ಬೆಂಗಳೂರು : ಡ್ರಗ್ಸ್ ಮಾಫಿಯಾದ ಜಾಲ ಬೇಧಿಸುತ್ತಿದ್ದಂತೆಯೇ ಸ್ಯಾಂಡಲ್ ವುಡ್ ನಲ್ಲೀಗ ಅಲ್ಲೋಲ ಕಲ್ಲೋಲವಾಗುತ್ತಿದೆ. ಅದ್ರಲ್ಲೂ ಡ್ರಗ್ಸ್ ಮಾಫಿಯಾದ ಜೊತೆಗೆ ಕೈ ಜೋಡಿಸಿದ್ದ ಒಬ್ಬೊಬ್ಬರದ್ದೇ ಹೆಸರುಗಳು ಕೇಳಿಬರುತ್ತಿದ್ದು, ಇದೀಗ ಡ್ರಗ್ ಡೀಲರ್ ಅನಿಕಾ ಜೊತೆ ಸಂಪರ್ಕ ಹೊಂದಿರುವುದು ನಿಜ ಎಂದು ಬಿಗ್ ಬಾಸ್ ಸ್ಪರ್ಧಿ ಆದಂ ಪಾಷಾ ಒಪ್ಪಿಕೊಂಡಿದ್ದಾರೆ.

ಕನ್ನಡ ಖ್ಯಾತ ಡ್ಯಾನ್ಸ್ ಶೋನಲ್ಲಿ ಭಾಗಿಯಾಗಿದ್ದ ಡ್ಯಾನ್ಸರ್ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅದಂ ಪಾಷಾ ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.

ಕಳೆದೊಂದು ವರ್ಷದ ಹಿಂದೆ ಕಮ್ಮನಹಳ್ಳಿಯ ಕ್ಲಬ್ ನಲ್ಲಿ ಅನಿಕಾ ಪರಿಚಯ ಆಗಿದ್ದಳು. ಡ್ಯಾನ್ಸರ್ ಆಗಿದ್ದರಿಂದಾಗಿ ಕ್ಲಬ್ ಗೆ ಸಾಲ್ಸಾ ಡ್ಯಾನ್ಸ್ ಮಾಡುವುದಕ್ಕೆ ವೇಳೆಯಲ್ಲಿ ಮ್ಯೂಸಿಕ್ ಕ್ಲಬ್ ಗೆ ಹೋಗಿದ್ದಾಗ ಅನಿಕಾ ಸಿಕ್ಕಿದ್ದಳು. ಆದರೆ ಅನಿಖಾ ತನ್ನ ಹೆಸರ್ನು ನಿಕ್ಕಿ ಎಂದು ಪರಿಚಯಿಸಿಕೊಂಡಿದ್ದಳು.

ತನಗೆ ಆರ್ಥಿಕ ಸಮಸ್ಯೆಯಿದ್ದಾಗ ಅನಿಕಾ ತನಗೆ ಹಣಕಾಸಿನ ನೆರವು ನೀಡಿದ್ದಾಳೆ. ನನಗೆ ಯಾವುದೇ ಸೆಲೆಬ್ರಿಟಿಗಳ ಜೊತೆಗೆ ಸಂಪರ್ಕವೂ ಇಲ್ಲ. ಅನಿಕಾ ಜೊತೆ ಯಾರು ನಂಟು ಹೊಂದಿದ್ದಾರೆನ್ನುವ ಬಗ್ಗೆ ಮಾಹಿತಿಯೂ ಇಲ್ಲ. ನಟಿ ನಯನಾ ಮನೆಯಲ್ಲಿ ನಡೆದ ಪಾರ್ಟಿಗೆ ನಾನು ಹೋಗಿದ್ದೆ.

ತದನಂತರದಲ್ಲಿ ನಾನು ಯಾವುದೇ ಪಾರ್ಟಿಯಲ್ಲೂ ಭಾಗಿಯಾಗಿಲ್ಲ. ತಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಹೀಗಾಗಿ ನಾನು ಯಾವುದಕ್ಕೂ ಹೆದರಿಕೊಳ್ಳುವುದಿಲ್ಲ ಎಂದಿದ್ದಾರೆ.