಧ ಶತಕ ಒಳಗೊಂಡಿದೆ. 8 ಪಂದ್ಯಗಳಲ್ಲಿ 349 ರನ್‌ ಬಾರಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ರುತುರಾಜ್‌ ಗಾಯಕ್ವಾಡ್‌ ಎರಡನೇ ಅತೀ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ರಿಷಬ್‌ ಪಂತ್‌ 9 ಪಂದ್ಯಗಳಲ್ಲಿ 342 , ಗುಜರಾತ್‌ ಟೈಟಾನ್ಸ್‌ ತಂಡದ ಆಟಗಾರ ಸಾಯಿ ಸುದರ್ಶನ್‌ 9  ಪಂದ್ಯಗಳಲ್ಲಿ 334 ರನ್‌ ಗಳಿಸಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ಐಪಿಎಲ್‌ನಲ್ಲಿ ಆರ್ಭಟಿಸಿದ ಸುನಿಲ್‌ ನರೈನ್‌ : T20 ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡಿಸ್‌ ಪರ ಆಡೋದಿಲ್ಲ ಅಂದಿದ್ಯಾಕೆ ?

ಕಳೆದ ಐಪಿಎಲ್‌ ಋತುವಿನಲ್ಲಿ ವಿರಾಟ್‌ ಕೊಹ್ಲಿ 14 ಪಂದ್ಯಗಳನ್ನು ಆಡಿದ್ದು  639 ರನ್‌ ಬಾರಿಸಿದ್ದರು. ಇದರಲ್ಲಿ 2 ಶತಕ ಹಾಗೂ 6 ಅರ್ಧ ಶತಕ ಒಳಗೊಂಡಿದೆ. 2016ರಲ್ಲಿ ವಿರಾಟ್‌ ಕೊಹ್ಲಿ 16ಪಂದ್ಯಗಳನ್ನು ಆಡಿದ್ದು, 4 ಶತಕ, 7 ಅರ್ಧ ಶತಕದ ನೆರವಿನಿಂದ ಬರೋಬ್ಬರಿ 973 ರನ್‌ ಬಾರಿಸಿದ್ದರು. ಐಪಿಎಲ್‌ನಲ್ಲಿ ಕೊಹ್ಲಿ ಒಂದು ಋತುವಿನಲ್ಲಿ ಬಾರಿಸಿದ ಅತ್ಯಧಿಕ ರನ್‌ ಇದಾಗಿದೆ. ಅಷ್ಟೇ ಅಲ್ಲ, ಇದು ಐಪಿಎಲ್‌ನಲ್ಲಿ ಆಟಗಾರನೋರ್ವ ಗಳಿಸಿದ ಅತ್ಯಧಿಕ ರನ್‌ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

SRH vs RCB IPL 2024 Virat Kohli 3rd Half Century, 400 Runs in IPL 2024
Image Credit to Original Source

ಇದನ್ನೂ ಓದಿ : ಎಂಎಸ್‌ ಧೋನಿ ದಾಖಲೆಯನ್ನೇ ಹಿಂದಿಕ್ಕಿದ ಕೆಎಲ್‌ ರಾಹುಲ್‌ : ಐಪಿಎಲ್‌ ಇತಿಹಾಸದಲ್ಲೇ ಈ ದಾಖಲೆಯನ್ನೂ ಯಾರು ಮಾಡಿಲ್ಲ

ಐಪಿಎಲ್‌ ಋತುವಿನಲ್ಲಿ ಆಟಗಾರನೋರ್ವ ಗಳಿಸಿ ಅತ್ಯಧಿಕ ರನ್‌ ದಾಖಲೆಯ ಪಟ್ಟಿಯಲ್ಲಿ ಶುಭಮನ್‌ ಗಿಲ್‌ 2 ನೇ ಸ್ಥಾನದಲ್ಲಿದ್ದಾರೆ. ಗಿಲ್‌ 17 ಪಂದ್ಯಗಳಲ್ಲಿ 890 ರನ್‌ ಗಳಿಸಿದ್ರೆ, ಜೋಸ್‌ ಬಟ್ಲರ್‌ 863 ರನ್‌ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಡೇವಿಡ್‌ ವಾರ್ನರ್‌ ೪ನೇ ಸ್ಥಾನದಲ್ಲಿದ್ರೆ, ಕೇನ್‌ ವಿಲಿಯಂಸನ್‌ 5ನೇ ಸ್ಥಾನ ಹಾಗೂ ಕ್ರಿಸ್‌ ಗೇಲ್‌ 6ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಟ್ರಾವಿಸ್ ಹೆಡ್ ಆರ್ಭಟಕ್ಕೆ ಮಂಕಾದ ಆರ್‌ಸಿಬಿ : IPL ನಲ್ಲಿ4 ನೇ ವೇಗದ ಶತಕ ದಾಖಲು

SRH vs RCB IPL 2024: Virat Kohli 3rd Half Century, 400 Runs in IPL 2024

Comments are closed.