ಅಪ್ಪನ ಮೂವಿ ಮಗನಿಂದ ಟ್ರೇಲರ್ ಲಾಂಚ್….!! ಜ್ಯೂನಿಯರ್ ಚಿರು ಬಿಡುಗಡೆ ಮಾಡಲಿದ್ದಾರೆ ರಾಜಾಮಾರ್ತಾಂಡ….!!

ರಥಸಪ್ತಮಿಯ ಶುಭದಿನದಂದೇ ಸರ್ಜಾ ಕುಟುಂಬಕ್ಕೆ ಎರಡೆರಡು ಸಿಹಿಸುದ್ದಿ ಕಾದಿದೆ. ಒಂದೆಡೆ ಪೊಗರು ಅದ್ದೂರಿಯಾಗಿ ತೆರೆ ಕಾಣ್ತಿದ್ದರೇ ಇನ್ನೊಂದೆಡೆ ಚಿರು ಕೊನೆ ಚಿತ್ರಕ್ಕೆ ಪುತ್ರನೇ ಟ್ರೇಲರ್ ಲಾಂಚ್ ಮಾಡಲಿದ್ದಾನೆ.

ಸರ್ಜಾ ಕುಟುಂಬಕ್ಕೆ ನಾಳೆ ಅತ್ಯಂತ ಮಹತ್ವದ ಹಾಗೂ ಖುಷಿಯ ದಿನ. ಒಂದೆಡೆ ಆಕ್ಷ್ಯನ್ ಪ್ರಿನ್ಸ್ ಮೂರೂವರೆ ವರ್ಷಗಳ ಕಾಲ ಶ್ರಮಿಸಿದ ಪೊಗರು ಸಿನಿಮಾ ತೆಲುಗು,ತಮಿಳು ಹಾಗೂ ಕನ್ನಡದಲ್ಲಿ ತೆರೆ ಕಾಣುತ್ತಿದೆ.

ಇನ್ನೊಂದೆಡೆ ನಾಳೆಯೇ ದಿ.ಚಿರಂಜೀವಿ ಸರ್ಜಾ ಅಭಿನಯದ ರಾಜಾಮಾರ್ತಾಂಡ್ ಚಿತ್ರದ ಟ್ರೇಲರ್ ತೆರೆ ಕಾಣಲಿದೆ. ಟ್ರೇಲರ್ಲಾಂಚ್ ನಲ್ಲೂ ಚಿತ್ರತಂಡ ವಿಭಿನ್ನತೆ ಮೆರೆದಿದ್ದು ಅಪ್ಪನ ಕೊನೆ ಚಿತ್ರದ ಟ್ರೇಲರ್ ನ್ನು ಚಿರು ಪುತ್ರ ಜ್ಯೂನಿಯರ್ ಚಿರುವಿನಿಂದ ರಿಲೀಸ್ ಮಾಡಿಸಲಿದೆ.

ಚಿತ್ರತಂಡ ಮೇಘನಾ ರಾಜ್ ಹಾಗೂ ಸುಂದರ ರಾಜ್ ಭೇಟಿ ಮಾಡಿ ಮನವಿ ಮಾಡಿದ್ದು ನಾಳೆ 7 ಗಂಟೆಗೆ ಅಪ್ಪನ ಟ್ರೇಲರ್ ಲಾಂಚ್ ಮಾಡೋದನ್ನು ಮೇಘನಾ ರಾಜ್ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ರಾಜಾಮಾರ್ತಾಂಡ ಚಿರು ಅಭಿನಯದ ಕೊನೆಯ ಚಿತ್ರವಾಗಿದ್ದು ಈ ಚಿತ್ರದ ಡಬ್ಬಿಂಗ್ ಧ್ರುವ್ ಸರ್ಜಾ ಮುಗಿಸಿಕೊಟ್ಟಿದ್ದಾರೆ.

ಆನಂದ್ ಆಡಿಯೋದಲ್ಲಿ ಟ್ರೇಲರ್ ಲಾಂಚ್ ಆಗಲಿದೆ. ರಾಮನಾರಾಯಣ ನಿರ್ಮಾಣದ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾಗ ಚಿರು ನಿಧನರಾಗಿದ್ದು ಧ್ರುವ್ ಸರ್ಜಾ ಹಾಗೂ ದರ್ಶನ್ ಚಿತ್ರಕ್ಕೆ ವಾಯ್ಸ್ ನೀಡುವ ಮೂಲಕ ಡಬ್ಬಿಂಗ್ ಮುಗಿಸಿಕೊಟ್ಟಿದ್ದರು.

ಇದೀಗ ಧ್ರುವ್ ಸರ್ಜಾ ಚಿತ್ರ ಬಿಡುಗಡೆಯಂದೇ ಚಿತ್ರದ ಟ್ರೇಲರ್ ಲಾಂಚ್ ಆಗಲಿದ್ದು ಪೊಗರು ಸಿನಿಮಾ ದ ಇಂಟರವೆಲ್ ನಲ್ಲಿ ರಾಜಾಮಾರ್ತಾಂಡ ಟ್ರೇಲರ್ ಪ್ಲೇ ಅಗಲಿದೆ.

Comments are closed.