ನವದೆಹಲಿ : ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಟ್ರಂಪ್ ಸ್ವಾಗತಿಸೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ ಗೆ ಭೇಟಿ ನೀಡಿದ್ದಾರೆ. ವಿಶ್ವದ ಅತೀ ದೊಡ್ಡ ಮೊಟೆರಾ ಕ್ರೀಡಾಂಗಣವನ್ನ ಉದ್ಘಾಟಿಸಲಿರೋ ಟ್ರಂಪ್ ವಿಶ್ವವಿಖ್ಯಾತ ತಾಜ್ ಮಹಲ್ ಗೂ ಭೇಟಿ ನೀಡಲಿದ್ದಾರೆ. ಟ್ರಂಪ್ ಭೇಟಿಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಡೊನಾಲ್ಡ್ ಟ್ರಂಪ್ ಭಾರತ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಅಮೇರಿಕಾದ ವೈಟ್ ಹೌಸ್ ನಿಂದ ಟ್ರಂಪ್ ಹೊರಟಿರೋ ವಿಡಿಯೋ ಬಿಡುಗಡೆ ಮಾಡಿರೊ ಡೊನಾಲ್ಡ್ ಟ್ರಂಪ್ ಸತತವಾಗಿ ಟ್ವೀಟ್ ಮಾಡುತ್ತಿದ್ದು, ಭಾರತ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೊಟೆರಾ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಪ್ರೇಮ ಸ್ಮಾರಕಕ್ಕೆ ಟ್ರಂಪ್ ಭೇಟಿ ನೀಡೋ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ತಾಜ್ ಮಹಲ್ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಕ್ಷಣಗಣನೆ : ಅಹಮದಾಬಾದ್ ಗೆ ಮೋದಿ, ಪ್ರೇಮಸೌಧಕ್ಕೂ ಭೇಟಿ
- Advertisement -