Niharika bhargava:ಕೈಯಲ್ಲಿರೋ ಕೆಲಸ ಬಿಟ್ಟು ಯುವತಿ ಉಪ್ಪಿನಕಾಯಿ ಉದ್ಯಮಕ್ಕೆ ಕಾಲಿಟ್ಟಾಕೆ ಈಗ ಕೋಟ್ಯಾಧೀಶ್ವರಿ…!!

ರಾಷ್ಟ್ರ ರಾಜಧಾನಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ಪಡೆದ ಆ ಯುವತಿಗೆ ಕೈತುಂಬ ಸಂಬಳ ಬರುವ ಕೆಲಸವಿತ್ತು. ಆದರೆ ಆಕೆಯನ್ನು ಸೆಳೆದಿದ್ದು ಮಾತ್ರ ಅಪ್ಪನ ಕೈರುಚಿಯ ಉಪ್ಪಿನಕಾಯಿ. ಅಪ್ಪ ಹವ್ಯಾಸವಾಗಿ ಸಿದ್ಧಪಡಿಸುತ್ತಿದ್ದ ಉಪ್ಪಿನಕಾಯಿ ಮಾರಾಟವನ್ನು ಉದ್ಯಮವಾಗಿ ರೂಪಿಸಿದ ಆಕೆ ಈಗ ಕೋಟ್ಯಾಂತರ ರೂಪಾಯಿ ವ್ಯೆವಹಾರ ನಡೆಸುವ ಉದ್ಯಮಿ.

ದೆಹಲಿಯ 27 ವರ್ಷದ ನಿಹಾರಿಕಾ ಭಾರ್ಗವ್ ಇಂತಹದೊಂದು ಸಾಧನೆ ಮಾಡಿದ ಯುವತಿ.  ದ್ ಲಿಟ್ಲ್ ಫಾರ್ಮ್ ಎಂಬ ಹೆಸರಿನಲ್ಲಿ ಉಪ್ಪಿನಕಾಯಿ ಉದ್ಯಮ ಆರಂಭಿಸಿದ ನಿಹಾರಿಕಾ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಟರ್ನ್ ಓವರ್ ನಡೆಸುತ್ತಾರೆ.

ತಂದೆ ಹವ್ಯಾಸಕ್ಕೆ ಸಿದ್ಧಪಡಿಸುತ್ತಿದ್ದ ಉಪ್ಪಿನಕಾಯಿ ತಯಾರಿಕೆಯನ್ನು ಕಲಿತ ನಿಹಾರಿಕಾ, ಅದರ ಮಾರುಕಟ್ಟೆ ಸೃಷ್ಟಿಸಲು ಸಾಕಷ್ಟು ಪ್ರಯತ್ನಿಸಿದರು. ಆನ್ ಲೈನ್ ಮಾರಾಟ ಹಾಗೂ ದೆಹಲಿಯ ಬೀದಿಗಳಲ್ಲಿ ಉಪ್ಪಿನಕಾಯಿ ಮೇಳ ನಡೆಸಿ ಯಶಸ್ವಿಯಾದರು.

ಅಷ್ಟೇ ಅಲ್ಲ ಜನರು ಮನೆಯಲ್ಲೇ ಸಿದ್ಧವಾಗುವ ಈ ಉಪ್ಪಿನಕಾಯಿಯನ್ನು ಪ್ರೀತಿಯಿಂದ ಸ್ವೀಕರಿಸಿ ಉದ್ಯಮ ಬೆಳೆಯಲಾರಂಭಿಸುತ್ತಿದ್ದಂತೆ ಮಾವಿನಕಾಯಿ ಪೊರೈಕೆ ಸೇರಿದಂತೆ ಅಗತ್ಯ ಕಚ್ಚಾವಸ್ತುಗಳ ಬೆಲೆ ಏರಿಕೆಯನ್ನು ಗಮನಿಸಿದರು.  ತಮ್ಮ ಸ್ವಂತ  ಊರು ಕಜುರಾಹೋದಲ್ಲಿರುವ ಜಮೀನಿನಲ್ಲಿ ಉಪ್ಪಿನ ಕಾಯಿಗೆ ಅಗತ್ಯ ವಸ್ತುಗಳನ್ನು ತಾವೇ ಬೆಳೆಯಲಾರಂಭಿಸಿದರು.

ಮಾವು,ನೆಲ್ಲಿ,ಶುಂಠಿ,ಮೆಣಸಿನಕಾಯಿಗಳನ್ನು ಬೆಳೆದು ಉದ್ಯಮಕ್ಕೆ ಇನ್ನಷ್ಟು ವೇಗ ತಂದರು. ಈಗ ನಿಹಾರಿಕಾ ತಮ್ಮೊಂದಿಗೆ ಸಮಾನಾಸಕ್ತ ಜನರ ತಂಡ ಕಟ್ಟಿದ್ದು, ಬರೋಬ್ಬರಿ 50 ವೈರೈಟಿ ಉಪ್ಪಿನಕಾಯಿ ಸಿದ್ಧಪಡಿಸುತ್ತಾರೆ.

ದೆಹಲಿಯಲ್ಲಿ ಹೈಜೈನಿಕ್ ಆಗಿ ಉಪ್ಪಿನಕಾಯಿ ಸಿದ್ಧಪಡಿಸುವುದು, ಪ್ಯಾಕಿಂಗ್ ಮಾರಾಟ ನಡೆಯುತ್ತಿದ್ದು, ಇದನ್ನು ನಿಹಾರಿಕಾ ಸ್ವತಃ ನೋಡಿಕೊಳ್ಳುತ್ತಾರೆ. ಐಟಿ-ಬಿಟಿ ಹಿಂದೆ ಬಿದ್ದು ದೇಶ ತೊರೆಯೋ ಯುವಜನತೆಯ ನಡುವಲ್ಲಿ ನಿಹಾರಿಕಾ ಸಾಧನೆ ವಿಭಿನ್ನವಾಗಿದ್ದು, ಶ್ಲಾಘನೆಗೆ ಪಾತ್ರವಾಗಿದೆ.

Comments are closed.