ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕಾಫಿಡೇ ಸಂಸ್ಥಾಪಕ ದಿ.ಸಿದ್ದಾರ್ಥ್ ಅವರ ಮಗ ಅಮರ್ಥ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯ ನಿಶ್ಚಿತಾರ್ಥ ಸರಳವಾಗಿ ನೆರವೇರಿತು.

ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅವರಿಬ್ಬರು ರಾಜಕೀಯ ಗುರು – ಶಿಷ್ಯರು, ಇನ್ನೊಂದೆಡೆ ಡಿಕೆಶಿ ಹಾಗೂ ದಿ.ಸಿದ್ದಾರ್ಥ್ ಆತ್ಮೀಯ ಸ್ನೇಹಿತರು. ಎರಡೂ ಕುಟುಂಬದ ಜೊತೆ ಸಾಕಷ್ಟು ಅನ್ಯೋನ್ಯತೆಯಿತ್ತು.

ಹೀಗಾಗಿಯೇ ಹಿರಿಯರೇ ಸರಿ ಅಮರ್ಥ್ಯ ಹಾಗೂ ಐಶ್ವರ್ಯ ಮದುವೆಯನ್ನು ನಿಶ್ಚಯ ಮಾಡಿದ್ದು, ಅಲ್ಲದೇ ಜೂನ್ 12ರಂದು ತಾಂಬೂಲ ಶಾಸ್ತ್ರವನ್ನು ಮುಗಿಸಿಕೊಂಡಿದ್ದರು.

ಇದೀಗ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸರಳವಾಗಿಯೇ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಐಶ್ವರ್ಯ ಹಾಗೂ ಅಮರ್ಥ್ಯ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚತಾರ್ಥವನ್ನು ಮಾಡಿಕೊಂಡಿದ್ದಾರೆ. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಮದುವೆ ನೆರವೇರುವ ಸಾಧ್ಯತೆಯಿದೆ.